ಇತ್ತೀಚೆಗಷ್ಟೇ ಬಾಲಿವುಡ್ ನ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಗ್ ಕೇಸ್ ನಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ.. ಕಳೆದ ವರ್ಷ ಮುಂಬೈ ಜೈಲಿನಲ್ಲಿ 22 ದಿನಗಳನ್ನು ಕಳೆದಿದ್ದ ಡ್ರಗ್ಸ್ ಪ್ರಕರಣದ ಎಲ್ಲಾ ಆರೋಪಗಳಿಂದ ಇಂದು ಮುಕ್ತರಾಗಿದ್ದಾರೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ), ಆರ್ಯನ್ ಖಾನ್ ದೇಹದಲ್ಲಿ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಮತ್ತು ಅವರ ಮತ್ತು ಇತರ ಐವರ ವಿರುದ್ಧ ಆರೋಪ ಮಾಡಲು ಯಾವುದೇ “ಸಾಧಾರಣ ಪುರಾವೆ” ಇಲ್ಲ ಎಂದು ಆರೋಪಟ್ಟಿಯಲ್ಲಿ ಹೇಳಲಾಗಿದೆ.. ಇತರ ಹದಿನಾಲ್ಕು ಆರೋಪಿಗಳ ವಿರುದ್ಧ ಡ್ರಗ್ಸ್ ವಿರೋಧಿ ಸಂಸ್ಥೆ ಆರೋಪ ಹೊರಿಸಿದೆ. ಅಂದ್ಹಾಗೆ ಆರ್ಯನ್ ಖಾನ್ ವಿರುದ್ಧ ಡ್ರಗ್ ಕೇಸ್ ದಾಖಲಾಗಿ ಆರ್ಯನ್ ಜೈಲಿನಲ್ಲಿದ್ದಾಗ ಅನೇಕರು ಆರ್ಯನ್ ಖಾನ್ ಪರ ನಿಂತಿದ್ದರು..
ಈಗ ನಟ ಶತ್ರುಘ್ನ ಸಿನ್ಹಾ, ಶಾರುಖ್ ಖಾನ್ ಪುತ್ರನ ಪರ ನಿಂತಿದ್ದಾರೆ.. ಆರ್ಯನ್ ಖಾನ್ ಶಾರುಕ್ ಮಗ ಎಂಬ ಕಾರಣಕ್ಕಾಗಿ ಆರ್ಯನ್ ಖಾನ್ ಅನ್ನು ಬಲಿಪಶು ಮಾಡಿದ್ದಾರೆ ಎಂದದಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಶತ್ರುಘ್ನ ಸಿನ್ಹಾ, ಮುಗ್ಧ ಹುಡುಗ ಆರ್ಯನ್ ಯಾವುದೇ ಸಾಕ್ಷಿ ಮತ್ತು ಪುರಾವೆಯಿಲ್ಲದೇ ಬಂಧಿಸಿದ್ದರು. ಸೂಕ್ತ ತನಿಖೆ ಕೈಗೊಳ್ಳಬೇಕಿತ್ತು. ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಎಂಬ ಕಾರಣಕ್ಕೆ ಆರ್ಯನ್ ಅನ್ನು ಬಲಿಪಶು ಮಾಡಿದ್ದಾರೆ. ಇಂತಹ ಕಾರ್ಯಕ್ಕೆ ಹೆಜ್ಜೆ ಇಡುವ ಮುನ್ನ ಸಾವಿರ ಬಾರಿ ಯೋಚಿಸಬೇಕು ಎಂದಿದ್ದಾರೆ.








