Sharukh Khan
ಬಾಲಿವುಡ್ ನ ಬಾದ್ ಶಾ , ಕಿಂಗ್ ಖಾನ್ ಶಾರುಖ್ ಗೆ ಲೆಕ್ಕವಿಲ್ಲದಷ್ಟು ಅಭಿಮಾನಿಗಳಿದ್ದಾರೆ. ದೇಶದ ಒನ್ ಆಫ್ ದ ಟಾಪ್ ನಟ ಶಾರೂಖ್ ಖಾನ್. ಆದರೆ ಸಾರೂಖ್ ಖಾನ್ ಗೆ ನಟಿಯೊಬ್ಬರು ಕುಡಿದು ಗೋಳು ಹುಯ್ದುಕೊಂಡಿದ್ದರು ಎಂದ್ರೆ ಆಶ್ಚರ್ಯ ಆಗದೇ ಇರುತ್ತಾ.
ಹೌದು.. ನಟಿ ಸ್ವರಾ ಭಾಸ್ಕರ್ ಅವರು ಪಾರ್ಟಿಯೊಂದರಲ್ಲಿ ಚೆನ್ನಾಗಿ ಕುಡಿದು ಶಾರುಖ್ ಅವರನ್ನೇ ಚೆನ್ನಾಗಿ ಗೋಳು ಹೊಯ್ದುಕೊಂಡಿದ್ದರಂತೆ. ಇದು ಹೇಗೆ ಗೊತ್ತಾಯ್ತು ಅಂದ್ಕೋಬೇಡಿ. ಅಂದ್ಹಾಗೆ ಈ ಬಗ್ಗೆ ಸ್ವತಃ ಸ್ವರಾ ಭಾಸ್ಕರ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ನಿರ್ದೇಶಕ ಆನಂದ್ ಎಲ್ ರಾಯ್ ಅವರ ಹುಟ್ಟುಹಬ್ಬಕ್ಕೆ ನೀಡಲಾಗಿದ್ದ ಪಾರ್ಟಿಯಲ್ಲಿ ಈ ಘಟನೆ ನಡೆದಿತ್ತು ಎಂದು ನಟಿ ಸ್ಮರಿಸಿಕೊಂಡಿದ್ದಾರೆ. ಶಾರುಖ್ ಖಾನ್ ಸಹ ಹಾಜರಿದ್ದ ಆ ಪಾರ್ಟಿಯಲ್ಲಿ ಸ್ವರಾ ಭಾಸ್ಕರ್ ಸಾಕಷ್ಟು ಕುಡಿದಿದ್ದರಂತೆ. ಕುಡಿದ ಮತ್ತಿನಲ್ಲಿ ಶಾರುಖ್ ಖಾನ್ ಜೊತೆಗೆ ಏನೇನೋ ಮಾತನಾಡಿಬಿಟ್ಟೆ, ಶಾರುಖ್ ಖಾನ್ ಅವರಿಗೆ ಬಹಳ ಕಾಟ ಕೊಟ್ಟುಬಿಟ್ಟೆ ಎಂದಿದ್ದಾರೆ. ಆದರೆ ಯಾವ ರೀತಿ ಕಾಡಿಸಿದ್ದಾರೆ ಎಂಬ ಬಗ್ಗೆ ಮಾತ್ರ ಮಾಹಿತಿ ಬಿಟ್ಟುಕೊಟ್ಟಿಲ್ಲ ಸ್ವರಾ.
ಇದೇ ವೇಳೆ ಮಾತುಮುಂದುವರೆಸಿದ್ದ ನಟಿ ನಾನು ಕಾಟ ಕೊಟ್ಟರೂ ಶಾರುಖ್ ಖಾನ್ ಅವರು ಬಹಳ ವಿನಯದಿಂದಿದ್ದರು. ನಾನು ಎಷ್ಟೇ ಕಾಡಿಸಿದರೂ ಸಹ ಅವರು ನನ್ನ ಮೇಲೆ ಕೋಪ ಮಾಡಿಕೊಳ್ಳಲಿಲ್ಲ. ಅವರು ಜಂಟಲ್ ಮನ್ ನಂತೆ ವರ್ತಿಸಿದರು ಎಂದಿದ್ದಾರೆ. ಸದ್ಯ ಸ್ವರಾ ಭಾಸ್ಕರ್ ಅವರು ಕೆಲ ವೆಬ್ ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಬಾಲಿವುಡ್ ಕಿಂಗ್ ಖಾನ್ ಸಹ ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Sharukh Khan
ರಾಜಕೀಯದಲ್ಲಿ ಸೋಲುಂಡಿದ್ದ ಊರ್ಮಿಳಾ ರಾಜಕೀಯ ಭವಿಷ್ಯಕ್ಕೆ ಹೊಸಬೆಳಕು..!
‘ಕಾಸ್ಟಿಂಗ್ ಕೌಚ್’ ನ ಕರಾಳ ಅನುಭವ ಹಂಚಿಕೊಂಡ ‘ದಂಗಲ್’ನಟಿ!
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್ : ಪೋಟೋಗಳು ವೈರಲ್..!
ನವೆಂಬರ್ 7ಕ್ಕೆ ಕಮಲ್ ಹಾಸನ್ ಬರ್ತ್ ಡೇ : 232ನೇ ಚಿತ್ರದ ಫಸ್ಟ್ ಲುಕ್ ರಿಲೀಸ್!
ಸಂಗೀತ ದಿಗ್ಗಜ ಎ.ಆರ್ ರೆಹಮಾನ್ ಅವರ ಸಂಗೀತಕ್ಕೆ ಧ್ವನಿಯಾಗುತ್ತಿದ್ದಾರೆ ಧನುಷ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel