2021ರ ರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿಗೆ ಭಾಜನರಾದ ಬೆಳ್ತಂಗಡಿಯ ಸಬಿತಾ

1 min read
Sabitha Monis

2021ರ ರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿಗೆ ಭಾಜನರಾದ ಬೆಳ್ತಂಗಡಿಯ ಸಬಿತಾ

ಬೆಳ್ತಂಗಡಿ, ಫೆಬ್ರವರಿ28: ಕೈಗಳಿಲ್ಲದೆ ಜನಿಸಿದ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಅನನ್ಯ ಸಾಧಕಿ ಸಬಿತಾ ಮೋನಿಸ್ 2021 ನೇ ಸಾಲಿನ ರಾಷ್ಟ್ರೀಯ ಮಹಿಳಾ ಸಾಧಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Sabitha Monis

ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಸಬಿತಾ ಮೋನಿಸ್ ತನ್ನ ದೈಹಿಕ ಅಂಗವೈಕಲ್ಯವನ್ನು ಮೆಟ್ಟಿನಿಂತು ಎರಡು ಕಾಲುಗಳಿಂದ ಪರೀಕ್ಷೆಗಳನ್ನು ಬರೆದು ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ.
Sabitha Monis

ಅವರು ಪ್ರಸ್ತುತ ಆಳ್ವಾಸ್‌ ಎಜುಕೇಶನ್ ಫೌಂಡೇಶನ್‌ನಲ್ಲಿ ಮಕ್ಕಳ ಕಲ್ಯಾಣ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರ ಸಾಧನೆಗಳನ್ನು ಅಸಾಮಾನ್ಯ ಸಾಧನೆಯೆಂದು ಪರಿಗಣಿಸಿ, ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಕರ್ನಾಟಕದ ಪತ್ರಿಕೆಗಳ ಸಂಘದ ಜಂಟಿ ಆಯ್ಕೆ ಸಮಿತಿಯು ಈ ವಿಶೇಷ ಗೌರವಕ್ಕಾಗಿ ಅವರನ್ನು ಆಯ್ಕೆ ಮಾಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd