ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜನರನ್ನು ಆಕರ್ಷಿಸಿದ್ದ ಕರಾವಳಿ ಕಂಬಳಕ್ಕೆ (Karavali Kambala) ತೆರೆ ಬಿದ್ದಿದೆ. ಒಟ್ಟು 6 ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. ಒಟ್ಟು 158 ಜೊತೆ ಕಂಬಳದ ಕೋಣಗಳು ಭಾಗಿಯಾಗಿದ್ದವು. ಇಂದು ಬೆಳಿಗ್ಗೆ ಕಂಬಳಕ್ಕೆ ತೆರೆ ಬಿದ್ದಿದೆ.
6 ವಿಭಾಗಗಳ ಕನಹಲಗೆ ವಿಭಾಗದಲ್ಲಿ, ಬೊಳ್ಳಂಬಳ್ಳಿಯ ಶ್ರೀರಾಮಚೈತ್ರ ಪರಮೇಶ್ವರ ಭಟ್ ಕೋಣ, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಕೋಣ, ಹಗ್ಗ ಕಿರಿಯ ವಿಭಾಗದಲ್ಲಿ ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯಾ ಪೂಜಾರಿ ಕೋಣ, ನೇಗಿಲ ಹಿರಿಯ ವಿಭಾಗದಲ್ಲಿ ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ ಕೋಣ, ನೇಗಿಲ ಕಿರಿಯ ವಿಭಾಗದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣ ಗೆಲುವು ಸಾಧಿಸಿವೆ.
ಈ ಕಂಬಳವನ್ನು 9 ರಿಂದ 10 ಲಕ್ಷ ವೀಕ್ಷಣೆ ಮಾಡಿದ್ದಾರೆ. ಕಂಬಳ ಓಟದಲ್ಲಿ ಗೆದ್ದ ಮಾಲೀಕರು, ಮತ್ತು ಓಟಗಾರರು ಸಂತಸವನ್ನ ಹಂಚಿಕೊಂಡರು. ಸ್ಪರ್ಧೆ ಮುಕ್ತಾಯದ ನಂತರ ಕಂಬಳ ವಿಜೇತರಿಗೆ ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.