Sania Mirza ಸೋಲಿನೊಂದಿಗೆ ಆಟ ಮುಗಿಸಿದ ಸಾನಿಯಾ..!!!
ಭಾರತದ ತಾರಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ 20 ವರ್ಷಗಳ ವೃತ್ತಿ ಬದುಕನ್ನು ಸೋಲಿನೊಂದಿಗೆ ಮುಕ್ತಾಯಗೊಳಿಸಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ ದುಬೈ ಓಪನ್ ಮಹಿಳಾ ಡಬಲ್ಸ್ ನಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ ಜೊತೆ ಕಣಕ್ಕಿಳಿದ ಸಾನಿಯಾ ಮಿರ್ಜಾ ಮೊದಲ ಸುತ್ತಿನಲ್ಲಿ ರಷ್ಯಾದ ಕುಡೆರ್ ಮೊಟೆವೊ ಹಾಗೂ ಸ್ಯಾಮ್ಸನೊವೊ ಜೋಡಿ ವಿರುದ್ಧ 4-6,0-6 ಅಂಕಗಳಿಂದ ಸೋತರು.
ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ಗೆ ಇತ್ತಿಚೆಗೆ ಗುಡ್ ಬೈ ಹೇಳಿದ್ದ ಸಾನಿಯಾ ದುಬೈ ಓಪನ್ ಬಳಿಕ ಟೆನಿಸ್ಗೆ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದರು.
ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ವಿದಾಯ ಹೇಳುವ ಅವರ ಆಸೆ ಈಡೇರಲಿಲ್ಲ.
2003ರಲ್ಲಿ ವೃತ್ತಿಪರ ಟೆನಿಸ್ಗೆ ಕಾಲಿಟ್ಟ ಸಾನಿಯಾ 2013ರವರೆಗೂ ಸಿಂಗಲ್ಸ್ ಆಡಿಕೊಂಡು ಬಂದಿದ್ದರು.
ಹೆಚ್ಚು ಯಶಸ್ಸು ಡಬಲ್ಸ್ ನಲ್ಲಿ ಸಿಕ್ಕಿದ್ದರಿಂದ ಹೆಚ್ಚು ಒತ್ತು ನೀಡಿದರು. ಮಹಿಳಾ ಡಬಲ್ಸ್ ಮತ್ತು ಮೀಶ್ರ ಡಬಲ್ಸ್ ಸಾನಿಯಾ ತಲಾ 3 ಗ್ರ್ಯಾನ್ ಸ್ಲಾಮ್ಗಳನ್ನು ಗೆದ್ದಿದ್ದಾರೆ.
ಸಾನಿಯಾ ತಮ್ಮ ವೃತ್ತಿ ಬದುಕಿನಲ್ಲಿ ಒಟ್ಟು 43 ಪ್ರಶಸ್ತಿ ಗೆದ್ದಿದ್ದಾರೆ. 2004ರಲ್ಲಿ ಅರ್ಜುನ, 2006ರಲ್ಲಿ ಪದ್ಮಶ್ರೀ,2015ರಲ್ಲಿ ಖೇಲ್ ರತ್ನ,2016ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ.
Sania Mirza , ends match with disopointment of loosing