ಶೀಘ್ರದಲ್ಲೇ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ ಸಾರಾ ತೆಂಡೂಲ್ಕರ್……
ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ, ಸಿನಿಮಾ ಮತ್ತು ಗ್ಲಾಮರ್ ಜಗತ್ತಿನಲ್ಲಿ ವೃತ್ತಿ ಜೀವನವನ್ನ ಕಟ್ಟಿಕೊಳ್ಳಲು ಸಾರಾ ಆಸಕ್ತಿ ತೋರಿಸುತ್ತಿದ್ದಾರೆ, ವೃತ್ತಿಪರ ಮಾಡೆಲ್ ಆಗಿದ್ದು, ನಟನಾ ಕೌಶಲ್ಯವನ್ನ ಕಲಿಯುತ್ತಿದ್ದಾರೆ.
24 ವರ್ಷದ ಸಾರಾ ಲಂಡನ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಅಧ್ಯಯನ ಮಾಡಿದ್ದಾರೆ. ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನ ಪೂರೈಸಿದ್ದರು. ಬಾಲಿವುಡ್ ನಟರಾದ ಕಾರ್ತಿಕ್ ಆರ್ಯನ್, ರಣವೀರ್ ಸಿಂಗ್, ಸಾರಾ ಅಲಿ ಖಾನ್, ಆಲಿಯಾ ಭಟ್ ಮತ್ತು ಇತರೇ ಸೆಲೆಬ್ರಿಟಿಗಳು ಸೇರಿದಂತೆ 19 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳು ಸಾರ ಅವರನ್ನ ಇನ್‌ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡುತ್ತಿದ್ದಾರೆ.
ಸಾರಾ ಅವರ ನಿರ್ಧಾರಗಳನ್ನ ಅವರ ಕುಟುಂಬದವರು ಬೆಂಬಲಿಸುತ್ತಿದ್ದಾರೆ. ಮಗಳು ನಟಿಯಾಗುವ ನಿರ್ಧಾರಕ್ಕೆ ಅವರ ಅಭ್ಯಂತರವಿಲ್ಲ.
ಕೆಲವು ವರ್ಷಗಳ ಹಿಂದೆ ಬಾಲಿವುಡ್ ನಟ ಶಾಹಿದ್ ಕಪೂರ್ ಎದುರು ಸಾರಾ ಪಾದಾರ್ಪಣೆ ಮಾಡಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ, ಆಗ ಸಚಿನ್ ತೆಂಡೂಲ್ಕರ್ ಈ ವರದಿಗಳನ್ನು ತಳ್ಳಿಹಾಕಿದ್ದರು. ಸಾರಾ ಪ್ರಸ್ತುತ ತನ್ನ ಅಧ್ಯಯನದ ಮೇಲೆ ಗಮನ ಹರಿಸುತ್ತಿದ್ದಾರೆ ಎಂದು ಹೇಳಿದರು.
ಸಾರಾ ಅವರ ಹೆಸರು ಭಾರತೀಯ ಕ್ರಿಕೆಟಿಗ ಶುಭಮನ್ ಗಿಲ್ ಅವರೊಂದಿಗೆ ಆಗಾಗ ಕೇಳಿಬರುತ್ತದೆ. ಇಬ್ಬರೂ ಕಳೆದ ಕೆಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಹರಡುತ್ತಿವೆ.