“ಶಾಂತಿ ಮತ್ತು ಸ್ಥಿರತೆಗಾಗಿ” 53 ಬಾರಿ ಮದುವೆಯದ ಭೂಪ…
ಒಬ್ಬ ವ್ಯಕ್ತಿ ಎಷ್ಟು ಸಾರಿ ಮದುವೆಯಾಗಬಹುದು ಅಬ್ಬಬ್ಬಾ ಅಂದ್ರೇ 1 ಬಾರಿ ಎರಡು ಬಾರಿ ಅಥವಾ ಮೂರ್ನಾಲ್ಕು ಸಾರಿ ಮದುವೆಯಾಗಿರುವ ಬಗ್ಗೆ ನಾವು ಕೇಳಿರುತ್ತೆವೆ ಆದರೆ ಸೌದಿಯ ಅರೇಬಿಯಾದ ಈ ವ್ಯಕ್ತಿ ಬರೊಬ್ಬರಿ 53 ಬಾರಿ ಮದುವೆಯಾಗಿದ್ದಾನೆ. 63 ವರ್ಷದ ಈ ವ್ಯಕ್ತಿ 43 ವರ್ಷದಲ್ಲಿ ಶಾಂತಿ ಮತ್ತು ನೆಮ್ಮದಿ ಪಡೆದುಕೊಳ್ಳಲು 53 ಬಾರಿ ಮದುವೆಯಾಗಿದ್ದಾನೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಈ ಕಥೆಯನ್ನ ಆತನೇ ವಿವರಿಸಿದ ಹಾಗೆ “ನಾನು ಮೊದಲ ಬಾರಿಗೆ ಮದುವೆಯಾದಾಗ, ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗಲು ಯೋಚಿಸಿರಲಿಲ್ಲ ಏಕೆಂದರೆ ಮಕ್ಕಳ್ಳೊಂದಿಗೆ ಆರಾಮಾದಾಯವಾಗಿ ಇದ್ದೆ.
ಆದರೆ ಕೆಲ ಸಮಸ್ಯೆಗಳಿಂದ 23 ನೇ ವಯಸ್ಸಿನಲ್ಲಿ ಮರು ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ಅಬು ಅಬ್ದುಲ್ಲ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಹೇಳಿದ್ದಾರೆ.
ಅವನ ಮತ್ತು ಅವನ ಹೆಂಡತಿಯರ ನಡುವಿನ ಸಮಸ್ಯೆಯಿಂದ ಮತ್ತೆ ಮತ್ತೆ ಮದುವೆಯಾಗಬೇಕಾಯಿತು ಎಂದಿದ್ದಾನೆ. “ನಾನು 53 ಮಹಿಳೆಯರನ್ನ ಮದುವೆಯಾಗಿದ್ದೇನೆ. ನಾನು 20 ನೇ ವಯಸ್ಸಿನಲ್ಲಿ ಮದುವೆಯಾದಾಗ ಅವಳು ನನಗಿಂತ 6 ವರ್ಷದ ದೊಡ್ಡವಳಾಗಿದ್ದಳು ಎಂದು” ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಅಬ್ದುಲ್ಲಾ ಅವರ ಅತಿ ಚಿಕ್ಕ ಮದುವೆ ಎಂದರೇ ಒಂದು ರಾತ್ರಿಯದ್ದು, ಹೆಚ್ಚಿನ ಮದುವೆಗಳು ಸೌದಿ ಅರೇಬಿಯಾ ಮಹಿಳೆಯರ ಜೊತೆಗೆ ನಡೆದಿದ್ದು ಬಿಸಿನೆಸ್ ಟ್ರಿಪ ನಲ್ಲಿ ವಿದೇಶಿಯರನ್ನೂ ಮದುವೆಯಾಗಿದ್ದಾರೆ. ಅಬ್ದುಲ್ಲಾ ಈಗ ಒಬ್ಬ ಮಹಿಳೆಯ ಜೊತೆ ಮದುವೆಯಾಗಿದ್ದು, ಮರು ಮದುವೆಯ ಕುರಿತು ಯೋಚಿಸುವುದಿಲ್ಲ ಎಂದು ಹೇಳಿದ್ದಾನೆ.