ವಿಜಯಲಕ್ಷ್ಮಿಗೆ ಉಚಿತವಾಗಿ ಮನೆ ನೀಡಿ ನೆರವಾದ ಅಭಿಮಾನಿ ಜೊತೆಗೆ ಜಗಳ – ಜಿರಳೆ ಕಾಟ ಎಂದು ಮನೆ ಬಿಟ್ಟ ನಟಿ

1 min read

ವಿಜಯಲಕ್ಷ್ಮಿಗೆ ಉಚಿತವಾಗಿ ಮನೆ ನೀಡಿ ನೆರವಾದ ಅಭಿಮಾನಿ ಜೊತೆಗೆ ಜಗಳ – ಜಿರಳೆ ಕಾಟ ಎಂದು ಮನೆ ಬಿಟ್ಟ ನಟಿ

ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ವಿಜಯಲಕ್ಷ್ಮಿ ನಂತರ ತಮಿಳಿನಲ್ಲಿ ಅವಕಾಶಗಳು ಹೆಚ್ಚಾದ ಬೆನ್ನಲ್ಲೇ ಅಲ್ಲಿಗೆ ಹೋಗಿ ತಮಿಳುನಾಡಿನಲ್ಲಿಯೇ ಉಳಿದುಕೊಂಡಿದ್ದಾರೆ.  ಎಷ್ಟೋ ವರ್ಷಗಳಿಂದ ಹೆಚ್ಚು ಸುದ್ದಿಯಲ್ಲಿರದ ವಿಜಯಲಕ್ಷ್ಮಿ ಕೆಲ ದಿನಗಳಿಂದ ಬರೀ ವಿವಾದಗಳಿಂದಳೇ ಸುದ್ದಿಯಲ್ಲಿದ್ದಾರೆ. ಆತ್ಮಹತ್ಯೆ ಯತ್ನ , ಮತ್ತು ಹಲವರ ವಿರುದ್ಧ ಆರೋಪಗಳ ಹೊರೆಸುವ ಜೊತೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋದಾಗಿ ಹೇಳುತ್ತಾ ಅನೇಕರ ಬಳಿ ನೆರವಿಗಾಗಿ ಮನವಿ ಮಾಡಿಕೊಳ್ತಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗ್ತಿದ್ದಾರೆ.

ಆದ್ರೆ ಅದೆಷ್ಟೋ ಜನ ನನೆಟ್ಟಿಗರು ವಿಜಯಲಕ್ಷ್ಮಿಗೆ ಸಹಾಯಾಸ್ತ ಚಾಚಿದ್ದು, ಇನ್ನೂ ಅನೇಕರು ಆಕೆಯದ್ದು ಬರೀ ಇದೇ ಗೋಳಾಯ್ತು. ಸಿನಿಮಾರಂಗದಲ್ಲಿ ಸಂಪಾದನೆ ಮಾಡಿದ್ದೆಲ್ಲಾ ಎಲ್ಲಿಗೆ ಹೋಯ್ತು ಅಂತೆಲ್ಲಾ ಟ್ರೋಲ್ ಮಾಡ್ತಾಯಿದ್ದಾರೆ. ಈ ನಡುವೆ ಟ್ರೋಲಿಗರ ಪಾಲಿಗೆ ವಿಜಯಲಕ್ಷ್ಮಿ ಮತ್ತೊಮ್ಮೆ ಆಹಾರವಾಗುವಂತಾಗಿದೆ. ಹೌದು… ಅಭಿಮಾನಿಯೊಬ್ಬರು ವಿಜಯಲಕ್ಷ್ಮಿಗೆ ಸಹಾಯ ಮಾಡಿದ್ದರು. ವಿಜಯಲಕ್ಷ್ಮಿಗೆ ಉಳಿದುಕೊಳ್ಳಲು ಮನೆಯನ್ನು ಉಚಿತವಾಗಿ ನೀಡಿದ್ರು. ಆದ್ರೆ ಇಲ್ಲೂ ಕೂಡ ತಕರಾರು ತೆಗೆದಿರುವ ನಟಿ ಮನೆಯಲ್ಲಿ ಜಿರಳೆ ಹಲ್ಲಿ ಕಾಟ ಅಂತ ಹೇಳಿ ಕೇವಲ 5 ದಿನಗಳಿಗೆ  ಮನೆ ತೊರೆದಿದ್ದಾರೆ..

