Dhawan ಜೊತೆ ಇನ್ನಿಂಗ್ಸ್ ಆರಂಭಿಸೋದು ನನ್ನ ಅದೃಷ್ಠ
ಐಪಿಎಲ್-2022ರ ಋತುವಿಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ.
ಹೀಗಾಗಿ ಶ್ರೀಮಂತ ಲೀಗ್ ಆರಂಭಕ್ಕೂ ಮುನ್ನ ಅಗರ್ವಾಲ್ ತಮ್ಮ ಮನದಾಳದ ಮಾತನ್ನು ಬಹಿರಂತಪಡಿಸಿದ್ದಾರೆ.
ಈ ಋತುವಿನಲ್ಲಿ ಶಿಖರ್ ಧವನ್ ಅವರೊಂದಿಗೆ ಓಪನಿಂಗ್ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಐಪಿಎಲ್-2022 ಮೆಗಾ ಹರಾಜಿಗೂ ಮುನ್ನ ಅಗರ್ವಾಲ್ ಅವರನ್ನು ಪಂಜಾಬ್ ಉಳಿಸಿಕೊಂಡಿತ್ತು. ಧವನ್ ಅವರನ್ನು ರೂ. 8.2 ಕೋಟಿಗೆ ಖರೀದಿಸಲಾಗಿದೆ.
“ಪಂಜಾಬ್ ತಂಡದಲ್ಲಿ ಸಾಕಷ್ಟು ಸ್ಟಾರ್ ಆಟಗಾರರಿದ್ದಾರೆ, ಅದರಲ್ಲೂ ಶಿಖರ್ ಧವನ್ ಅವರಂತಹ ಶ್ರೇಷ್ಠ ಆಟಗಾರನೊಂದಿಗೆ ಇನ್ನಿಂಗ್ಸ್ ಆರಂಭ ಅವಕಾಶ ಸಿಕ್ಕಿರೋದು ನನ್ನ ಅದೃಷ್ಠ ಎಂದು ಮಯಾಂಕ್ ಪುನರುಚ್ಚರಿಸಿದ್ದಾರೆ.
ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪಂಜಾಬ್ ಮಯಾಂಕ್ ಅವರನ್ನು 12 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಐಪಿಎಲ್ ನಲ್ಲಿ 100 ಪಂದ್ಯಗಳನ್ನಾಡಿರುವ ಅಗರ್ವಾಲ್ 2135 ರನ್ ಗಳಿಸಿದ್ದಾರೆ.
ಕಳೆದ ಋತುವಿನಲ್ಲಿ ಮಯಾಂಕ್ ಮಿಂಚಿದ್ದರು. ಕಳೆದ ಋತುವಿನಲ್ಲಿ 12 ಪಂದ್ಯಗಳನ್ನು ಆಡಿ 441 ರನ್ ಗಳಿಸಿದ್ದರು. IPL-2022 ಮಾರ್ಚ್ 26 ರಂದು ಆರಂಭವಾಗಲಿದೆ.