ಪೂಜಾರಗೆ ಮತ್ತೊಂದು ಚಾನ್ಸ್ ಕೊಡಿ.. ರಹಾನೆಗೆ ಬೇಡ

1 min read
Sanjay-manjrekar talks about rahane farm saaksha tv

ಪೂಜಾರಗೆ ಮತ್ತೊಂದು ಚಾನ್ಸ್ ಕೊಡಿ.. ರಹಾನೆಗೆ ಬೇಡ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಘೋರವಾಗಿ ವಿಫಲವಾದ ಅಜಿಂಕ್ಯಾ ರಹಾನೆ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಟೀಕೆಗಳ ಸುರಿಮಳೆಗೈದಿದ್ದಾರೆ.

ಅಲ್ಲದೇ ಸದ್ಯ ಬ್ಯಾಡ್ ಫಾರ್ಮ್ ನಲ್ಲಿರುವ ಅಜಿಂಕ್ಯಾ ರಹಾನೆ ಪ್ರಥಮ ದರ್ಜೆ ಕ್ರಿಕೆಟ್  ಆಡಬೇಕು ಎಂದು ಸಲಹೆ ನೀಡಿದ್ದಾರೆ.

ಕೇಪ್ ಟೌನ್ ಟೆಸ್ಟ್ ನಲ್ಲಿ ಎರಡು ಇನ್ನಿಂಗ್ಸ್ ಗಳಲ್ಲಿ ಕೇವಲ 10 ರನ್ ಗಳಿಸಿದ್ದ ರಹಾನೆಗೆ ನಾನಾದ್ರೆ ಮತ್ತೊಂದು ಅವಕಾಶ ನೀಡುವುದಿಲ್ಲ  ಎಂದು ಖಾರವಾಗಿ ಹೇಳಿದ್ದಾರೆ.

Sanjay-manjrekar talks about rahane farm saaksha tv

2020-21ರ ಆಸೀಸ್ ಪ್ರವಾಸದಲ್ಲಿ ರಹಾನೆ ಮಿಂಚಿದ್ದನ್ನ ನಾವು ನೋಡಿದ್ದೇವೆ. ಕಳೆದ ವರ್ಷ ಅವರು ಆಡಿದ 15 ಪಂದ್ಯಗಳಲ್ಲಿ 20.25 ಸರಾಸರಿಯಲ್ಲಿ ಕೇವಲ 547 ರನ್ ಗಳಿಸಿದ್ದಾರೆ. ರಹಾನೆ ಮತ್ತೆ ಫಾರ್ಮ್‌ಗೆ ಮರಳುತ್ತಾರೆ ಅನ್ನುವ ಭರವಸೆ ನನಗಿಲ್ಲ. ರಹಾನೆ ಜೊತೆಗೆ ಹೋಲಿಸಿದ್ರೆ ಪೂಜಾರ ಸ್ವಲ್ಪ ಉತ್ತಮವಾಗಿ ಆಡಿದ್ದಾರೆ. ಅವರಿಗೆ ಮತ್ತೊಂದು ಅವಕಾಶ ನೀಡಿದರೇ ಒಳ್ಳೆಯದು  ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್ ಗಳ ಸರಣಿಯಲ್ಲಿ, ರಹಾನೆ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 136 ರನ್ ಗಳಿಸಿದರೆ, ಪೂಜಾರ ಕೇವಲ 124 ರನ್ ಗಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd