ಬೆಂಗಳೂರು: ದೇಶ ಸೇರಿದಂತೆ ರಾಜ್ಯದಲ್ಲಿ ಮೂರನೇ ಬಾರಿಗೆ ಕೂಡ ಪ್ರಧಾನಿ ಮೋದಿ ಅಲೆ ಕಡಿಮೆಯಾಗುತ್ತಿಲ್ಲ. ಬದಲಾಗಿ ಈ ಬಾರಿಯೂ ಹೆಚ್ಚಾಗಿದೆ. ಹೀಗಾಗಿ ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಮೋದಿ ಹೆಸರಿನಿಂದಲೇ ಬಿಜೆಪಿ ಕಣಕ್ಕೆ ಇಳಿಯುತ್ತಿದ್ದು, ಠಕ್ಕರ್ ಕೊಡಲು ಕಾಂಗ್ರೆಸ್ ತಂತ್ರ ಹೆಣೆಯುತ್ತಿದೆ.
ಲೋಕಸಭಾ ಚುನಾವಣೆಗೆ ಘಟಾನುಘಟಿ ನಾಯಕರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ತಂತ್ರ ಹೆಣೆಯುತ್ತಿದೆ. ಹೀಗಾಗಿ ಸಚಿವರು ಹಾಗೂ ಹಿರಿಯ ನಾಯಕರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಸದ್ಯದ ಮಾಹಿತಿಯಂತೆ ಬೆಳಗಾವಿ – ಸತೀಶ್ ಜಾರಕಿಹೊಳಿ ಅಥವಾ ಜಾರಕಿಹೊಳಿ ಪುತ್ರಿ, ಚಿಕ್ಕೋಡಿ – ಲಕ್ಷ್ಮಣ್ ಸವದಿ ಪುತ್ರ ಅಥವಾ ಗಣೇಶ್ ಹುಕ್ಕೇರಿ, ಹಾವೇರಿ – ಹೆಚ್.ಕೆ. ಪಾಟೀಲ್ ಹೆಸರು ತೇಲಿ ಬರುತ್ತಿದೆ. ಮಂಗಳೂರು – ಯುಟಿ ಖಾದರ್ ಹೆಸರು ಕೇಳಿ ಬರುತ್ತಿದೆ. ಬಾಗಲಕೋಟೆ- ಸರ್ ನಾಯಕ್, ವೀಣಾ ಕಾಶಪ್ಪನವರ್ ಹೆಸರು ಮುಂಚೂಣಿಯಲ್ಲಿದೆ. ಕಲಬುರಗಿ- ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಹೆಸರು ಕೇಳಿ ಬರುತ್ತಿದೆ. ಉತ್ತರಕನ್ನಡ – ಆರ್ವಿ ದೇಶಪಾಂಡೆ, ಮೈಸೂರು- ಲಕ್ಷ್ಮಣ ಹಾಗೂ ಶುಶ್ರುತ್ ಗೌಡ. ಬಳ್ಳಾರಿ – ಸೌಪರ್ಣಿಕಾ ತುಕಾರಾಂ, ಬೆಂಗಳೂರು ಉತ್ತರ – ಸಚಿವ ಕೃಷ್ಣಭೈರೇಗೌಡ, ಬೆಂಗಳೂರು ದಕ್ಷಿಣ ಪ್ರಿಯಾಕೃಷ್ಣ ಅವರ ಹೆಸರು ಕೇಳಿ ಬರುತ್ತಿದೆ.