ಖ್ಯಾತ ಕವಿ ರಾಹತ್ ಇಂದೋರಿ ಕೊರೋನಾಗೆ ಬಲಿ
ಇಂದೋರ್, ಅಗಸ್ಟ್ 11: ಖ್ಯಾತ ಉರ್ದು ಕವಿ ರಾಹತ್ ಇಂದೋರಿ, ಮಧ್ಯಪ್ರದೇಶದ ಇಂದೋರ್‌ನಲ್ಲಿ ಮಂಗಳವಾರ ಕೋವಿಡ್-19 ಗೆ ಬಲಿಯಾಗಿದ್ದಾರೆ. ಅವರಿಗೆ ಕೋವಿಡ್ -19 ಸೋಂಕು ದೃಢಪಟ್ಟ ಬಳಿಕ ಅವರನ್ನು ಮಧ್ಯಪ್ರದೇಶದ ಅರಬಿಂದೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶ್ರೀ ಅರಬಿಂದೋ ಆಸ್ಪತ್ರೆಯ ಸಿಒಒ ರಾಜೀವ್ ಸಿಂಗ್ ಅವರ ಪ್ರಕಾರ ಸೋಮವಾರ ರಾತ್ರಿ ಇಂದೋರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಿಂದ ಅರಬಿಂದೋಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.








