shakthiman
“ಶಕ್ತಿಮಾನ್” ಖ್ಯಾತಿಯ ನಟ ಮುಖೇಶ್ ಖನ್ನಾ ಅವರು ರೀಲ್ ಲೈಫ್ ನಲ್ಲಿ ಹೀರೋ ಆದ್ರೂ ರಿಯಲ್ ಲೈಫ್ ನಲ್ಲಿ ಅವರ ವರ್ತನೆ ವಿವಾದಗಳಿಗೆ ಕಾರಣವಾಗುತ್ತಿದೆ. ಇತ್ತೀಚೆಗೆ ಸಾಕಷ್ಟು ಚರ್ಚೆಯಲ್ಲಿರುವ ಮುಖೇಶ್ ಅವರು ಅಕ್ಷಯ್ ನಟನೆಯ ಲಕ್ಷ್ಮೀ ಬಾಂಬ್ ಸಿನಿಮಾದ ಟೈಟಲ್ ಗೆ ವಿರೋಧ ವ್ಯಕ್ತಪಡಿಸಿ ಸುದ್ದಿಯಾಗಿದ್ರು. ಆದ್ರೆ ಇದ್ಯಾವುದೂ ಸಹ ಅವರ ನೆಗೆಟೀವ್ ಇಮೇಜ್ ಬಿಂಬಿತವಾಗುವಂತೆ ಮಾಡಿರಲಿಲ್ಲ.
ಆದ್ರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮುಖೇಶ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಅದ್ರಲ್ಲೂ ಅವರ ಹೇಳಿಕೆ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಅವರು ನೀಡಿದ ಹೇಳಿಕೆಯಾದ್ರೂ ಏನು. ಅದ್ಯಾವ ಹೇಳಿಕೆಗೆ ಷ್ಟೊಂದು ಆಕ್ರೋಶ ವ್ಯಕ್ತವಾಗುತ್ತಿದೆ ಗೊತ್ತಾ.
ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಅಂದ್ರೆ ನೇರವಾಗಿ METOO ಬಗ್ಗೆ ಮಾತನಾಡಿರುವ ಮುಖೇಶ್ ಖನ್ನಾ ಅವರು ಮನೆ ಕೆಲಸ ಮಾಡುವುದಷ್ಟೆ ಮಹಿಳೆಯರ ಕರ್ತವ್ಯವೆಂಬಂತೆ ಹೇಳಿಕೊಂಡಿದ್ದಾರೆ. ಅವರ ಹೇಳಿಕೆಯ ಪ್ರಕಾರ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆಗುತ್ತಿರುವುದು ವಿಶೇಷವಾಗಿ ಮೀಟೂ ಆರಂಭವಾಗಿದ್ದು, ಮಹಿಳೆ ಮನೆಗೆಲಸ ಬಿಟ್ಟು ಹೊರಗೆ ಬಂದಿದ್ದರಿಂದ ಎಂಬುವಂತಿದೆ.
ಮುಖೇಶ್ ಅವರು ಮಹಿಳೆಯರ ಬಗ್ಗೆ ಮಾತನಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅಲ್ಲದೇ ಅವರ ಹೇಳಿಕೆ ವಿವಾದ ಸೃಷ್ಟಿಸಿದ್ದು, ಸಾಕಷ್ಟು ವಿರೋಧವೂ ವ್ಯಕ್ತವಾಗಿದೆ. ವಿಡಿಯೋದಲ್ಲಿ ಮುಖೇಶ್ ಖನ್ನಾ, ಮನೆಗೆಲಸ ಮಾಡುವುದು ಮಹಿಳೆಯರ ಆಧ್ಯ ಕರ್ತವ್ಯ ಎಂದಿದ್ದಾರೆ. ಹೀಗಾಗಿ ಅವರ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿದೆ. ಅಷ್ಟೇ ಅಲ್ವಂತೆ ಈ ಸಮಸ್ಯೆ ಶುರುವಾಗಿದ್ದು, ಮಹಿಳೆಯು ತಾನು ಪುರುಷರಂತೆ ಕೆಲಸ ಮಾಡಲು ಹೊರಗೆ ಬಂದಾಗ, ಆಗಲೇ ಈ ಮೀಟೂ ಎಲ್ಲಾ ಪ್ರಾರಂಭವಾಗಿದ್ದು, ಮಹಿಳೆ ಬೇರೆ ಪುರುಷರು ಬೇರೆ ಎಂದು ಮುಖೇಶ್ ಖನ್ನಾ ಹೇಳಿಕೆ ನೀಡಿರೋದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇನ್ನೂ ಮುಂದುವರೆದು ಮಾತನಾಡಿರುವ ಮುಖೇಶ್ ಖನ್ನಾ, ಮಹಿಳೆಯರು ಕೆಲಸಕ್ಕೆ ಹೋಗುವುದರಿಂದ ಅದರ ಪರಿಣಾಮ ಆಗುವುದು ಮಕ್ಕಳ ಮೇಲೆ. ಮಕ್ಕಳಿಗೆ ತಾಯಿ ಸಿಗುವುದಿಲ್ಲ, ಮಕ್ಕಳು ಅಜ್ಜಿ-ತಾತನ ಜೊತೆ ಕೂತು ಅತ್ತೆ-ಸೊಸೆ ಧಾರಾವಾಹಿ ನೋಡುತ್ತಿರುತ್ತಾರೆ ಎಂದು ಹೇಳಿದ್ದಾರೆ. ಒಟ್ಟಾರೆ METOO ಅಂತಹ ಪ್ರಕರಣಗಳಿಗೆ ಕಾರಣ ಮಹಿಳೆಯರು ಮನೆಕೆಲಸ ಬಿಟ್ಟು ಹೊರಗಡೆ ಬರುತ್ತಿರೋದು. ಮಹಿಳೆರು ಪುರುಷರಿಗೆ ಸಮಾನರಲ್ಲ. ಮನೆಗೆಲಸಕ್ಕಷ್ಟೇ ಸೀಮಿತವೆಂಬಂತೆ ಬಿಂಬಿಸಲಾಗಿರುವ ಅವರ ಹೇಳಿಕೆ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
shakthiman
ಬಾಲಿವುಡ್ ನ ಕಿಂಗ್ ಖಾನ್ ಗೆ ಕಾಟ ಕೊಟ್ಟಿದ್ದ ಆ ನಟಿ ಯಾರು..!
ರಾಜಕೀಯದಲ್ಲಿ ಸೋಲುಂಡಿದ್ದ ಊರ್ಮಿಳಾ ರಾಜಕೀಯ ಭವಿಷ್ಯಕ್ಕೆ ಹೊಸಬೆಳಕು..!
‘ಕಾಸ್ಟಿಂಗ್ ಕೌಚ್’ ನ ಕರಾಳ ಅನುಭವ ಹಂಚಿಕೊಂಡ ‘ದಂಗಲ್’ನಟಿ!
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್ : ಪೋಟೋಗಳು ವೈರಲ್..!
ನವೆಂಬರ್ 7ಕ್ಕೆ ಕಮಲ್ ಹಾಸನ್ ಬರ್ತ್ ಡೇ : 232ನೇ ಚಿತ್ರದ ಫಸ್ಟ್ ಲುಕ್ ರಿಲೀಸ್!
ಸಂಗೀತ ದಿಗ್ಗಜ ಎ.ಆರ್ ರೆಹಮಾನ್ ಅವರ ಸಂಗೀತಕ್ಕೆ ಧ್ವನಿಯಾಗುತ್ತಿದ್ದಾರೆ ಧನುಷ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel