ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಚಳಿಗಾಲಕ್ಕೂ ಮುನ್ನ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿತವಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಂತೆ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (Air Quality Index) 224 ದಾಖಲಾಗಿದೆ. ತಾಪಮಾನವು 15.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಕಳೆದ ವರ್ಷಕ್ಕಿಂತ ಮೂರು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.
ಕೇಂದ್ರದೊಂದಿಗೆ ರಾಜ್ಯಗಳ ಜಂಟಿ ಸಭೆಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ದೆಹಲಿಯಲ್ಲಿ ಪಟಾಕಿ ಹಾಗೂ ಎನ್ಸಿಆರ್ ಭಾಗದಲ್ಲಿ ಡಿಸೆಲ್ ಬಸ್ಗಳ ಸಂಚಾರ ರದ್ದು ಮಾಡಲು ಕೇಂದ್ರ ಪರಿಸರ ಸಚಿವಾಲ ಒತ್ತಾಯಿಸುತ್ತಿದೆ.
ದೆಹಲಿಯು ಭಾರತದಲ್ಲಿ ಅತ್ಯಂತ ಕಲುಷಿತ ನಗರವಾಗಿದೆ. ಎನ್ಸಿಆರ್ ದೆಹಲಿ, ಫರಿದಾಬಾದ್, ಗಾಜಿಯಾಬಾದ್, ನೊಯ್ಡಾ ಮತ್ತು ಮೀರತ್ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳನ್ನು ಪಡೆದುಕೊಂಡಿವೆ.