ನಟಿ ವಿಜಯಲಕ್ಷ್ಮಿ ಕೆಲವು ದಿನಗಳ ಹಿಂದಷ್ಟೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿ ತಮಗೆ ಕೋವಿಡ್ ಆಗಿದೆ, ಐಸೋಲೇಷನ್ ಆಗಬೇಕು ಅಭಿಮಾನಿಗಳು ಯಾರಾದರೂ ನಮಗೆ ಮನೆ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ವಿಡಿಯೋ ನೋಡಿದ ಹೊನ್ನಾವರದ ಯುವತಿಯೊಬ್ಬರು ವಿಜಯಲಕ್ಷ್ಮಿ ಅವರನ್ನು ಸಂಪರ್ಕ ಮಾಡಿ ಅವರ ಅಕ್ಕನನ್ನು ದಾಖಲಿಸಿದ್ದ ಆಸ್ಪತ್ರೆಯ ಬಿಲ್‌ ಅನ್ನೆಲ್ಲ ಭರಿಸಿ ಅವರನ್ನು ಕಾರಿನಲ್ಲಿ ಹೊನ್ನಾವರದ ಬಳಿಕ ಕರ್ಕಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ತಮ್ಮ ತಂದೆ, ಗ್ರಾಮ ಪಂಚಾಯಿತಿ ಸದಸ್ಯ ತುಕಾರಾಂ ನಾಯಕ್‌ ನೆರವಿನೊಂದಿಗೆ ಬಾಡಿಗೆ ಮನೆಯೊಂದನ್ನು ನೋಡಿ ಅದರಲ್ಲಿ ವಿಜಯಲಕ್ಷ್ಮಿ , ಅವರ ಅಕ್ಕ ಹಾಗೂ ತಾಯಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ವಿಜಯಲಕ್ಷ್ಮಿ ಕುಟುಂಬದ ಊಟದ ವ್ಯವಸ್ಥೆಯನ್ನು ತುಕಾರಾಂ ನಾಯಕ್‌ ಕುಟುಂಬದವರೇ ನೋಡಿಕೊಂಡಿದ್ದಾರೆ.

ಆ ಬಾಡಿಗೆ ಮನೆಯಲ್ಲಿ ಐದು ದಿನ ಇದ್ದ ವಿಜಯಲಕ್ಷ್ಮಿ ಮನೆಯ ಬಗ್ಗೆ ತಕರಾರು ತೆಗೆದಿದ್ದು, ಮನೆಯಲ್ಲಿ ಹಲ್ಲಿ ಇದೆ, ಜಿರಳೆ ಇದೆ ಎಂದು ಮನೆ ಬಿಟ್ಟು ಹೋಗಿದ್ದಾರೆ. ಎಲ್ಲಿಗೆ ಹೋಗುತ್ತೀರೆಂದು ಕೇಳಿದ್ದಕ್ಕೆ ತಾವು ವಿಜಯನಗರಕ್ಕೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ವಿಜಯಲಕ್ಷ್ಮಿ ಕುಟುಂಬಕ್ಕೆ ತುಕಾರಾಂ ಅವರೇ ಬಾಡಿಗೆ ಕಾರು ಮಾಡಿ ಕೊಟ್ಟಿದ್ದಾರೆ.  ಅಷ್ಟೇ ಅಲ್ಲಲ ಸಹಾಯ ಮಾಡಿದ್ದನ್ನ ಮರೆತು ತುಕಾರಾಂ ಅವರ ಜೊತೆಗೆ ಜಗಳ ಮಾಡಿಕೊಂಡಿದ್ದಾರಂತೆ. ಬಳಿಕ ಈ ಬಗ್ಗೆ ವಿಡಿಯೋ ಮಾಡಿ ಮಾಹಿತಿ ನೀಡಿರುವ ತುಕಾರಾಂ ಮನೆಯಿಂದ ಹೋಗುವ ಮುನ್ನಾ ತಮ್ಮ ಜೊತೆಗೆ ಜಗಳ  ಆಡಿದ್ದಾರೆ ಎಂದಿದ್ದಾರೆ. ನನಗೆ ಸರಿಯಾದ ಮನೆ ಕೊಟ್ಟಿಲ್ಲ, ಮನೆ ಸರಿಯಾಗಿಲ್ಲ ಎಂದಿದ್ದಾರಂತೆ. ಅಲ್ಲದೆ ವಿಡಿಯೋ ಮಾಡಿ ನನಗೆ ಸರಿಯಾದ ಮನೆ ಕೊಟ್ಟಿಲ್ಲ, ಕನ್ನಡಿಗರು ನನಗೆ ನೋಡಿ ಎಂಥಹಾ ಮನೆ ಕೊಟ್ಟಿದ್ದಾರೆ ಮನೆಯಲ್ಲಿ ಹಲ್ಲಿ, ಜಿರಳೆಗಳೆಲ್ಲ ಇವೆ ಎಂದು ಹೇಳಿದ್ದಾರೆ ಎಂದು ತುಕಾರಾಂ ತಿಳಿಸಿದ್ದಾರೆ.

ಕಾಡಿನೊಳಗೆ ಸಿಲುಕಿರುವ ಕನಸು ಬಿದ್ರೆ ಅದರ ಅರ್ಥವೇನು ಗೊತ್ತಾ..?

ಮಹಾರಾಷ್ಟ್ರ : ಮಹಿಳಾ ಪೊಲೀಸರ ಕೆಲಸದ ಅವಧಿ ಕಡಿತ ಆದೇಶ  

ಹಿಂದಿಯ ಜನಪ್ರಿಯ ಟಿವಿ ಶೋ ವಿರುದ್ಧ ದಾಖಲಾಯ್ತು FIR..! ಯಾಕೆ ಗೊತ್ತಾ..?  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd