SC-ST ಮೀಸಲಾತಿ ಹೆಚ್ಚಳ : ಈಗ ಎಷ್ಟಿದೆ ? ಏರಿಕೆ ಎಷ್ಟು ?
ಬೆಂಗಳೂರು : ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ ಮಾಡಿದೆ.
ಸರ್ವಪಕ್ಷಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಾಗಮೋಹನ್ ದಾಸ್ ವರದಿ ಅನುಷ್ಠಾನಕ್ಕೆ ಸರ್ಕಾರ ಒಪ್ಪಿದೆ.
ನಾಳೆ ಸಂಪುಟ ಸಭೆ ಕರೆದು ಸರ್ಕಾರಿ ಮೀಸಲಾತಿ ಹೆಚ್ಚಳಕ್ಕೆ ಅಧಿಕೃತ ಆದೇಶದ ಮುದ್ರೆ ಹಾಕಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ನಾಗಮೋಹನ್ ದಾಸ್ ಸಮಿತಿಯ ಶಿಫಾರಸು ಏನು ?
ನಾಗಮೋಹನ್ ದಾಸ್ ಸಮಿತಿಯು ಎಸ್ ಸಿ ಮೀಸಲಾತಿಯನ್ನು ಶೇಕಡಾ 15 ರಿಂದ ಶೇಕಡಾ 17ಕ್ಕೆ, ಎಸ್ ಟಿ ಮೀಸಲಾತಿಯನ್ನು ಶೇಕಡಾ 3 ರಿಂದ 7ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ.

ಇವತ್ತಿನ ಸರ್ವ ಪಕ್ಷಗಳ ಸಭೆಯಲ್ಲಿ ವರದಿ ಜಾರಿಗೆ ಎಲ್ಲಾ ಪಕ್ಷಗಳು ಒಪ್ಪಿಗೆ ನೀಡಿದ್ದು, ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ ಮಾಡಿದೆ.
ಒಂದು ವೇಳೆ ಈ ಶಿಫಾರಸು ಜಾರಿ ಮಾಡಿದರೆ ಮೀಸಲಾತಿ ಪ್ರಮಾಣವು ಒಟ್ಟಾರೆ ಶೇಕಡಾ 56ಕ್ಕೆ ಹೆಚ್ಚಳವಾಗುತ್ತದೆ.
ಆದ್ರೆ ಮೀಸಲಾಯಿಯನ್ನು ಶೇಕಡಾ 50ಕ್ಕಿಂತ ಹೆಚ್ಚಿಗೆ ನಿಗದಿಪಡಿಸಬಾರದು ಎಂದು ಸುಪ್ರಿಂ ಕೋರ್ಟ್ ಸೂಚನೆ ನೀಡಿದೆ.
ಹಾಗಾದ್ರೆ
ಹಾಲಿ ಮೀಸಲಾತಿ ಎಷ್ಟಿದೆ?
ಎಸ್‌ಸಿ- 15%
ಹಿಂದುಳಿದ ವರ್ಗ 2 ಎ- 15%
ಪ್ರವರ್ಗ 1- 4%
2ಬಿ – 4%
3ಎ- 4%
3ಬಿ- 5%
ಎಸ್ ಟಿ- 3%
ಒಟ್ಟು ಮೀಸಲಾತಿ ಪ್ರಮಾಣ: 50%
ಎಷ್ಟು ಏರಿಕೆ ಆಗುತ್ತೆ?
ಈಗ ಎಸ್ ಟಿಗೆ 4%, ಎಸ್‌ಸಿ 2% ಮೀಸಲಾತಿ ಹೆಚ್ಚಳ ಮಾಡಿದ್ದರಿಂದ ಒಟ್ಟು ಮೀಸಲಾತಿ ಪ್ರಮಾಣ 56% ಏರಿಕೆಯಾಗಲಿದೆ.