ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಹಿರಿಯ ಛಾಯಾಗ್ರಾಹಕ ಟಿ.ಎಲ್.ರಾಮಸ್ವಾಮಿ(89) ವಿಧಿವಶರಾಗಿದ್ದಾರೆ. ಆರು ದಶಕಗಳ ಕಾಲ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದ ಅವರು ವಯೋಸಹಜ ಕಾಯಿಲೆಯಿಂದ ಇಂದು ಮುಂಜಾನೆ ನಿಧನರಾದರು.
ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲ ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಬಳಗದಲ್ಲಿ ಛಾಯಾಗಾಹಕರಾಗಿ ಸೇವೆ ಸಲ್ಲಿಸಿದ್ದ ರಾಮಸ್ವಾಮಿ ಆ ನಂತರದಲ್ಲಿ ಮುಕ್ತ ಪತ್ರಿಕಾ ಛಾಯಾಗ್ರಾಹಕರಾಗಿ (ಫ್ರೀ ಲ್ಯಾನ್ಸ್) ಸಹ ಕೆಲಸ ಮಾಡಿದ್ದರು. ಬಳಿಕ ಮೈಸೂರು ನ್ಯೂಸ್ ಫೋಟೋಸ್ ಎಂಬ ಸಂಸ್ಥೆ ಸ್ಥಾಪಿಸಿದ್ದರು. ಅವರು ಜಮ್ಮು ಹಾಗೂ ಪಂಜಾಬಿನ ಗಡಿಯಲ್ಲಿ ಯುದ್ಧ ವರದಿಯ ತರಬೇತಿಯನ್ನೂ ಪಡೆದಿದ್ದರು. ಇನ್ನು ರಾಮಸ್ವಾಮಿಯವರ ಪ್ರಖ್ಯಾತಿಯನ್ನು, ಪತ್ರಿಕಾ ಕ್ಷೇತ್ರಕ್ಕೆ ಸೇವೆಯನ್ನೂ ಗುರುತಿಸಿ ಅವರಿಗೆ ಮಾಧ್ಯಮ ಅಕಾಡೆಮಿ , ರಾಜ್ಯೋತ್ಸವ ಪ್ರಶಸ್ತಿ ಸೇರಿ ಅನೇಕ ಗೌರವಗಳು ಲಭಿಸಿವೆ.








