ಸಮುದ್ರ ತೀರಗಳಿಂದ ಸುತ್ತುವರೆದಿರುವ ಸುಂದರ ರಾಷ್ಟ್ರ ಬ್ರೆಜಿಲ್…! ಇಲ್ಲಿದೆ ಒಂದು ಅಪಾಯಕಾರಿ ದ್ವೀಪ – ಹೋದವರು ವಾಪಸ್ ಬರಲ್ಲಾ..!
ಜಿಲ್… ಸೌತ್ ಅಮೆರಿಕಾದಲ್ಲಿ ಸ್ಥಿತವಾಗಿರುವ ಸುಂದರ ಸಮುದ್ರ ತೀರಗಳಿಂದ ಸುತ್ತುವರೆದಿರುವ ರಾಷ್ಟ್ರ.. ಈ ದೇಶದಲ್ಲಿ ಪೋರ್ಚುಗೀಸ್ ಬಾಷೆಯನ್ನ ಜನ ಮಾತನಾಡ್ತಾರೆ. ವಿಶ್ವದ ಅತಿ ಹೆಚ್ಚು ಗಿಡಮರಗಳು ಈ ದೇಶದಲ್ಲಿದೆ.. ಇವತ್ತು ಬ್ರೆಜಿಲ್ ದೇಶದ ಅನೇಕ ಇಂಟರೆಸ್ಟಿಂಗ್ ವಿಚಾರಗಳ ಬಗ್ಗೆ ನಾವು ತಿಳಿಯೋಣ.
ಬ್ರೆಜಿಲ್ ನ ರಾಜಧಾನಿ – ಬ್ರೆಸಿಲಿಯಾ – ಅಂದ್ಹಾಗೆ ಈ ನಗರನ್ನ ಕೇವಲ 41 ದಿನಗಳಲ್ಲಿಯೇ ನಿರ್ಮಾಣ ಮಾಡಿ ಮುಗಿಸಲಾಗಿರೋದು ವಿಶೇಷ.. ಇದಕ್ಕೂ ಮುನ್ನ ಸಮುದ್ರ ಕಿನಾರೆಯಲ್ಲಿ ಸ್ಥಿತವಾಗಿರುವ ರಿಯೋ ದಿ ಜೆನೆರಿಯೋ ಆಗಿತ್ತು.
ಬ್ರೆಜಿಲ್ ಕರೆನ್ಸಿ – ಬ್ರೆಜಿಲಿಯನ್ ರಿಯಲ್
ಬ್ರೆಜಿಲ್ ನ ಒಟ್ಟು ಜನಸಂಖ್ಯೆ ಸುಮಾರು 21 ಕೋಟಿ – ಜನಸಂಖ್ಯೆಯಲ್ಲಿ ವಿಶ್ವದ 6 ನೇ ದೊಡ್ಡ ದೇಶ. ಮೊದಲನೇಯದ್ದು ಕೊರೊನಾ ತವರು ಚೈನಾ , 2ನೇ ಸ್ಥಾನದಲ್ಲಿ ಭಾರತವಿದೆ.
ಈ ದೇಶವು ಸುಮಾರು 83 ಲಕ್ಷದ 58 ಸಾವಿರದ 140 ಕಿ.ಮೀನಲ್ಲಿವಸ್ತಾರಗೊಂಡಿದೆ.. ಇಲ್ಲಿನ 88 % ಜನರು ನಗರಗಳಲ್ಲಿ ವಾಸವಾಗಿದ್ದು, ಕೇವಲ 12 % ರಷ್ಟು ಜನರು ಮಾತ್ರ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಈ ದೇಶ ಸುಮಾರು 322 ವರ್ಷಗಳ ಕಾಲ (1500-1822) ಪೋರ್ಚುಗೀಸರ ಅಧೀನದಲ್ಲಿ ಇತ್ತು..
ಇನ್ನೂ ದಕ್ಷಿಣ ಅಮೆರಿಕಾದಲ್ಲಿ ಸ್ಪಾನಿಷ್ ಮಾತನಾಡದೇ ಇರೋ ಏಕಮಾತ್ರ ದೇಶ ಬ್ರೆಜಿಲ್. ಇಲ್ಲಿನ ಜನರು ಪೋರ್ಚುಗೀಸ್ ಬಾಷೆಯನ್ನೇ ಮಾತನಾಡುತ್ತಾರೆ..
