Shakib Al Hasan – ಪಂದ್ಯ ಸೋಲಿನ ಬಗ್ಗೆ ಶಕಿಬ್ ಹೇಳಿದ್ದೇನು ?
ಟಿ 20 ವಿಶ್ವಕಪ್ ಭಾಗವಾಗಿ ಅಡಿಲೇಡ್ ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶದ ವಿರುದ್ಧ ಐದು ರನ್ ಗಳಿಂದ ಗೆಲುವು ಸಾಧಿಸಿದೆ.
ಈ ಜಯದೊಂದಿಗೆ ಟೀಂ ಇಂಡಿಯಾ ಸೆಮೀಸ್ ಹಾದಿ ಸುಗಮವಾಗಿದೆ. ಇತ್ತ ಪಂದ್ಯ ಸೋಲಿನಿಂದ ಬಾಂಗ್ಲಾದೇಶದ ಸೆಮೀಸ್ ಹಾದಿ ದುರ್ಗಮವಾಗಿದೆ.
ಒಂದು ಹಂತದಲ್ಲಿ ಬಾಂಗ್ಲಾದೇಶ ತಂಡ ಸುನಾಯಾಸವಾಗಿ ಪಂದ್ಯವನ್ನು ಗೆದ್ದುಕೊಳ್ಳುತ್ತದೆ ಎಂದು ಎಲ್ಲರೂ ಭಾವಿಸಿದ್ದರು.
ಆದ್ರೆ ಬಾಂಗ್ಲಾ ಜೋರಿಗೆ ಮಳೆ ಬ್ರೇಕ್ ಹಾಕಿತು. ಆ ನಂತರ ಮತ್ತೆ ಮ್ಯಾಚ್ ಶುರುವಾದರೂ ಟೀಂ ಇಂಡಿಯಾದ ಬೌಲರ್ ಗಳು ಬಾಂಗ್ಲಾವನ್ನು ಕಟ್ಟಿಹಾಕಿದರು.
ಈ ಸೋಲಿನ ಬಗ್ಗೆ ಬಾಂಗ್ಲಾದೇಶ ಕ್ಯಾಪ್ಟನ್ ಶಕಿಬ್ ಅಲ್ ಹಸನ್ ಸ್ಪಂದಿಸಿದ್ದಾರೆ.

ಶಕಿಬ್ ಮಾತನಾಡುತ್ತಾ, ಭಾರತ ವಿರುದ್ಧ ಮತ್ತೆ ನಮ್ಮ ಹಳೆ ಕಥೆ ಮುಂದುವರೆದಿದೆ.ಗೆಲುವಿನ ಅಂಚಿನವರೆಗೂ ಬರುವುದು, ಆ ನಂತರ ಸೋಲು ಕಾಣುವುದು.
ಇಂತಹ ರಣ ರೋಚಕ ಪಂದ್ಯಗಳನ್ನು ನಾವು ಹೆಚ್ಚಾಗಿ ಆಡಿಲ್ಲ. ಅದಕ್ಕಾಗಿಯೇ ನಾವು ಸಂದರ್ಭವನ್ನು ಅಲೋಕಿಸುವಲ್ಲಿ ವಿಫಲರಾದೆವು.
ಅನಾನುಭವ ಕೂಡ ನಮ್ಮ ಸೋಲಿಗೆ ಕಾರಣವಾಗಿದೆ. 185 ಅಥವಾ 151 ರನ್ ಆದ್ರೂ ಗಳಿಸುವ ಲಕ್ಷ್ಯವೇ ಆಗಿದೆ.
ಆದ್ರೆ ದುರಾದೃಷ್ಟವಷಾತ್ ನಾವು ಗೆಲ್ಲಲಾಗಲಿಲ್ಲ. ಕೊನೆಯ 2 ಓವರ್ ಗಳಲ್ಲಿ 30 ರನ್ ಸಾಧ್ಯವೇ ಆಗಿದ್ದರೂ ಅದು ಜರುಗಲಿಲ್ಲ ಎಂದಿದ್ದಾರೆ.