Sandalwood : ಆಪರೇಷನ್ ಯು ಚಿತ್ರತಂಡದಿಂದ ತಾರಕ ರತ್ನ ಪುಣ್ಯತಿಥಿ ಮತ್ತು ಪುನೀತ್ ರಾಜ್ ಕುಮಾರ್ ಗೆ ನಮನ
ಸಿನಿಮಾ ಮತ್ತು ಕಲಾವಿದರಿಗೆ ಯಾವುದೇ ಭಾಷೆ, ಜಾತಿ ಧರ್ಮ ಗಳಿರುವುದಿಲ್ಲ ಎಲ್ಲರೂ ಒಂದೇ ಎಂಬ ರೀತಿ ಬದುಕುತ್ತಿರುತ್ತಾರೆ. ಅದರಲ್ಲಿ ಪ್ರಮುಖರು ಕನ್ನಡದ ದೊಡ್ಮನೆ ಹಾಗೂ ತೆಲುಗಿನ NTR ಕುಟುಂಬಗಳು.
ಇತ್ತೀಚಿಗೆ ತೆಲಂಗಾಣದ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ವೇಳೆ ತೆಲುಗು ಸಿನಿಮಾದ ದಂತಕತೆ NTR ಮೊಮ್ಮಗ ತಾರಕ ರತ್ನ ರವರಿಗೆ ಹೃದಯಗತವಾಗಿತ್ತು.
ಅವರನ್ನು ಕೂಡಲೇ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಫೆಬ್ರವರಿ 19ರಂದು ತಾರಕ ರತ್ನ ರವರು ನಿದಾನರಾದರು.
ಇದು ತೆಲಂಗಾಣ, ಆಂಧ್ರಪ್ರದೇಶವಲ್ಲದೇ ಇಡೀ ಭಾರತ ದೇಶದ NTR ಫ್ಯಾಮಿಲಿ ಅಭಿಮಾನಿಗಳಿಗೆ ಅತೀವ ನೋವುಂಟು ಮಾಡಿತ್ತು.
ಹಾಗೆಯೇ ನಮ್ಮ ಕರ್ನಾಟಕದ ಅನೇಕ NTR ಅಭಿಮಾನಿಗಳಲ್ಲಿ ನೋವು ತರಿಸಿತ್ತು. ಅದೇ ರೀತಿ ತಾರಕ ರತ್ನ ರ ಆಪ್ತರು ಆದ ಆಪರೇಷನ್ ಯು ಚಿತ್ರದ ನಿರ್ಮಾಪಕ ಮಂಜುನಾಥ್ ಆರ್ ಹಾಗೂ ತಂಡದವರಿಗೆ ನೋವುಂಟಾಗಿತ್ತು.
ಈ ನೋವಿನ ನಡುವೆಯೂ ತಾರಕ ರತ್ನ ರವರ ಪುಣ್ಯ ತಿಥಿ ಕಾರ್ಯವನ್ನು ಶ್ರೀ ಚೈತನ್ಯ ಉದ್ಯಮಿದಾರರು, ಶ್ರೀ ಮಂಜುನಾಥ್ ಆರ್ ನಿರ್ಮಾಪಕರು ಆಪರೇಷನ್ ಯು ಚಿತ್ರ, ಕನ್ನಡ ದೇಶದೊಳ್ ಮತ್ತು ಕಲಿವೀರ ಚಿತ್ರದ ನಿರ್ದೇಶಕ ಅವಿರಾಮ್ ಕಂಠೀರವ ಹಾಗೂ ತಂಡದವರು ಕರ್ನಾಟಕದ ಗೌರಿಬಿದನೂರಿನಲ್ಲಿ ಹಮ್ಮಿಕೊಂಡಿದ್ದರು.
