ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ ಧಕಡ್, ಗೆಲುವು ಕಂಡ ‘ಭೂಲ್ ಭುಲೈಯಾ 2
ಕಳೆದ ಸಿನಿ ಶುಕ್ರವಾರ ಬಾಲಿವುಡ್ ನಲ್ಲಿ ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗಿದ್ದವು. ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ‘ಭೂಲ್ ಭುಲೈಯಾ 2’ ಈ ವರ್ಷದ ಅತಿದೊಡ್ಡ ಓಪನರ್ ಹಿಂದಿ ಚಿತ್ರವಾಗಿದೆ. ಮೊದಲ ದಿನವೇ ಚಿತ್ರ 14 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನ ಭೂಲ್ ಭುಲೈಯಾ 2 ವ್ಯವಹಾರದಲ್ಲಿ ಶೇಕಡಾ 28 ರಷ್ಟು ಜಿಗಿತ ಕಂಡು ಬಂದಿದೆ. ಕಂಗನಾ ರಣಾವತ್ ಅಭಿನಯದ ‘ಧಕಡ್’ ಚಿತ್ರ ಮಕಾಡೆ ಮಲಗಿದೆ. ಎರಡನೇ ದಿನವೂ ಪ್ರೇಕ್ಷಕರನ್ನ ಸೆಳೆಯುವಲ್ಲಿ ಚಿತ್ರ ವಿಫಲವಾಗಿದೆ. ಶನಿವಾರದ ಬಾಕ್ಸ್ ಆಫೀಸ್ ವರದಿ ಇಲ್ಲಿದೆ ನೋಡಿ..
‘ಭೂಲ್ ಭುಲೈಯಾ 2
ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ‘ಭೂಲ್ ಭುಲೈಯಾ 2’ ಎರಡನೇ ದಿನ ಭಾಕ್ಸ್ ಆಫೀಸ್ ರೇಂಜ್ ಹೆಚ್ಚಿಸಿಕೊಂಡಿದೆ. ಬಾಕ್ಸ್ ಆಫೀಸ್ ಪಂಡಿತರ ಅಂದಾಜಿನ ಪ್ರಕಾರ, ಶನಿವಾರ ಈ ಚಿತ್ರ ಸುಮಾರು 18.25 ಕೋಟಿ ರೂ ಗಳಿಸಿದೆ ಎರಡು ದಿನದ ಒಟ್ಟು ಗಳಿಕೆ 32 ಕೋಟಿ ದಾಟಿದೆ.
ಧಕಡ್
ಕಂಗನಾ ರಣಾವತ್ ಅಭಿನಯದ ಆಕ್ಷನ್ ಥ್ರಿಲ್ಲರ್ ಚಿತ್ರ ‘ಧಕಡ್’ ಎರಡನೇ ದಿನವೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಶನಿವಾರವೂ ಚಿತ್ರ ಕಲೆಕ್ಷನ್ ನಲ್ಲಿ ಏರಿಕೆಯಾಗಿಲ್ಲ. ಇದೇ ಕಾರಣಕ್ಕೆ ಕಂಗನಾ ರಣಾವತ್ ಚಿತ್ರದ ಹಲವು ಶೋಗಳು ಎರಡನೇ ದಿನ ರದ್ದಾಗಿವೆ. ಇನ್ನು ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ‘ಧಕಡ್’ ಎರಡನೇ ದಿನ ಕೇವಲ 1.05 ಲಕ್ಷ ಕಲೆಕ್ಷನ್ ಮಾಡಿದೆ.
ಸರ್ಕಾರು ವಾರಿ ಪಾಟ
ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಅಭಿನಯದ ತೆಲುಗು ಬ್ಲಾಕ್ಬಸ್ಟರ್ ‘ಸರ್ಕಾರು ವಾರಿ ಪಟ’ ವಿಶ್ವ ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ಕಲೆಕ್ಷನ್ ನ್ನತ್ತ ಮುನ್ನುಗ್ಗುತ್ತಿದೆ. ಮೇ 12 ರಂದು ಭಾರತದಾದ್ಯಂತ ಬಿಡುಗಡೆಯಾದ ಈ ಚಿತ್ರ ಶುಕ್ರವಾರದವರೆಗೆ 185.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.