ಇಡೀ ವಿಶ್ವದಲ್ಲಿ ಅತಿ ಹೆಚ್ಚು ಏರ್ಪೋಟ್ ಗಳನ್ನು ಹೊಂದಿರುವ 2ನೇ ದೇಶ ಬ್ರೆಜಿಲ್.. ಇಲ್ಲಿ 4 ಸಾವಿರದ 23 ವಿಮಾನ ನಿಲ್ದಾಣಗಳಿವೆ. ಮೊದಲನೇ ಸ್ಥಾನದಲ್ಲಿ ಅಮೆರಿಕಾವಿದೆ.. ಮೆಕ್ಸಿಕೋ 3ನೇ ಸ್ಥಾನದಲ್ಲಿದೆ.
ಕಾಫಿ ಉತ್ಪಾದನೆಯಲ್ಲಿ ಈ ದೇಶ ವಿಶ್ವದಲ್ಲಿ ನಂಬರ್ ಸ್ಥಾನದಲ್ಲಿದೆ.. ಇಲ್ಲಿನ ಕಾಫಿ ಕೂಡ ವರ್ಲ್ಡ ಫೇಮಸ್. ಈ ದೇಶದ ಬಹುದೊಡ್ಡ ಆರ್ಥಿಕ ಮೂಲವೂ ಹೌದು.. ಅಷ್ಟೇ ಅಲ್ಲ ಕಬ್ಬು ಬೆಳೆ ಉತ್ಪಾದನೆಯಲ್ಲಿ ನಂಬರ್ 1 ಬ್ರೆಜಿಲ್. ಇಡೀ ವಿಶ್ವದಲ್ಲಿ ಅತಿ ಹೆಚ್ಚು ಕಬ್ಬನ್ನ ಈ ದೇಶದಲ್ಲಿ ಬೆಳೆಯಲಾಗುತ್ತೆ.. ಮೊದಲನೇ ಸ್ಥಾನದಲ್ಲಿ ಬ್ರೆಜಿಲ್ ಇದ್ರೆ 2ನೇ ಸ್ಥಾನದಲ್ಲಿದೆ ನಮ್ಮ ಭಾರತ.
ಇಲ್ಲಿನ ಪ್ರತಿಯೊಬ್ಬ ಪ್ರಜೆಗೂ ಮತದಾನ ಮಾಡುವುದು ಕಡ್ಡಾಯ.. ಹಾಗೆ ಮತದಾನ ಮಾಡದೇ ಹೋದ ಪಕ್ಷದಲ್ಲಿ ಶಿಕ್ಷೆಗೆ ಗುರಿಪಡಿಸಲಾಗುತ್ತೆ.. ಅಷ್ಟೇ ಅಲ್ಲದೇ ಪಾಸ್ ಪೋರ್ಟ್ ಗಳನ್ನೂ ರದ್ದು ಮಾಡಬಹುದಾಗಿದೆ.
ಇನ್ನೂ ಯಾವುದಾದರೂ ಕಾರಣಕ್ಕೆ ನವಜಾತ ಮಕ್ಕಳು ತಾಯಿಯ ಎದೆ ಹಾಲಿನಿಂದ ವಂಚಿತರಾದ್ರೆ , ಅಂತಹ ಮಕ್ಕಳಿಗೆ ತಾಯಿಯ ಎದೆಹಾಲು ಕೊಡಿಸುವ ವ್ಯವಸ್ಥೆಯನ್ನೂ ಸರ್ಕಾರ ಮಾಡಿದೆ.. ಇನ್ನೂ ಬ್ರೆಜಿಲ್ ನಲ್ಲಿ ಆಗಾಗ ರಸ್ತೆಗಳಲ್ಲಿ ದೊಡ್ಡ ದೊಡ್ಡ ಹಾವುಗಳು ಕಾಣಿಸಿಕೊಳ್ಳುವುದು ಕೂಡ ಕಾಮನ್..
ಇಡೀ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಬ್ರೆಜಿಲ್ 6 ನೇ ಸ್ಥಾನದಲ್ಲಿದೆ. ಅಂದ್ರೆ ಅತಿ ಹೆಚ್ಚು ಶ್ರೀಮಂತರು ಈ ದೇಶದಲ್ಲಿರುವ ಆಧಾರದಲ್ಲೂ ಈ ದೇಶವನ್ನ ಶ್ರೀಮಂತ ರಾಷ್ಟ್ರ ಅಂತ ಪರಿಗಣಿಸಲಾಗುತ್ತೆ. ವಿಶ್ವದ 2ನೇ ಅತಿ ದೊಡ್ಡ ನದಿ ಅಮೇಜಾನ್ ನ ಅತಿ ಹೆಚ್ಚು ಭಾಗ ಬ್ರೆಜಿಲ್ ನಲ್ಲಿದೆ.