ಇನ್ನು ಈ ಕಾರ್ಯಕ್ಕೆ ಗೌರಿಬಿದನೂರು ಕ್ಷೇತ್ರದ ಸಮಾಜ ಸೇವಕರಾದ ಶ್ರೀ ಕೆ ಎಚ್ ಪುಟ್ಟಸ್ವಾಮಿಗೌಡರು ಆಗಮಿಸಿ ಸಂತಾಪ ಸೂಚಿಸುವ ಜೊತೆಗೆ ಪುಷ್ಪರ್ಚನೆ ಮಾಡಿದರು.
ಇನ್ನೂ ಈ ತಿಥಿ ಕಾರ್ಯವನ್ನು ಏರ್ಪಡಿಸಿದ್ದ ನಿರ್ಮಾಪಕ ಮಂಜುನಾಥ್ ಆರ್ ರವರು ಕರ್ನಾಟಕದ ದೊಡ್ಮನೆಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ನೆನೆದು ಪುಷ್ಪರ್ಚನೆ ಮಾಡಿ ನಮನಸಲ್ಲಿಸಿದರು.
ಈ ಕಾರ್ಯಕ್ರಮಕ್ಕೆ ಗೌರಿಬಿದನೂರಿನ ಸಾವಿರಾರು NTR ಹಾಗೂ ರಾಜ್ ಕುಟುಂಬದ ಅಭಿಮಾನಿಗಳು ಸೇರಿದ್ದರು, ಈ ಕಾರ್ಯಕ್ಕೆ ಆಗಮಿಸುವ ಸಾವಿರಾರು ಅಭಿಮಾನಿಗಳಿಗೆ ಮತ್ತು ಜನತೆಗೆ ನಿರ್ಮಾಪಕ ಮಂಜುನಾಥ್ ಆರ್ ರವರು ಮಾಂಸದುಟದ ಅನ್ನಸಂತರ್ಪಣೆ ಏರ್ಪಡಿಸಿದ್ದರು ಜೊತೆಗೆ ತಮ್ಮ ಆಪ್ತರಾದ ನಂದಾಮುರಿ ತಾರಕ ರತ್ನ ರವರ ತಿಥಿ ಕಾರ್ಯವನ್ನು ಅದ್ದೂರಿಯಾಗಿ ಆಯೋಜಿಸಿದ್ದರು.
ಅಂತೆಯೇ ನೆರೆದ ಜನರು ಮಾಂಸದೂಟ ಸವಿದರು. ಇನ್ನೂ ಈ ಕಾರ್ಯ ಮಾಡಿದ್ದು ನಿರ್ಮಾಪಕ ಮಂಜುನಾಥ್ ಆರ್ ರವರಿಗೆ ಸಾರ್ಥಕ ಭಾವವಿದ್ದು, ಅವರ ಆಪರೇಷನ್ ಯು ಚಿತ್ರಕ್ಕೆ ತಾರಕ ರತ್ನ ಹಾಗೂ ಇಡೀ ಕರ್ನಾಟಕ ಜನತೆಯ ಆಶೀರ್ವಾದ ಸಿಗಲಿದೆ ಎಂದು ಭಾವಿಸಿದ್ದಾರೆ.
ಈ ಕಾರ್ಯದಲ್ಲಿ ಕನ್ನಡದ ನಟರಾದ ಧರ್ಮೇoದ್ರ ಆಪರೇಷನ್ ಯು ಚಿತ್ರದ ನಾಯಕ ನಟ ಉತ್ತಮ್ ಪಾಲಿ ನಿರ್ದೇಶಕ ಅವಿರಾಮ್ ಕಂಠೀರವ, ಕಾರ್ಯಕಾರಿ ನಿರ್ಮಾಪಕ ತ್ಯಾಗೂ. ಪಿ, NTR fans association ಮತ್ತು ತಂಡದವರು ನೆರೆದಿದ್ದರು.
Sandalwood : Tributes to stars Ratna Punyathithi and Puneeth Rajkumar from the cast of Operation U