ಆಕ್ಸಿಜನ್ ಮಟ್ಟ ಸುಧಾರಿಸುವ ಪ್ರೋನಿಂಗ್‌ ವ್ಯಾಯಾಮದ ಬಗ್ಗೆ ಇಲ್ಲಿದೆ ವಿವರ

1 min read
Improve Oxygen Level

ಆಕ್ಸಿಜನ್ ಮಟ್ಟ ಸುಧಾರಿಸುವ ಪ್ರೋನಿಂಗ್‌ ವ್ಯಾಯಾಮದ ಬಗ್ಗೆ ಇಲ್ಲಿದೆ ವಿವರ

ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕೊರೋನಾ ಎರಡನೇ ಅಲೆ ಉಸಿರಾಟದ ವ್ಯವಸ್ಥೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಉಸಿರಾಟದ ತೊಂದರೆ ಮತ್ತು ಆಮ್ಲಜನಕದ ಮಟ್ಟ ಕಡಿಮೆಯಾಗುತ್ತಿದೆ.
ಮನುಷ್ಯನ ದೇಹದ ಆಕ್ಸಿಜನ್ ಮಟ್ಟವು ಸಾಮಾನ್ಯವಾಗಿ 95 ರಷ್ಟು ಅಥವಾ ಅದಕ್ಕಿಂತ ಹೆಚ್ಚಿರಬೇಕು ಎಂದು ತಜ್ಞರು ಸೂಚಿಸಿದ್ದಾರೆ.
ಕೋವಿಡ್ -19 ರೋಗಿಗಳಲ್ಲಿ ಆಮ್ಲಜನಕದ ಮಟ್ಟವನ್ನು ಸುಧಾರಿಸಲು ವೈದ್ಯರು ಪ್ರೋನಿಂಗ್‌ ವ್ಯಾಯಾಮಗಳನ್ನು ಸೂಚಿಸುತ್ತಿದ್ದಾರೆ.

Improve Oxygen Level

ಪ್ರೋನಿಂಗ್‌ ಎಂದರೇನು? ಇದನ್ನು ಹೇಗೆ ಮಾಡುವುದು?

ಪ್ರೋನಿಂಗ್‌’ ಎಂಬುವುದು ಉಸಿರಾಟದ ವ್ಯಾಯಾಮವಾಗಿದ್ದು, ಹೀಗೆ ಮಾಡುವುದರಿಂದ ಉಸಿರಾಟ ಸುಗಮವಾಗುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಸರಿಯಾದ ಸಮಯಕ್ಕೆ ಪ್ರೋನಿಂಗ್‌ ಮಾಡುವುದರಿಂದ ಹಲವು ಜೀವಗಳನ್ನು ಉಳಿಸಬಹುದು.

ಈ ವ್ಯಾಯಾಮ ಮಾಡುವಾಗ, ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ರೋಗಿಗಳು ಹೊಟ್ಟೆಯ ಮೇಲೆ ಮಲಗಬೇಕು. ಪ್ರೋನಿಂಗ್ ವ್ಯಾಯಾಮಗಳು ತಕ್ಷಣದ ಪ್ರಯೋಜನಗಳನ್ನು ನೀಡುತ್ತವೆ ಎಂದು ಹೇಳಲಾಗಿದೆ.
ಚಾಪೆ ಅಥವಾ ಮಂಚದ ಮೇಲೆ ದಿಂಬನ್ನು ಇರಿಸಿ ಅದರ ಮೇಲೆ ಎದೆ ಬರುವಂತೆ ಬೋರಲಾಗಿ ಮಲಗಬೇಕು. ನಂತರ ಕುತ್ತಿಗೆಯನ್ನು ಒಂದು ಕಡೆ ತಿರುಗಿಸಿ ಚೆನ್ನಾಗಿ ಉಸಿರಾಡಬೇಕು. ಇದನ್ನೇ ಪ್ರೋನಿಂಗ್‌ ಭಂಗಿ ಎನ್ನುತ್ತಾರೆ.
Improve Oxygen Level

ದಿನಕ್ಕೆ 16-18 ಗಂಟೆಗಳ ಕಾಲ ಈ ಪ್ರಕ್ರಿಯೆಯನ್ನು ನಡೆಸಬೇಕು. ಕೋವಿಡ್-19 ಸೋಂಕಿನ ‌ಪ್ರಾರಂಭಿಕ ಹಂತದಲ್ಲಿದ್ದವರಿಗೆ ಈ ಚಿಕಿತ್ಸಾ ವಿಧಾನ ಫಲಿಸುತ್ತಿದ್ದು, ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ

ಆದರೆ ಈ ವ್ಯಾಯಾಮ ಮಾಡುವ ಮೊದಲು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು.

ಕೋವಿಡ್ ರೋಗಿಗಳಲ್ಲಿ ಉಸಿರಾಟದ ತೊಂದರೆ ಅಥವಾ ಆಮ್ಲಜನಕದ ಮಟ್ಟ 94ಕ್ಕಿಂತ ಕಡಿಮೆ ಯಾದರೆ ಮಾತ್ರ ಇದನ್ನು ಮಾಡಬೇಕು.

ಊಟವಾದ ಒಂದು ಗಂಟೆಯ ಬಳಿಕ ಈ ವ್ಯಾಯಾಮ ಮಾಡಬೇಕು.

ಗರ್ಭಿಣಿಯರು, ಹೃದಯ ರೋಗಿಗಳು ಅಥವಾ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವವರು ಈ ವ್ಯಾಯಾಮ ಮಾಡಬಾರದು.

ಇದು ಉಸಿರಾಟ ಸುಗಮವಾಗಿ ನಡೆಯಲು ಮತ್ತು ದೇಹಕ್ಕೆ ಚೆನ್ನಾಗಿ ಆಮ್ಲಜನಕ ಪೂರೈಕೆಯಾಗುವಂತೆ ನೋಡಿಕೊಳ್ಳಲು ಜಗತ್ತಿನಾದ್ಯಂತ ವೈದ್ಯರು ಸೂಚಿಸುವ ಭಂಗಿಯಾಗಿದೆ.

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd