ADVERTISEMENT
Friday, August 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಸ್ಯಾಮ್ಸನ್!

ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಸಂಜು ಸ್ಯಾಮ್ಸನ್

Author2 by Author2
August 11, 2023
in Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

ಸತತ ಬ್ಯಾಟಿಂಗ್‌ ವೈಫಲ್ಯಕ್ಕೆ ಸಿಲುಕಿರುವ ಟೀಂ ಇಂಡಿಯಾದ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸಂಜೂ ಸ್ಯಾಮ್ಸನ್‌, ಇದೀಗ ಭಾರತ ತಂಡದಿಂದ ಸ್ಥಾನ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ‌ ಟಿ20 ಸರಣಿಯ ಎರಡು ಪಂದ್ಯಗಳಲ್ಲಿ ಸಂಜೂ ಸ್ಯಾಮ್ಸನ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಸಂಜೂ ಸ್ಯಾಮ್ಸನ್‌ ಅವರ ಈ ಪ್ರದರ್ಶನ ಟೀಂ ಇಂಡಿಯಾದಲ್ಲಿನ ಅವರ ಸ್ಥಾನಕ್ಕೆ ಆಪತ್ತು ತಂದೊಡ್ಡಿದೆ. ಅಲ್ಲದೇ ಈ ಹಿಂದೆ ಟೀಂ ಇಂಡಿಯಾಕ್ಕೆ ಆಯ್ಕೆ ಮಾಡದಿದ್ದಾಗ ಸ್ಯಾಮ್ಸನ್ ಬೆಂಬಲಕ್ಕೆ ನಿಂತಿದ್ದ ಫ್ಯಾನ್ಸ್ ಇದೀಗ ಅವರ ಕಳಪೆ ಫಾರ್ಮ್ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದಾರೆ.

Related posts

anil-kumble-jumbo-fight-cricket-journey

ಜಂಬೋ ಅಂದ್ರೆ ಬರೀ ಅಡ್ಡ ಹೆಸರಲ್ಲ. ಅದು ಹೋರಾಟದ ಇನ್ನೊಂದು ಹೆಸರು..! ಅಷ್ಟಕ್ಕೂ ಅನಿಲ್ ಕುಂಬ್ಳೆಗೆ ಜಂಬೋ ಅಂತ ಹೆಸರಿಟ್ಟಿದ್ದು ಯಾರು..? ಜಂಬೋ ಅನ್ನೋ ಹೆಸರು ಹೇಗೆ ಬಂತು..?

August 10, 2026
indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

August 7, 2026

ವಿಂಡೀಸ್ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡದೆ ತಮ್ಮ ಮೇಲಿನ ನಿರೀಕ್ಷೆಯನ್ನ ಹುಸಿಯಾಗಿಸಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಅಬ್ಬರಿಸಿರುವ ಸಂಜೂ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಈವರೆಗೂ ಆಡಿರುವ 18 ಟಿ20 ಪಂದ್ಯದಲ್ಲಿ 19.56ರ ಸರಾಸರಿಯಲ್ಲಿ ಕೇವಲ 320 ರನ್‌ಗಳಿಸಿದ್ದು, 132.07ರ ಸ್ಟ್ರೈಕ್ ರೇಟ್ ‌ಹೊಂದಿದ್ದಾರೆ. ಈ ಕಳಪೆ ಪ್ರದರ್ಶನದಿಂದಾಗಿ ಸಂಜೂ ಸ್ಯಾಮ್ಸನ್‌ಗೆ ಟೀಂ ಇಂಡಿಯಾದ ಬಾಗಿಲು ಮುಚ್ಚಿತೇ? ಎಂಬ ಅನುಮಾನ ಮೂಡುವಂತೆ ಮಾಡಿದೆ.

ಮುಂಬರುವ ಏಷ್ಯಾಕಪ್‌ ಹಾಗೂ ಏಕದಿನ ವಿಶ್ವಕಪ್‌ ಪಂದ್ಯಾವಳಿಯ ಹೊಸ್ತಿಲಲ್ಲಿರುವ ಭಾರತ, ಇದಕ್ಕಾಗಿ ಆಟಗಾರರ ಪ್ರದರ್ಶನದ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. ಇದಕ್ಕಾಗಿ ವಿಂಡೀಸ್‌ ಪ್ರವಾಸದಲ್ಲಿ ನಡೆದ ಏಕದಿನ ಮತ್ತು ಟಿ20 ಸರಣಿಯಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಿ ಪ್ರಯೋಗ ನಡೆಸಿದೆ. ಆದರೆ ಈ ಅವಕಾಶವನ್ನ ಸರಿಯಾಗಿ ಬಳಸಿಕೊಳ್ಳದ ಸಂಜೂ ಸ್ಯಾಮ್ಸನ್‌, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ.

