‘ಸಲ್ಮಾನ್ ಬಾಲಿವುಡ್ ಗೂಂಡಾ, ನಿಮ್ಮ ಕರೆಯರ್ ನಾಶ ಮಾಡ್ತೇನೆ ’ – ವಿಮರ್ಶಕ ಕಮಲ್
ಬಾಲಿವುಡ್ ನಟ ಸಲ್ಮಾನ್ ಖಾನ್ ಒಬ್ಬ ಗೂಂಡಾ ಜೀವನ ನಾಶ ಮಾಡುತ್ತಾನೆ ಎಂದು ವಿಮರ್ಶಕ ಕಮಲ್ ಆಕ್ರೋಶಭರಿತವಾಗಿ ಟ್ವೀಟ್ ಮಾಡಿದ್ದು ಭಾರೀ ವೈರಲ್ ಆಗಿದೆ.. ಸಲ್ಲು ಭಾಯ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಹೌದು.. ಇತ್ತೀಚೆಗೆ ರಿಲೀಸ್ ಆದ ‘ರಾಧೆ’ ಸಿನಿಮಾದ ಬಗ್ಗೆ ವಿಮರ್ಶೆ ಮಾಡಿರುವ ಕಮಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಬಳಿಕ ರೊಚ್ಚಿಗೆದ್ದಿರುವ ಕಮಲ್ ಸಲ್ಮಾನ್ ವಿರುದ್ಧ ಟ್ವೀಟ್ ಮಾಡಿ ‘ಬಾಲಿವುಡ್ ಗೂಂಡಾ, ನಿಮಗೆ ಧೈರ್ಯ ಇದ್ದರೆ ಮುಂದೆ ನಿಂತು ಹೋರಾಡಿ. ಚೀಪ್ ಗಾಯಕರು ಮತ್ತು ಕಷ್ಟಪಡುತ್ತಿರುವ ನಟಿಯರ ಹಿಂದೆ ಅಡಗಿಕೊಳ್ಳಬೇಡಿ. ನಾನು ಪ್ರತಿಜ್ಞೆ ಮಾಡುತ್ತೇನೆ ನಿಮ್ಮ ವೃತ್ತಿಜೀವನವನ್ನು ನಾಶಮಾಡಿ ನಿಮ್ಮನ್ನು ಒಬ್ಬ ಟಿವಿ ನಟನನ್ನಾಗಿ ಮಾಡುತ್ತೇನೆ’ ಎಂದಿದ್ದಾರೆ.
ಈ ಟ್ವೀಟ್ ನಲ್ಲಿ ಎಲ್ಲೂ ಸಲ್ಮಾನ್ ಖಾನ್ ಹೆಸರನ್ನು ಉಲ್ಲೇಖ ಮಾಡಿಲ್ಲ. ಆದರೆ ಇದು ಸಲ್ಮಾನ್ ಖಾನ್ ಗೆ ಹೇಳಿರುವುದು ಎನ್ನುವುದು ಸ್ಪಷ್ಟವಾಗಿಯೇ ತಿಳಿದಿದೆ. ಇನ್ನೂ ಈ ಬಳಿಕ ಸಲ್ಲು ಫ್ಯಾನ್ಸ್ ರೊಚ್ಚಿಗೆದ್ದು ಮಾತಿನಚಕಮಕಿ ಆರಂಭಿಸಿದ ನಂತರ ಕಮಲ್ ತನ್ನ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ತನ್ನ ಫಾಲೋ ಮಾಡುತ್ತಿರುವ 5 ಮಿಲಿಯನ್ ಫಾಲೋವರ್ಸ್ ಗೆ ಮಾತ್ರ ಟ್ವೀಟ್ ಕಾಣುವಂತೆ ಸೆಟ್ಟಿಂಗ್ ಮಾಡಿದ್ದಾರೆ. ಒಟ್ಟಾರೆ ಕಮಲ್ ಖಾನ್ ಬಾಲಿವುಡ್ ನ ಸುಲ್ತಾನ ಶೇರ್ ಖಾನ್ ನನ್ನ ಎದುರಾಕಿಕೊಂಡಿದ್ದು ಅವರ ಅಭಿಮಾನಿಗಳ ಕೆಂಗಣ್ನೀಗೆ ಗುರಿಯಾಗಿರೋದು ಸುಳ್ಳಲ್ಲ..
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.