Rohit sharma | ಕ್ಯಾಪ್ಟನ್ ಆಗುತ್ತಿದ್ದಂತೆ ಬ್ಯಾಟಿಂಗ್ ಮರೆತ್ರಾ ರೋಹಿತ್..!
ಭಾರತದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
ಈ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವ ಚೆನ್ನಾಗಿತ್ತು. ಆದ್ರೆ ಬ್ಯಾಟಿಂಗ್ ನಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಸರಣಿಯ ಮೂರೂ ಪಂದ್ಯಗಳಲ್ಲಿ ಓಪನ್ ಆಗಿ ಕ್ರೀಸ್ ಗೆ ಬಂದ ರೋಹಿತ್ ಶರ್ಮಾ ಗಳಿಸಿದ್ದು ಕೇವಲ 50 ರನ್ ಗಳನ್ನ ಮಾತ್ರ.
ಹೀಗಾಗಿ ರೋಹಿತ್ ಶರ್ಮಾ ಕುರಿತು ಭಾರತದ ಮಾಜಿ ಕ್ರಿಕೆಟಿಗ ಸಾಬಾ ಕರೀಮ್ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ.
ರೋಹಿತ್ ಶರ್ಮಾ ಬ್ಯಾಟಿಂಗ್ ನಿಂದಾಗಿಯೇ ಟೀಂ ಇಂಡಿಯಾದಲ್ಲಿದ್ದಾರೆ, ನಾಯಕತ್ವ ಹೆಚ್ಚುವರಿ ಜವಾಬ್ದಾರಿ ಮಾತ್ರ ಎಂದಿದ್ದಾರೆ.
“ನಾಯಕತ್ವ ಕೇವಲ ಹೆಚ್ಚುವರಿ ಜವಾಬ್ದಾರಿಯಾಗಿದೆ. ರೋಹಿತ್ ಬ್ಯಾಟಿಂಗ್ ಮೇಲಿನ ಹಿಡಿತವನ್ನು ಕಳೆದುಕೊಳ್ಳಬಾರದು.
ನ್ಯಾಯಕತ್ವದ ಹೆಚ್ಚುವರಿ ಜವಾಬ್ದಾರಿಯಿಂದಾಗಿ ಬ್ಯಾಟಿಂಗ್ ನಲ್ಲಿ ಮಿಂಚುವಲ್ಲಿ ಹಲವು ನಾಯಕರು ವಿಫಲರಾದ ನಿದರ್ಶನಗಳೂ ಇವೆ.
ರೋಹಿತ್ ವಿಷಯದಲ್ಲಿ ಹೀಗಾಗಬಾರದು. ನಾಯಕನಾಗಿ ರೋಹಿತ್‌ಗೆ ಇದು ಆರಂಭಿಕ ಹಂತವಾಗಿದೆ. ತಂಡಕ್ಕೆ ತನ್ನ ಬ್ಯಾಟಿಂಗ್‌ನ ಅವಶ್ಯಕತೆಯಿದೆ ಎಂಬುದನ್ನು ರೋಹಿತ್ ಅರಿತುಕೊಳ್ಳಬೇಕು.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್-2022ರಲ್ಲಿ ರೋಹಿತ್ ಪ್ರದರ್ಶನ ನಿರ್ಣಾಯಕವಾಗಲಿದೆ. ಅಲ್ಲಿನ ಮೈದಾನ ಬಹಳ ದೊಡ್ಡದು.
ಎದುರಾಳಿ ತಂಡವು ಅತ್ಯುತ್ತಮ ಬೌಲರ್‌ಗಳನ್ನು ಹೊಂದಿವೆ. ಆದ್ದರಿಂದ ರೋಹಿತ್ ಶರ್ಮಾ ಆ ಬೌಲರ್ ಗಳನ್ನ ಎದುರಿಸಿ ಮೆಗಾ ಟೂರ್ನಿಮೆಂಟ್ ನಲ್ಲಿ ಮಿಂಚಲೇ ಬೇಕು ಎಂದು ಕರೀಂ ಹೇಳಿದ್ದಾರೆ. saba karim comments on rohit sharma batting