Shashikala jolle | ಪ್ರಿಯಾಂಕ್ ಖರ್ಗೆ ಗೌರವ ಕಳೆದುಕೊಂಡಿದ್ದಾರೆ
ಕೊಪ್ಪಳ : ಪ್ರಿಯಾಂಕ್ ಖರ್ಗೆ ಅವರು ವ್ಯಕ್ತಿತ್ವ, ಗೌರವ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಸಚಿವೆ ಶಶಿಕಲಾ ಜೊಲ್ಲೆ ಆಕ್ರೋಶ ಹೊರಹಾಕಿದ್ದಾರೆ.
ಪ್ರಿಯಾಂಖ್ ಖರ್ಗೆ ಅವರ ಲಂಚ – ಮಂಚ ಹೇಳಿಕೆಗೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದು, ಅವರು ತಮ್ಮ ಗೌರವವನ್ನು ಕಳೆದುಕೊಂಡಿದ್ದಾರೆ. ಅವರ ವ್ಯಕ್ತಿತ್ವ ಕಳೆದುಕೊಂಡಿದ್ದಾರೆ, ಅವರು ರಾಜಕೀಯ ಮನೆತನ, ಅವರ ತಂದೆಯವರ ಬಗ್ಗೆ ಗೌರವವಿದೆ. ಆದರೆ ಅವರ ವ್ಯಕ್ತಿತ್ವಕ್ಕೆ ಗೌರವ ಕಳೆದುಕೊಂಡಿದ್ದಾರೆ ಎಂದರು.
ಇದೇ ವೇಳೆ ಸಿಎಂ ಬದಲಾವಣೆ ಬಗ್ಗೆ ಮಾತನಾಡಿ, ಸಿಎಂ ಬದಲಾವಣೆ ಹೈಕಮಾಂಡ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಇನ್ನು ಕೊಪ್ಪಳ ಪವನಪುತ್ರ ಆಂಜನೇಯನ ಜನ್ಮ ಸ್ಥಳ. ಅಂಜನಾದ್ರಿ ನಮ್ಮದು ಎಂದು ಹೇಳಬೇಕಿಲ್ಲ ಅಲ್ಲಿ ಅಭಿವೃದ್ದಿಯಾಗಲಿದೆ. ಮುಜರಾಯಿ ಇಲಾಖೆಯಿಂದ 120 ಕೋಟಿ ಅಭಿವೃದ್ದಿ ಚಾಲನೆ ಸಿಕ್ಕಿದೆ. ಅಯೋಧ್ಯ ರಾಮಲಾಲ್ ಜನ್ಮ ಅಭಿವೃದ್ದಿಯಂತೆ.

ಅಯೋದ್ಯೆಯಿಂದ ಅಂಜನಾದ್ರಿಯವರೆಗೂ ಸಂಪರ್ಕ ಕಲ್ಪಿಸಲಾಗುವುದು. ಕಾಶಿ ದರ್ಶನಕ್ಕಾಗಿ 30 ಹೋಗುತ್ತಿದ್ದಾರೆ. 500 ಜನರಿಗೆ ಪ್ರತಿಯೊಬ್ಬರಿಗೆ 5000 ರೂಪಾಯಿ ಜಮಾ ಆಗಿದೆ.
ಭಾರತ ಗೌರವ ರೈಲು ಆರಂಭಿಸಲಾಗುವುದು. ಬೆಂಗಳೂರಿನ ಆಯೋದ್ಯೆಯಿಂದ ಕಾಶಿಯವರೆಗೂ 7 ದಿನ ಪ್ರಯಾಣ, ಕಾಶಿ, ಅಯೋದ್ಯೆ, ಪ್ರಯಾಗರಾಜ್, ಕಾಶಿಯಿಂದ ಆರಂಭಿಸಲಾಗುವುದು.
1040 ಕೋಟಿ ರೂಪಾಯಿ ಯೋಜನೆ ಆರಂಭವಾಗಿವೆ. ಅಂಜನಾದ್ರಿ ಅಭಿವೃದ್ದಿ ಕಾಶಿ ಯಾತ್ರೆಗೆ ಯೋಜನೆ ರೂಪಿಸಲಾಗುವುದು. ಕಾಶಿ ಯಾತ್ರೆಗೆ ಯಾರ ಬೇಕಾದರೂ ಹೋಗಬಹುದು ಎಂದು ಶಶಿಕಲಾ ಜೊಲ್ಲೆ ಹೇಳಿದ್ದಾರೆ.