‘ನೀವೂ ಬದುಕಿ, ಇನ್ನೊಬ್ಬರನ್ನು ಬದುಕಲು ಬಿಡಿ’ – ಸತೀಶ್ ನಿನಾಸಂ  

1 min read

‘ನೀವೂ ಬದುಕಿ, ಇನ್ನೊಬ್ಬರನ್ನು ಬದುಕಲು ಬಿಡಿ’ – ಸತೀಶ್ ನಿನಾಸಂ

 ಬೆಂಗಳೂರು:   ರಾಜ್ಯ ಹಾಗೂ ದೇಶದಲ್ಲಿ ಕೊರೊನಾ 2ನೇ ಅಲೆ ಅತಿ ಭಯಾನವಾಗಿ ಅಪ್ಪಳಿಸಿದ್ದು, ಸಾವು ನೋವಿನ ಸಂಖ್ಯೆಗಳೇ ಹೆಚ್ಚಾಗ್ತಿವೆ.  ಈ ನಡುವೆ ಅನೇಕ ತಾರೆಯರು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನೂ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡ್ತಿದ್ದಾರೆ. ಅಂತಹವರ ಪೈಕಿ ಸತೀಶ್ ನಿನಾಸಂ ಸಹ ಒಬ್ಬರು.. ಸತೀಶ್ ನಿನಾಸಂ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದು,  ಈ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಜಾಗೃತಿ ಮೂಡಿಸಿದ್ದಾರೆ.

https://www.instagram.com/sathish_ninasam_official/

 

‘ನಾನು ವೀಡಿಯೋ ಮಾಡಿರುವ ಉದ್ದೇಶ ನಿಮ್ಮೆಲ್ಲರಿಗೂ ಗೊತ್ತಿರುತ್ತೆ. ಎಲ್ಲರೂ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ನಮಗೆ ಈ ಪರಿಸ್ಥಿತಿ ಬಂದಿರುವುದಕ್ಕೆ ನಾವೇ ಕಾರಣ ಅಂದ್ರೂ ತಪ್ಪಾಗಲ್ಲ. ಯಾಕೆಂದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಬಹಳ ಜನ ಹೇಳುತ್ತಾ ಇದ್ದರೂ. ಆದರೆ ನಾವು ಯಾರೂ ಪಾಲಿಸಲೇ ಇಲ್ಲ. ಯಾರೂ ಕೂಡಾ ಮಾಸ್ಕ್ ಹಾಕಿಲ್ಲ. ಈಗಿರುವ ಕೊರೊನಾ ರೂಪಾಂತರಗೊಂಡಿರುವ ವೈರಸ್ ಸೆಕೆಂಡ್ ವೇವ್‍ನಲ್ಲಿ ಬಹಳ ಜನರಲ್ಲಿ ರೋಗದ ಲಕ್ಷಣವೇ ಕಾಣಿಸುತ್ತಿಲ್ಲ ಜಾಗೃತರಾಗಿರಿ’ ಎಂದು ಮನವಿ ಮಾಡಿದ್ದಾರೆ.

ಅಲ್ಲದೇ ‘ಹೊರಗಡೆ ಓಡಾಡುವವರು ಮಾಸ್ಕ್ ಹಾಕಿಕೊಳ್ಳಿ. ನಮ್ಮ ಹತ್ತಿರದವರನ್ನು ನೋಡಲಾದ ಪರಿಸ್ಥಿತಿ ಬಂದಿದೆ. ನನ್ನ ದೊಡ್ಡಮ್ಮ ತೀರಿಕೊಂಡ್ರು ಅವರ ಮೂಖವನ್ನು ನೋಡೋಕೆ ಆಗಿಲ್ಲ ನನಗೆ. ಒಬ್ಬರಲ್ಲ-ಇಬ್ಬರಲ್ಲ ಸಾವಿರಾರು ಜನರ ಗೋಳನ್ನು ನಾವು ನೋಡ್ತಿದ್ದೇವೆ. ಒಂದೊಂದು ಸಲ ಈ ಪರಿಸ್ಥಿತಿಗೆ ನಾವೇ ಹೊಣೆನಾ ಎಂದು ಅನಿಸಿಬಿಡುತ್ತದೆ. ಇದಕ್ಕೆ ಮತ್ಯಾರನ್ನು ದೋಷಿಸೋಕೆ ಆಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮತ್ತೊಬ್ಬರಿಗೆ ಹರಡದಂತೆ ನೋಡಿಕೊಳ್ಳೋದು ದೊಡ್ಡ ಸಾಹಸವಾಗಿಬಿಡುತ್ತದೆ. ದಯವಿಟ್ಟು ಎಲ್ಲರೂ ಮಾಸ್ಕ್ ಬಳಸಿ ‘ನೀವೂ ಬದುಕಿ, ಇನ್ನೊಬ್ಬರನ್ನು ಬದುಕಲು ಬಿಡಿ’ ಎಂದು ಹೇಳಿದ್ದಾರೆ.

ತಮಿಳು ಸಿನಿಮಾರಂಗದ ಖ್ಯಾತ ನಿರ್ದೇಶಕ ಕೆ.ವಿ ಆನಂದ್ ನಿಧನ

ರೀಲ್ ನಲ್ಲಿ ವಿಲ್ಲನ್… ರಿಯಲ್ ಹೀರೋ – ಕೊರೊನಾ ಸಂಕಷ್ಟ :  ಆಂಬ್ಯುಲೆನ್ಸ್ ಚಾಲಕನಾದ ಕನ್ನಡದ ನಟ ಅರ್ಜುನ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd