ಕಾಸ್ಟಿಂಗ್ ಕೌಚ್ ಎನ್ನುವುದು ಚಿತ್ರರಂಗದ ಒಂದು ಭಾಗವಾಗಿದೆ. ಅನೇಕ ನಟಿಯರಿಗೆ ಈ ಅನುಭವವಾಗಿದೆ. ಅವಕಾಶ ನೀಡುವುದಾಗಿ ಹೇಳಿ ಮಂಚಕ್ಕೆ ಕರೆಯುವ ಕೆಟ್ಟ ವ್ಯವಸ್ಥೆಯ ಬಗ್ಗೆ ಅನೇಕ ನಟಿಯರು ಸಿಡಿದೆದ್ದಿದ್ದಾರೆ. ಮೀ ಟೂ ಅಭಿಯಾನದ ಮೂಲಕ ಸಾಕಷ್ಟು ನಟಿಯರು ತಮಗಾದ ಕೆಟ್ಟ ಅನುಭವನ್ನು ಬಹಿರಂಗಪಡಿಸುತ್ತಿದ್ದಾರೆ. ಈಗ ಕಾಮಸೂತ್ರ ಖ್ಯಾತಿಯ ನಟಿ ಶರ್ಲಿನ್ ಚೋಪ್ರಾ ಕೂಡ ಚಿತ್ರರಂಗದಲ್ಲಿ ಅನುಭವಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್ ಈ ಬೋಲ್ಡ್ ನಟಿ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಅವಕಾಶ ನೀಡುವುದಾಗಿ ಮಂಚಕ್ಕೆ ಕರೆಯುವ ಕೆಟ್ಟ ಪದ್ದತಿಯ ಬಗ್ಗೆ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. “ಮೊದಲು ನಿರ್ಮಾಪಕರು ಡಿನ್ನರ್ ಗೆ ಕರೆಯುತ್ತಿದ್ದರು. ಆದರೆ ಅವರ ನೈಜ ಉದ್ದೇಶ ಏನು ಎನ್ನುವುದು ನನಗೆ ಮೊದಲು ಗೊತ್ತಿರಲಿಲ್ಲ. ಡಿನ್ನರ್ ನ ನಿಜವಾದ ಅರ್ಥ ತಿಳಿಯಲು ತುಂಬಾ ಸಮಯಬೇಕಾಯಿತು” ಎಂದು ಹೇಳಿದ್ದಾರೆ.
“ವೃತ್ತಿ ಜೀವನದ ಆರಂಭದಲ್ಲಿ ನಿರ್ಮಾಪಕರೊಬ್ಬರು ನನ್ನ ಸಂಪರ್ಕ ಮಾಡುವುದಾಗಿ ಹೇಳಿದರು. ಅಲ್ಲದೆ ರಾತ್ರಿ 11 ಗಂಟೆ ಅಥವಾ 12ಗಂಟೆಗೆ ಡಿನ್ನರ್ ಗೆ ಆಹ್ವಾನಿಸಿದರು. ಈ ರೀತಿಯ ಅನುಭವ ನಾಲ್ಕೈದು ಬಾರಿಯಾಗಿದೆ. ಆ ನಂತರ ಗೊತ್ತಾಯಿತು, ಡಿನ್ನರ್ ಅಂದರೆ ಕಾಂಪ್ರುಮೈಸ್ ಆಗುವುದು ಎಂದು. ಡಿನ್ನರ್ ಎಂದರೆ “ನನ್ನ ಬಳಿಗೆ ಬಾ ಬೇಬಿ” ಎಂದರ್ಥ ಎಂದು” ಹೇಳಿದ್ದಾರೆ ಶರ್ಲಿನ್. ಈ ರೀತಿಯ ಅನುಭವಗಳಾದ ನಂತರ ಡಿನ್ನರ್ ಗೆ ಯಾರಾದರು ಕರೆದರೆ ಇಂಟ್ರಸ್ಟ್ ಇಲ್ಲ ಎಂದು ನೇರವಾಗಿ ಹೇಳುವುದನ್ನು ಕಲಿತುಕೊಂಡೆ. ಡಯಟ್ ಮಾಡುತ್ತಿದ್ದೀನಿ ಡಿನ್ನರ್ ಮಾಡಲ್ಲ ಎನ್ನುತ್ತಿದ್ದೆ” ಎಂದು ಹೇಳುವ ಮೂಲಕ ಚಿತ್ರರಂಗದಲ್ಲಿ ಅನುಭವಿಸಿದ ಕೆಟ್ಟ ಅನುಭವದ ಬಗ್ಗೆ ಶರ್ಲಿನ್ ಮನ ಬಿಚ್ಚಿಮಾತನಾಡಿದ್ದಾರೆ.
ಶರ್ಲಿನ್ ಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟ ಸಿನಿಮಾ ಕಾಮಸೂತ್ರ. 2014ರಲ್ಲಿ ರಿಲೀಸ್ ಆದಾ ಸಿನಿಮಾವಿದು. ಈ ಚಿತ್ರದ ಮೂಲಕ ಶರ್ಲಿನ್ ವಿಶ್ವವ್ಯಾಪಿ ಖ್ಯಾತಿ ಗಳಿಸಿದ್ದಾರೆ. ಆ ನಂತರ ಶರ್ಲಿನ್ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.