ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಜೊತೆ ನಂಟು ಆರೋಪದಡಿ ಬಂಧಿತರಾಗಿರುವ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಒಂದೇ ಕೊಠಡಿಯಲ್ಲಿ ರಾತ್ರಿ ಕಳೆದಿದ್ದಾರೆ.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಪಕ್ಕದ ಮಹಿಳಾ ಸಾಂತ್ವನ ಕೇಂದ್ರದ ಒಂದೇ ಕೊಠಡಿಯಲ್ಲಿ ಇಬ್ಬರೂ ನಟಿ ಮಣಿಯರನ್ನು ಇರಿಸಲಾಗಿತ್ತು. ಕಳೆದ ಐದು ದಿನಗಳಿಂದ ರಾಗಿಣಿ ದ್ವಿವೇದಿ ಅದೇ ಕೊಠಡಿಯಲ್ಲಿದ್ದು, ನಿನ್ನೆ ಸಂಜೆ ಸಂಜನಾ ಗಲ್ರಾನಿ ಅವರನ್ನು ಕರೆದೊಯ್ದು ಅದೇ ಕೊಠಡಿಯಲ್ಲಿ ಇರಿಸಲಾಗಿದೆ.
ಒಂದೇ ಕೊಠಡಿಯಲ್ಲಿದ್ದರೂ ಇಬ್ಬರೂ ಪರಸ್ಪರ ಮಾತನಾಡಿಕೊಳ್ಳದೇ ಮೌನಕ್ಕೆ ಶರಣಾಗಿದ್ದಾರೆ. ಒಂದು ಹಂತದಲ್ಲಿ ನಟಿ ರಾಗಿಣಿ ವಿರುದ್ಧ ಸಂಜನಾ ಆಕ್ರೋಶ ಹೊರಹಾಕಿದ್ದಾಳಂತೆ. `ಆರ್ ಯು ಹ್ಯಾಪಿ ನೌ’ ಎಂದು ಸಂಜನಾ ರಾಗಿಣಿಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.
ಈ ನಡುವೆ, ರಾಗಿಣಿ ಮೇಲೆ ಕೂಗಾಡಿದ ಸಂಜನಾ ಕಣ್ಣೀರು ಹಾಕಿದ್ದಾರೆ. ಪೊಲೀಸ್ ಸಿಬ್ಬಂದಿ ಜೊತೆ ಅಳಲು ತೋಡಿಕೊಂಡ ಸಂಜನಾ ಕಣ್ಣೀರಿಟ್ಟಿದ್ದಾರೆ. ರಾತ್ರಿ ಊಟ ಬೇಡ ಎಂದು ಹಠ ಹಿಡಿದು ನಿದ್ರೆ ಮಾತನಾಡದೇ ಕಣ್ಣೀರು ಹಾಕುತ್ತಿದ್ದರಂತೆ. ಮಹಿಳಾ ಪೊಲೀಸ್ ಸಿಬ್ಬಂದಿ ಬಲವಂತದಿಂದ ಸಂಜನಾ ಸ್ವಲ್ಪ ಊಟ ಸೇವಿಸಿ ರಾತ್ರಿ ಕಳೆದಿದ್ದಾರೆ ಎನ್ನಲಾಗಿದೆ.
ಇಂದು ಇಬ್ಬರಿಗೂ ಪ್ರತ್ಯೇಕ ಡ್ರಿಲ್
ಡ್ರಗ್ ಮಾಫಿಯಾ ಜತೆ ನಂಟು ಹೊಂದಿದ್ದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿ ಸಿಸಿಬಿ ವಶದಲ್ಲಿರುವ ನಟಿ ಸಂಜನಾ, ರಾಗಿಣಿ ಅವರನ್ನು ಸಿಸಿಬಿ ಪೊಲೀಸರು ಇಂದು ಪ್ರತ್ಯೇಕವಾಗಿ ವಿಚಾರಣೆ ನಡೆಸಲಿದ್ದಾರೆ.
ಮಡಿವಾಳದ ಎಫ್‍ಎಸ್‍ಎಲ್ ಕೇಂದ್ರದಲ್ಲಿ ಇಬ್ಬರ ವಿಚಾರಣೆ ನಡೆಯಲಿದೆ. ಸಿಸಿಬಿ ಇನ್ಸ್‍ಪೆಕ್ಟರ್ ಅಂಜುಮಾಲಾ ಅವರಿಂದ ಸಂಜನಾ ವಿಚಾರಣೆ ನಡೆದರೆ, ಕಾತ್ಯಾಯಿನಿ ಅವರಿಂದ ರಾಗಿಣಿ ವಿಚಾರಣೆ ನಡೆಯಲಿದೆ.