ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ ಸಮಂತಾ ಸದ್ಯ ಡಿವೋರ್ಸ್ ನಂತರ ವೃತ್ತಿ ಜೀವನದಲ್ಲಿ ಮತ್ತಷ್ಟು ಆಕ್ಟೀವ್ ಆಗಿದ್ದಾರೆ.. ಅದ್ರಲ್ಲೂ ಸೌತ್ ಸಿನಿಮಾ ಇಂಡ್ಸ್ರಿಗೆ ಮಾತ್ರ ಸೀಮಿತವಾಗಿದ್ದ ಬೌಂಡರಿ ದಾಟಿ ಈಗ ಬಾಲಿವುಡ್ ಹಾಲಿವುಡ್ ಗೆ ಪಾದಾರ್ಪಣೆ ಮಾಡ್ತಿದ್ದಾರೆ.. ಅದ್ರಲ್ಲೂ ನಾಗಚೈತನ್ಯ ಅವರ ಜೊತೆಗೆ ವಿಚ್ಛೇಧನ ಪಡೆದ ನಂತರ ಸಮಂತಾ ಪುಷ್ಪಾ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು.. ಈ ಮೂಲಕ ಆಲ್ ಓವರ್ ಇಂಡಿಯಾ ಗುರುತಿಸಿಕೊಂಡಿದ್ದಾರೆ..
ಪುಷ್ಪ ಸಿನಿಮಾಗೆ ಸಮಂತಾ ಹೆಜ್ಜೆ ಹಾಕಿದ್ದ ಊ ಅಂಟಾವಾ ಮಾವ ಊಹೂ ಅಂಟಾವಾ ಮಾವ ಹಾಡು ಹೈಲೇಟ್ ಆಗಿತ್ತು.. ಈ ಹಾಡು ಎಲ್ಲಾ ಭಾಷೆಗಳಲ್ಲೂ ಹಿಟ್ ಆಗಿತ್ತು.. ಸೋಷಿಇಯಲ್ ಮೀಡಿಯಾದ ಸೆನ್ಷೇಷನ್ ಆಗಿತ್ತು.. ಅದ್ರಲ್ಲೂ ಕ್ರಿಟಿಕ್ ಚಾಯ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದ ಸ್ಯಾಮ್ ನನ್ನ ಹಿಂದಿನ ಸಿನಿಮಾಗಳನ್ನ ಜನರು ಮರೆತೇ ಬಿಟ್ಟಿದ್ದಾರೆ.. ಯಾರೂ ನೋಡಿದ್ರು ಈ ಹಾಡಿನಿಂದ ಈಸಗ ನನ್ನ ಗುರುತಿಸುತ್ತಿದ್ದಾರೆ ಎಂದಿದ್ದರು..
ಇದೀಗ , ಬಾಲಿವುಡ್ , ಹಾಲಿವುಡ್ ನತ್ತ ಮುಖಮಾಡಿದ್ಧಾರೆ ಸಮಂತಾ.. ‘ಏಕ್ ದಿವಾನಾ ಥಾ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಸಮಂತಾ , ‘ದಿ ಫ್ಯಾಮಿಲಿ ಮ್ಯಾನ್’ ಹಿಂದಿ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.. ಬಿಟ್ಟರೆ ಪೂರ್ಣ ಪ್ರಮಾಣದ ನಾಯಕಿಯಾಗಿ ಯಾವ ಬಾಲಿವುಡ್ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ.. ಆದ್ರೀಗ ಆ ಅವಕಾಶ ಸಮಂತಾಗೆ ಸಿಕ್ಕಿದೆ. ಬಾಲಿವುಡ್ ನ ಸ್ಟಾರ್ ನಟ ವರುಣ್ ಧವನ್ ಜೊತೆಗೆ ಸಮಂತಾ ಬಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.. ಅಂದ್ಹಾಗೆ ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.
ಕೇವಲ ಇದೊಂದೇ ಬಾಲಿವುಡ್ ಸಿನಿಮಾ ಮಾತ್ರವಲ್ಲದೇ ಸಮಂತಾ ಮತ್ತೊಂದು ಸಿನಿಮಾದಲ್ಲೂ ನಟಿಸಲಿದ್ದಾರೆ.. ಮತ್ತೊಂದು ಸಿನಿಮಾದಲ್ಲಿ ಬಹುಭಾಷಾ ನಟಿ ತಾಪ್ಸಿ ಪಣ್ಣು ಜೊತೆಗೆ ಕೆಲಸ ಮಾಡಲಿದ್ದಾರೆ ಸ್ಯಾಮ್.. ತಾಪ್ಸಿ ನಿರ್ಮಾಣ ಮಾಡಲಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ.. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಸಮಂತಾ ಜೊತೆಗೆ ತಾಪ್ಸಿ ಕೂಡ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಹಾಲಿವುಡ್ ನಲ್ಲೂ ಸಮಂತಾ ಕಮಾಲ್ ಮಾಡಲು ಹೊರಟಿದ್ದಾರೆ.. ಹಾಲಿವುಡ್ ನಿರ್ಮಾಣ ಸಂಸ್ಥೆಯು ಭಾರತೀಯ ನಿರ್ಮಾಣ ಸಂಸ್ಥೆಯ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುತ್ತಿರುವ ಇಂಗ್ಲಿಷ್ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ. ‘ಅರೇಂಜ್ಮೆಂಟ್ಸ್ ಆಫ್ ಲವ್’ ಕಾದಂಬರಿ ಆಧಾರಿತ ಕತೆಯನ್ನು ಹಾಲಿವುಡ್ ನಿರ್ದೇಶಕ ಫಿಲಿಫ್ ಜಾನ್ ಅದೇ ಹೆಸರಲ್ಲಿ ತೆರೆಗೆ ತರುತ್ತಿದ್ದು ಸಿನಿಮಾದಲ್ಲಿ ಸಮಂತಾ ದ್ವಿಲಿಂಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.