ಗಾಂಧಿನಗರ: ಮದರಸಾದಲ್ಲಿ ಶಿಕ್ಷಕನೊಬ್ಬ 10ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪವೊಂದು ಕೇಳಿ ಬಂದಿದ್ದು, ಆತನನ್ನು ಬಂಧಿಸಲಾಗಿದೆ.
ಗುಜರಾತ್ (Gujarat) ಜುನಾಗಢದ ಮದರಸಾವೊಂದರ (Madrasa) ಲ್ಲಿಯೇ ಈ ಘಟನೆ ಕೇಳಿ ಬಂದಿದ್ದು, ಅಲ್ಲಿಯ ಶಿಕ್ಷಕನನ್ನು (Teacher) ಪೊಲೀಸರು (Police) ಬಂಧಿಸಿದ್ದಾರೆ. ಅಲ್ಲದೇ, ವಿದ್ಯಾರ್ಥಿಗಳು ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಮದರಸಾ ಟ್ರಸ್ಟಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿನಿಯೊಬ್ಬಳು ತನ್ನ ಶಿಕ್ಷಕನೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ ತಾಯಿ, ಸಂಶಯದಿಂದ ಆಕೆಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆ ನಂತರ ತಾಯಿ ದೂರು ದಾಖಲಿಸಿದ್ದಾಳೆ. ಶಿಕ್ಷಕನ ಕೃತ್ಯ ಬಯಲಿಗೆ ಬರುತ್ತಿದ್ದಂತೆ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದರು. ಪೊಲೀಸರು ಇಬ್ಬರನ್ನೂ ಪತ್ತೆಮಾಡಿ ಬಂಧಿಸಿದ್ದಾರೆ.
ಶಾಲೆಗೆ ತೆರಳಿ ವಿದ್ಯಾರ್ಥಿಗಳನ್ನು ವಿಚಾರಿಸಿದ ನಂತರ 10 ವಿದ್ಯಾರ್ಥಿಗಳು ದೌರ್ಜನ್ಯದ ವಿಚಾರ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಬೇರೆಯವರಿಗೆ ಹೇಳಿದರೆ ಕೊಲ್ಲುವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ವಿಚಾರ ಟ್ರಸ್ಟಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಲು ತಿಳಿಸಿದ್ದಾರೆ.