ರಾಯಚೂರು: ಕೊಪ್ಪಳ ಲೋಕಸಭಾ ಟಿಕೆಟ್ ಕೈ ತಪ್ಪಿದ್ದಕ್ಕೆ ಸಂಸದ ಸಂಗಣ್ಣ ಕರಡಿ ಕಣ್ಣೀರು ಸುರಿಸಿದ್ದಾರೆ.
ಸಿಂಧನೂರಿನಲ್ಲಿ ನೂತನ ರೈಲು ಆರಂಭ ಕಾರ್ಯಕ್ರಮದಲ್ಲಿ ಭಾವುಕರಾದ ಅವರು, ಕಾರ್ಯಕರ್ತರ ಎದುರೇ ಕಣ್ಣೀರು ಸುರಿಸಿದ್ದಾರೆ.
ಸಿಂಧನೂರಿಗೆ ರೈಲು ಬಂದಿದ್ದಕ್ಕೆ ಎಲ್ಲರಿಗೂ ಖುಷಿಯಾಗಿದೆ. ಕಾರ್ಯಕರ್ತರಿಗೆ ಸಂಗಣ್ಣನವರು ನಮ್ಮನ್ನು ಬಿಟ್ಟರು ಎನ್ನುವ ಭಾವನೆ ಕಾಡುತ್ತಿದೆ. ಈ ಕೊರಗು ನನ್ನನ್ನು ಕಾಡುತ್ತಿದೆ. ನಮ್ಮಲ್ಲಿ ಸ್ಥಳೀಯವಾಗಿ ಬಹಳ ಜನ ಇದ್ದಾರೆ. ಅವರೆಲ್ಲ ನಾಯಕತ್ವ ವಹಿಸಿಕೊಳ್ಳಲು ಸಿದ್ಧವಾಗಿದ್ದರು.
ಯಾರಿಗೆ ಹೃದಯ ಇರುತ್ತದೆಯೋ ಅವರಿಗೆ ಭಾವನೆಗಳು ಇರುತ್ತವೆ. ನಾನು ಕಾರ್ಯಕರ್ತರನ್ನು ನೋಡಿ ಭಾವುಕನಾಗಿದ್ದೇನೆ, ಅಧಿಕಾರ ಹೋಗುತ್ತೆ ಅಂತಲ್ಲಾ. ನನಗೆ ಟಿಕೆಟ್ ಕೊಡದಿರುವುದಕ್ಕೆ ಕಾರಣ ಇರಬಹುದು, ಅದು ವರಿಷ್ಠರಿಗೆ ಗೊತ್ತು ಎಂದು ಭಾವುಕರಾಗಿದ್ದಾರೆ.