ಬೆಂಗಳೂರು: ಇಲ್ಲಿಯ ಕಿಮ್ಸ್ ಆಸ್ಪತ್ರೆಯಲ್ಲಿ (kims hospital) ಲೈಂಗಿಕ ಕಿರುಕುಳ ಆರೋಪ ನಡಿದಿದೆ ಎಂಬ ಆರೋಪವೊಂದು ಕೇಳಿ ಬಂದಿದೆ.
ವೈದ್ಯನೊಬ್ಬ ಮಹಿಳಾ ವೈದ್ಯೆಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ನನ್ನನ್ನೇ ಫಾಲೋ ಮಾಡುತ್ತಾನೆ. ಮೈ, ಕೈ ಮುಟ್ಟಾನೆ ಎಂದು ಬನಶಂಕರಿ ಠಾಣೆಗೆ (Banashankari Police Station) ಕಿಮ್ಸ್ ವೈದ್ಯೆ ದೂರು ನೀಡಿದ್ದಾರೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಫಾರ್ಮಾ ಕಾಗ್ನಸಿ ವಿಭಾಗದ ಮುಖ್ಯಸ್ಥೆಯಾಗಿರುವ ವೈದ್ಯೆಗೆ ಅದೇ ವಿಭಾಗದಲ್ಲಿ ಕೆಲಸ ಮಾಡ್ತಿರುವ ಡಾ. ರಾಜು ಎಂಬುವವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.