ಈ ದೇಶದ ಜನರು ಇಂದಿಗೂ ಏಲಿಯನ್ಸ್ ಇದೆ ಎಂಬ ವಿಶ್ವಾಸದಲ್ಲಿದ್ಧಾರೆ.. ಪ್ರತಿ ವರ್ಷ 2-3 ಬಾರಿಯಾದ್ರೂ ಏಲಿಯನ್ಸ್ ಗಾಗಿ ಸರ್ಚ್ ಆಪರೇಷನ್ ಕೂಡ ನಡೆಯುತ್ತೆ.
ಬ್ರೆಜಿಲ್ ನಲ್ಲಿ ಖೈದಿಗಳಿಗೆ ವಿಚಿತ್ರ ಶಿಕ್ಷೆ ಅಥವ ಕೆಲಸವನ್ನ ನೀಡಲಾಗುತ್ತೆ.. ಹೌದು ಸೈಕಲ್ ಮಾಡರಿಯ ುಪಕರಣವನ್ನ ಖದಿಗಳು ತುಳಿಯುವ ಶಿಕ್ಷೆ ನೀಡಲಾಗುತ್ತದೆ.. ಇದ್ರಿಂದಾಗಿ ಕರೆಂಟ್ ಉತ್ಪಾದನೆಯಾಗುತ್ತದೆ. ಅಷ್ಟೇ ಅಲ್ಲ ಖೈದಿ ಎಷ್ಟು ಹೆಚ್ಚು ಸೈಕಲ್ ತುಳಿಯುತ್ತಾರೋ ಅಷ್ಟು ಶಿಕ್ಷೆ ಕಡಿಮೆಯಾಗುತ್ತೆ ಎನ್ನಲಾಗಿದೆ.
ಇಲ್ಲಿನ ಒಮದು ಐಲ್ಯಾಂಡ್ ವಿಷಪೂರಿತ ಹಾವುಗಳಿಂದ ಕೂಡಿದೆ.. ಒಂದೊಂದು ಸ್ಕ್ವೇರ್ ಕಿ ,ಮೀ ಅಂತರದಲ್ಲಿ ಕಡಿಮೆ ಅಂದ್ರೂ 5 ಹಾವುಗಳು ಕಾಣಿಸುತ್ತವೆ ಎನ್ನಲಾಗಿದೆ.. ಅಷ್ಟೇ ಅಲ್ಲ ಈ ಅಪಾಯಕಾರಿ ದ್ವೀಪಕ್ಕೆ ಹೋದವರೂ ಯಾರೂ ಕೂಡ ಜೀವಂತವಾಗಿ ವಾಪಸ್ ಬರೋದಿಲ್ಲ ಎನ್ನಲಾಗುತ್ತೆ.
ಇಲ್ಲಿನ ಜನರು ಹೆಚ್ಚು ಇಷ್ಟ ಪಡುವ ಆಟ ಫುಟ್ ಬಾಲ್. ವಿಶ್ವದ ಟಾಪ್ ಫುಟ್ ಬಾಲ್ ರ್ಯಾಂಕಿಂಗ್ ನಲ್ಲಿ ಬ್ರೆಜಿಲ್ 8 ನೇ ಸ್ಥಾನದಲ್ಲಿ ಬರುತ್ತೆ.. ಬ್ರೆಜಿಲ್ ಟೀಮ್ 5 ಬಾರಿ ಫಿಫಾ ವರ್ಲ್ಡ್ ಕಪ್ ಗೆದ್ದಿದೆ.. ಮೆಕ್ಸಿಕೋ , ರಷ್ಯಾ ಇನ್ನೂ ಕೆಲ ದೇಶಗಳಲ್ಲಿ ಅತಿ ಹೆಚ್ಚಾಗಿ ಡ್ರಗ್ಸ್ ಮಾಫಿಯಾ ಇದ್ದು, ಅಂತಹ ದೇಶಗಳ ಪಟ್ಟಿಗೆ ಬ್ರೆಜಿಲ್ ಕೂಡ ಸೇರಿದೆ..
ಪ್ರವಾಸಿ ತಾಣಗಳು
ರಿಯೋ ದಿ ಜೆನೆರಿಯೋ , ಕ್ರಿಸ್ಟ್ ದ ರಿಡೀಮರ್ , ಸಾವ್ ಪೌಲೋ, ಅಮೇಜಾನ್ , ಬೇಲೋ ಹಾರಿಜಾಂಟೆ, ಗಾರ್ಡನ್ ಸಿಟಿ ಇನ್ನೂ ಹಲವಾರು ಆಕರ್ಷಕ ಪ್ರವಾಸಿ ತಾಣಗಳು ಪ್ರವಾಸಿಗರನ್ನ ಸೆಳೆಯುತ್ತೆ..