ಪೋಸ್ಟ್ ಪೋನ್ ಆಯ್ತು ‘ಗಜಾನನ ಅಂಡ್ ಗ್ಯಾಂಗ್’ ರಿಲೀಸ್ ಡೇಟ್!
ಶ್ರೀಮಹದೇವ್ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಫೆಬ್ರವರಿ 4ರಂದು ಬೆಳ್ಳಿತೆರೆಗೆ ಬರೋದಿಕ್ಕೆ ಸಕಲ ರೀತಿಯಿಂದಲೂ ಸಜ್ಜಾಗಿತ್ತು. ಆದ್ರೀಗ ಕೊರೋನಾ ಕಾಟ.. ಗಜಾನನ ಅಂಡ್ ಗ್ಯಾಂಗ್ ಓಟಕ್ಕೆ ಬ್ರೇಕ್ ಆಗಿದೆ. ಅಂದ್ರೆ ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ. ಕಾರಣ ಮತ್ತದೇ ಕೊರೋನಾ ಮಹಾಮಾರಿ.. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಲೇ ಇದೆ. ಕಂಟ್ರೋಲ್ ಗೆ ಸಿಗದ ಕೊರೋನಾಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ 50:50 ರೂಲ್ಸ್ ಜಾರಿ ಮಾಡಿದೆ. ಇದು ಸಿನಿಮಾಗಳ ಕಲೆಕ್ಷನ್ ಮೇಲೆ ದೊಡ್ಡ ಪೆಟ್ಟು ಕೊಡಲಿದೆ. ಹೀಗಾಗಿ ಥಿಯೇಟರ್ ಗೆ ಬರಲು ರೆಡಿಯಾಗಿದ್ದ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾ ತನ್ನ ದಾರಿ ಬದಲಿಸಿದೆ.
ಫೆ.4ಕ್ಕೆ ರಿಲೀಸ್ ಆಗಬೇಕಿದ್ದ ನಮ್ಮ ಗಜಾನನ ಅಂಡ್ ಗ್ಯಾಪ್ ಚಿತ್ರದ ರಿಲೀಸ್ ಡೇಟ್ ಮುಂದೂಡಲ್ಪಟ್ಟಿದೆ. ಕಾರಣ ಏನಂದ್ರೆ ಒಂದೊಳ್ಳೆ ಮನರಂಜನಾತ್ಮಕ ಚಿತ್ರ.ಯಾವುದೇ ರೀತಿಯಂದಂತಹ ಕೋವಿಡ್ ಹಾಗೂ ಇನ್ನೀತರ ವಿಚಾರಗಳಿಗೆ ಸೋಲಬಾರದು ಅನ್ನೋದು ನಮ್ಮ ಉದ್ದೇಶ. ನಿಮ್ಮನ್ನು 100% ಮನರಂಜನೆ ಮಾಡುವಲ್ಲಿ ನಮ್ಮ ಸಿನಿಮಾ ಯಶಸ್ವಿಯಾಗುತ್ತೇ ಅನ್ನೋದು ನಮ್ಮ ನಂಬಿಕೆ. ಹಾಗಾಗಿ ಒಂದೊಳ್ಳೆ ದಿನಾಂಕ ನೋಡಿ. ನಿಮ್ಮ ಎಲ್ಲರನ್ನು ತಲುಪುವ ಆಶಯ ನಮ್ಮದು. ಅದಷ್ಟು ಬೇಗ ಒಂದೊಳ್ಳೆ ದಿನಾಂಕದೊಂದಿಗೆ ನಿಮ್ಮ ಮುಂದೆ ಬರ್ತಿವೆ ಅಂತಾ ಗಜಾನನ ಅಂಡ್ ಗ್ಯಾಂಗ್ ಸ್ಪಷ್ಟಪಡಿಸಿದೆ.
Sandalwood News : gajanana and gang film postponed
Padma Awards 2022 – ಸೋನು ನೀಗಮ್ ಗೆ ಪದ್ಮ ಪ್ರಶಸ್ತಿ, ತಮ್ಮ ತಾಯಿ ಗೆ ಸಮರ್ಪಣೆ….
‘ನಮ್ ಗಣಿ ಬಿಕಾಂ ಪಾಸ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿರ್ದೇಶಕ ಕಂ ನಟ ಅಭಿಷೇಕ್ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶನದ ಜತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯು ಎಸ್ ನಾಗೇಶ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರದ್ಯುತನ್ ಸಂಗೀತ, ಉದಯ ಲೀಲಾ ಕ್ಯಾಮೆರಾ ಚಿತ್ರಕ್ಕಿದೆ. ಬಿಗ್‌ಬಾಸ್ ಖ್ಯಾತಿಯ ರಘು ಗೌಡ, ಚೇತನ್ ದುರ್ಗ, ನಾಟ್ಯರಂಗ, ಅಶ್ವಿನ್ ಹಾಸನ್ ಹಾಗೂ ಶಮಂತ್ ಅಲಿಯಾಸ್ ಬ್ರೋ ಗೌಡ ಚಿತ್ರದಲ್ಲಿ ನಟಿಸಿದ್ದಾರೆ.
‘ಗಜಾನನ ಅಂಡ್ ಗ್ಯಾಂಗ್’ನ ಕಾಲೇಜ್ ಸ್ಟೋರಿ. ಕಾಲೇಜಿನ ಹೀರೋ, ಹೀರೋಯಿನ್, ಗೆಳೆಯರು ಹಾಗೂ ವಿಲನ್ ಸುತ್ತ ಚಿತ್ರದ ಕಥೆ ಸಾಗುತ್ತದೆ. ಹಾಸ್ಯಮಿಶ್ರಿತ ಸಂಭಾಷಣೆಗಳು ನೋಡುಗರಿಗೆ ಕಚಗುಳಿ ಇಡುತ್ತದೆ. ಹಾಗೆ ಸೆಂಟಿಮೆಂಟ್ ದೃಶ್ಯಗಳು ಮನಕಲುಕುತ್ತವೆ. ಇಂತಹ ಫ್ಯಾಮಿಲಿ ಪ್ಯಾಕ್ಡ್ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾ ಹೊಸ ಮುಹೂರ್ತದೊಂದಿಗೆ ನಿಮ್ಮ ಮುಂದೆ ಹಾಜರಾಗಲಿದೆ. ಪ್ರತಿಯೊಬ್ಬರು ಹಾರೈಸಿ..