RBI ನ ಅಧ್ಯಕ್ಷರಾಗಿ ಶಕ್ತಿಕಾಂತ್ ದಾಸ್ ಅವರ ಮರುನೇಮಕ

1 min read

RBI ನ ಅಧ್ಯಕ್ಷರಾಗಿ ಶಕ್ತಿಕಾಂತ್ ದಾಸ್ ಅವರ ಮರುನೇಮಕ

ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಅಧ್ಯಕ್ಷರಾಗಿ  ಶಕ್ತಿಕಾಂತ್ ದಾಸ್ ಅವರನ್ನ  ಮುಂದಿನ ಮೂರು ವರ್ಷಗಳ ವರೆಗೆ ಮರು ನೇಮಕ ಮಾಡಲಾಗಿದೆ. ಶಕ್ತಿಕಾಂತ್ ದಾಸ್ ಅವರ ಅಧಿಕಾರಾವಧಿ ಈ ಡಿಸೆಂಬರ್ 11 ಕ್ಕೆ ಕೊನೆಗೊಳ್ಳಲಿತ್ತು. ಕ್ಯಾಬಿನೇಟ್ ನೇಮಕಾತಿ ಸಮಿತಿಯು ಡಿಸೆಂಬರ್ ನಂತರ  ಮತ್ತೆ ಮೂರು ವರ್ಷ ಅಥವಾ ಮರು ನೇಮಕ ಮಾಡುವವರೆಗೂ ಮುಂದುವರೆಯವಂತೆ ಆದೇಶಿಸಿದೆ.

ಶಕ್ತಿಕಾಂತ್ ದಾಸ್ ಆವರು ಹಣಕಾಸು ಸಚಿವಾಲಯದಲ್ಲಿ  ಆರ್ಥಿಕ ಇಲಾಖೆಗಳ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಸಿರುವ ಅನುಭವವನ್ನ ಹೊಂದಿದ್ದಾರೆ. ಡಿಸೆಂಬರ್ 11 2018 ರಂದು ಆರ್ ಬಿ ಐ ನ ಗವರ್ನರ್ ಆಗಿ ಆಯ್ಕೆಯಾಗಿದ್ದರು.

38 ವರ್ಷಗಳ ವೃತ್ತಿಜೀವನದಲ್ಲಿ, ಹಣಕಾಸು, ತೆರಿಗೆ, ಕೈಗಾರಿಕೆಗಳು, ಮೂಲಸೌಕರ್ಯ, ಇತ್ಯಾದಿ ಕ್ಷೇತ್ರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ದೆಹಲಿ ವಿಶ್ವ ವಿದ್ಯಾಲಯದ ಸೆಂಟ್ ಸ್ಟೀಫನ್ ಕಾಲೇಜಿನಲ್ಲಿ ಸ್ನಾತಕೋತರ ಪಧವಿಯನ್ನ ಪಡೆದಿದ್ದಾರೆ.

ಶಕ್ತಿಕಾಂತ್ ದಾಸ್ ಅವರು 8 ಕೇಂದ್ರ ಬಜೆಟ್ ಗಳನ್ನ ನೇರವಾಗಿ ತಯಾರಿ ಮಾಡಿರುವ ಅನುಭವವನ್ನ ಹೊಂದಿದ್ದಾರೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಪ್ರಮುಖ ಹುದ್ದೆಗಳನ್ನ ಅಲಂಕರಿಸಿರುವ ಇವರು ವಿಶ್ವಬ್ಯಾಂಕ್, ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್,  ನ್ಯೂ ಡೆವಲಪಮೆಂಟ್ ಬ್ಯಾಂಕ್ ಗಳಲ್ಲಿ  ಗವರ್ನರ್ ಆಗಿಯೂ ಸಹ ಕೆಲಸ ಮಾಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd