ಹಿಂದಿಯ ಜನಪ್ರಿಯ ಟಿವಿ ಶೋ ವಿರುದ್ಧ ದಾಖಲಾಯ್ತು FIR..! ಯಾಕೆ ಗೊತ್ತಾ..?  

1 min read

ಹಿಂದಿಯ ಜನಪ್ರಿಯ ಟಿವಿ ಶೋ ವಿರುದ್ಧ ದಾಖಲಾಯ್ತು FIR..! ಯಾಕೆ ಗೊತ್ತಾ..?

ಮುಂಬೈ : ಹಿಂದಿ ಕಿರುತೆರೆಯಲ್ಲಿ ಸಖತ್ ಫೇಮಸ್ ಆಗಿರುವ ಟಿವಿ ಕಪಿಲ್ ಶರ್ಮಾ ಶೋ ವಿರುದ್ಧ ಇದೀಗ FIR ದಾಖಲಾಗಿದೆ.  ಕನ್ನಡದಲ್ಲಿ ಬರುವ ಮಜಾ ಟಾಕೀಸ್ ಮಾದರಿಯದ್ದೇ ಹಿಂದಿ ಶೋ ಇದಾಗಿದ್ದು, ಇದನ್ನ ಕಾಮಿಡಿಯನ್ ಕಪಿಲ್ ನಡೆಸಿಕೊಡ್ತಾರೆ. ಇತ್ತೀಚೆಗಗೆ ಶೋನಲ್ಲಿ ನ್ಯಾಯಾಲಯದಲ್ಲಿ ಮದ್ಯಪಾನ ಮಾಡುವ ದೃಶ್ಯವೊಂದನ್ನ ಸೃಷ್ಟಿಸಿ ಪ್ರಸಾರ ಮಾಡಲಾಗಿತ್ತು. ಇದು 2020ರ ಜನವರಿ 19 ರಂದು ಪ್ರಸಾರವಾಗಿತ್ತು. ಈ ವರ್ಷದ ಏಪ್ರಿಲ್ 24ರಂದು ಮರು ಪ್ರಸಾರ ಮಾಡಲಾಗಿತ್ತು. ಇದೇ ಕಾರಣಕ್ಕೆ ಈ ಶೋಗೆ ಕಾನೂನಿನ ಸಂಕಷ್ಟ ಎದುರಾಗಿದೆ.

ಮಧ್ಯಪ್ರದೇಶದ ಶಿವಪುರಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರೊಬ್ಬರು ಈ ಕಾರ್ಯಕ್ರಮದ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.  ಈ ದೃಶ್ಯದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ವಕೀಲರು, ನ್ಯಾಯಾಲಯದಲ್ಲಿ ಮದ್ಯ ಸೇವನೆಯಂತಹ ದೃಶ್ಯವನ್ನು ಸೃಷ್ಟಿಸಿದ್ದು ತಪ್ಪು. ಇದು ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಮಾನ. ಈ ದೃಶ್ಯದ ಮೂಲಕ ನ್ಯಾಯಲಯದ ಘನತೆಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ಅರ್ಜಿಯ ವಿಚಾರಣೆ ಅಕ್ಟೋಬರ್ 1 ರಂದು ವಿಚಾರಣೆಗೆ ಬರಲಿದ್ದು, ಕಪಿಲ್ ಶರ್ಮಾ ಶೋ ನಿರ್ಮಾಪಕರು ನ್ಯಾಯಾಲಯದ ಮುಂದೆ ಹಾಜರಾಗಬೇಕಾಗಿದೆ. ಅಂದ್ಹಾಗೆ ಈ ಶೋ ಈ ಹಿಂದೆ ಅನೇಕ ಎಡವಟ್ಟುಗಳನ್ನ ಮಾಡಿಕೊಂಡ ಪುರಾವೆಗಳಿವೆ. ಮಹಿಳೆಯರ ಬಗ್ಗೆ ಕೀಳು ಮಾತುಗಳನ್ನಾಡಿದ ಆರೋಪ ಜೊತೆಗೆ ಇನ್ನೂ ಸಾಕಷ್ಟು ವಿಚಾರಗಳಿಂದ ಈ ಶೋ ಸಂಕಷ್ಟ ಅನುಭವಿಸಿತ್ತು.

ಸಮಂತಾ – ನಾಗಚೈತನ್ಯ ಡಿವೋರ್ಸ್ ಪಡೆಯೋದಂತೂ ಪಕ್ಕಾನಾ..?

ಶಾಶ್ವತವಾಗಿ ಪ್ರದರ್ಶನ ನಿಲ್ಲಿಸಿದ ಮೈಸೂರಿನ ಮತ್ತೊಂದು ಜನಪ್ರಿಯ ಚಿತ್ರಮಂದಿರ..!

ಡಾರ್ಲಿಂಗ್ ಕೃಷ್ಣನ ಹೊಸ ಸಿನಿಮಾಗೆ ಸಾಥ್ ಕೊಟ್ಟ ರವಿ ಡಿ ಚೆನ್ನಣ್ಣನವರ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd