ಐಪಿಎಲ್ 2021- ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸಂಜಯ್ ಬಂಗಾರ್ ಬ್ಯಾಟಿಂಗ್ ಸಲಹೆಗಾರ…!
ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಬ್ಯಾಟಿಂಗ್ ಸಲಹೆಗಾರನಾಗಿ ನೇಮಕಗೊಂಡಿದ್ದಾರೆ.
14ನೇ ಐಪಿಎಲ್ ಟೂರ್ನಿಯ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೀಮ್ ಮ್ಯಾನೇಜ್ ಮೆಂಟ್ ಈ ನಿರ್ಧಾರ ತೆಗೆದುಕೊಂಡಿದೆ.
ಆರ್ ಸಿಬಿ ಕುಟುಂಬಕ್ಕೆ ಸಂಜಯ್ ಬಂಗಾರ್ ಅವರನ್ನು ಸ್ವಾಗತ ಮಾಡುತ್ತಿದ್ದೇವೆ ಎಂದು ಆರ್ ಸಿಬಿ ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.
48ರ ಹರೆಯದ ಸಂಜಯ್ ಬಂಗಾರ್ ಅವರು ಈ ಹಿಂದೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. 2014ರಿಂದ 2019ರವರೆಗೆ ಟೀಮ್ ಇಂಡಿಯಾದ ಬ್ಯಾಟ್ಸ್ ಮೆನ್ ಗಳಿಗೆ ಬ್ಯಾಟಿಂಗ್ ಟಿಪ್ಸ್ ಗಳನ್ನು ನೀಡುತ್ತಿದ್ದರು. ಆದಾದ ನಂತರ ಸಂಜಯ್ ಬಂಗಾರ್ ಅವರ ಜಾಗಕ್ಕೆ ವಿಕ್ರಮ್ ರಾಥೋಡ್ ನೇಮಕಗೊಂಡಿದ್ದರು.
ಆರ್ ಸಿಬಿ ತಂಡಕ್ಕೆ ಸಿಮೋನ್ ಕ್ಯಾಟಿಚ್ ಅವರು ಹೆಡ್ ಕೋಚ್ ಆಗಿದ್ದಾರೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಏಪ್ರಿಲ್ ಎರಡನೇ ವಾರದಿಂದ ಶುರುವಾಗಲಿದೆ.
2001ರಿಂದ 2004ರವರೆಗೆ ಟೀಮ್ ಇಂಡಿಯಾ ಪರ ಆಡಿದ್ದ ಸಂಜಯ್ ಬಂಗಾರ್ ಅವರು, 12 ಟೆಸ್ಟ್ ಪಂದ್ಯ ಹಾಗೂ 15 ಏಕದಿನ ಪಂದ್ಯಗಳನ್ನು ಆಡಿದ್ದರು. ಆಲ್ ರೌಂಡರ್ ಆಗಿಯೂ ಸಂಜಯ್ ಬಂಗಾರ್ ಅವರು ಗಮನ ಸೆಳೆದಿದ್ದರು.
ಇದೀಗ ಆರ್ ಸಿಬಿಯಲ್ಲಿ ವಿರಾಟ್ ಪಡೆಗೆ ಬ್ಯಾಟಿಂಗ್ ಸಲಹೆಗಾರನಾಗಿ ಕಾರ್ಯ ನಿರ್ವಹಿಸಲಿದ್ದಾರೆ.