ವಿಂಡೀಸ್‌ ಪ್ರವಾಸಕ್ಕೆ ಭಾರತ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ಸಂಜೂ ಸ್ಯಾಮ್ಸನ್‌, ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಲಾಗಿತ್ತು. ವಿಂಡೀಸ್‌ ವಿರುದ್ಧದ 2 ಏಕದಿನ ಮತ್ತು 2 ಟಿ20 ಪಂದ್ಯವನ್ನಾಡಿರುವ ಸ್ಯಾಮ್ಸನ್‌, ತಮಗೆ ದೊರೆತ ಅವಕಾಶವನ್ನ ಸದುಪಯೋಗ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಆದರೆ ವೆಸ್ಟ್‌ ಇಂಡೀಸ್‌ ವಿರುದ್ಧ ಇನ್ನೂ 3 ಟಿ20 ಪಂದ್ಯಗಳನ್ನ ಆಡುವ ಅವಕಾಶ ಸಂಜೂ ಸ್ಯಾಮ್ಸನ್‌ಗೆ ಲಭಿಸುವ ಸಾಧ್ಯತೆ ಇದ್ದು, ಈ ವೇಳೆ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಟೀಂ ಇಂಡಿಯಾದಲ್ಲಿ ಸಂಜೂ ಸ್ಯಾಮ್ಸನ್‌ ಸ್ಥಾನ ಭದ್ರವಾಗಲಿದೆ.

Tags: #Sanju Samsonsports karnatakateam indiawest indiesWI v IND
ShareTweetSendShare
Join us on:

Related Posts

anil-kumble-jumbo-fight-cricket-journey

ಜಂಬೋ ಅಂದ್ರೆ ಬರೀ ಅಡ್ಡ ಹೆಸರಲ್ಲ. ಅದು ಹೋರಾಟದ ಇನ್ನೊಂದು ಹೆಸರು..! ಅಷ್ಟಕ್ಕೂ ಅನಿಲ್ ಕುಂಬ್ಳೆಗೆ ಜಂಬೋ ಅಂತ ಹೆಸರಿಟ್ಟಿದ್ದು ಯಾರು..? ಜಂಬೋ ಅನ್ನೋ ಹೆಸರು ಹೇಗೆ ಬಂತು..?

by admin
August 10, 2026
0

ಜಂಬೋ ಅಂದ್ರೆ ಬರೀ ಅಡ್ಡ ಹೆಸರಲ್ಲ. ಅದು ಹೋರಾಟದ ಇನ್ನೊಂದು ಹೆಸರು..! ಅಷ್ಟಕ್ಕೂ ಅನಿಲ್ ಕುಂಬ್ಳೆಗೆ ಜಂಬೋ ಅಂತ ಹೆಸರಿಟ್ಟಿದ್ದು ಯಾರು..? ಜಂಬೋ ಅನ್ನೋ ಹೆಸರು ಹೇಗೆ...

indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

by admin
August 7, 2026
0

ಅಂದು..! ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ...

hd-kumaraswamy-honours-para-athlete-shilpa-k-shaila-commonwealth-games-bronze-medalist

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ

by admin
August 6, 2026
0

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ ನವದೆಹಲಿಯ ಸಚಿವರ ನಿವಾಸದಲ್ಲಿ ಭೇಟಿ; ನಿಮ್ಮ ಸಾಧನೆ ಪ್ರೇರಣಾದಾಯಕ ಎಂದ ಕೇಂದ್ರ ಸಚಿವರು ಶಿಲ್ಪಾ...

sports/rishabh-pant-meets-ms-dhoni-ahead-of-sri-lanka-test-

ಭಾರತದ ಲಂಕಾ ಪ್ರವಾಸ – ಧೋನಿಯ ಮಾರ್ಗದರ್ಶನ ಪಡೆದ ರಿಷಪ್ ಪಂತ್..!

by admin
August 4, 2026
0

ಫಿಯರ್‍ಲೆಸ್ ಕ್ರಿಕೆಟರ್ ರಿಷಬ್ ಪಂತ್ ಶ್ರೀಲಂಕಾ ಪ್ರವಾಸಕ್ಕೆ ರೆಡಿಯಾಗುತ್ತಿದ್ದಾರೆ. ಅಪಘಾತ, ಸತತ ಗಾಯ, ಸ್ಥಿರ ಪ್ರದರ್ಶನದ ಕೊರತೆಯ ನಡುವೆಯೂ ಪಂತ್ ಟೀಮ್ ಇಂಡಿಯಾದ ಟೆಸ್ಟ್ ತಂಡದ ಆಧಾರಸ್ತಂಭವಾಗಿದ್ದಾರೆ....

sports/ms-dhoni-rides-ktm-390-duke-in-chennai-

ಚೆನ್ನೈನಲ್ಲಿ ಹೈಸ್ಪೀಡ್ ಕೆಟಿಎಂ ಬೈಕ್ ಸವಾರಿ ಮಾಡಿದ ಧೋನಿ

by admin
August 4, 2026
0

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು, ಮದ್ರಾಸ್ ಇಂಟರ್ ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ಕೆಟಿಎಂ 390 ಡ್ಯೂಕ್ ಬೈಕ್ ಸವಾರಿ ಮಾಡುವ ಮೂಲಕ ಗಮನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram