ಬಂಡೆ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದ ‘ಶಿವಾಜಿ ಸುರತ್ಕಲ್-2 ‘ಮುಹೂರ್ತ

1 min read

ಬಂಡೆ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದ ಶಿವಾಜಿ ಸುರತ್ಕಲ್-2 ಮುಹೂರ್ತ

ಗುರುವಾರ ಬೆಳೆಗ್ಗೆ ಮಲ್ಲೇಶ್ವರಮ್’ನ ಬಂಡೆ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ಶಿವಾಜಿ ಸುರತ್ಕಲ್-2 ಚಿತ್ರದ ಮುಹೂರ್ತ ನೆರವೇರಿದ್ದು, ಪ್ರಮುಖ ತಾರಾಗಣ ತಂತ್ರಜ್ಞರ ತಂಡ ಎಲ್ಲರೂ ಭಾಗಿಯಾಗಿದ್ದರು. ಮಗಳು ಜಾನಕಿ ಧಾರಾವಾಹಿಯ ಮೂಲಕ ಮನೆ ಮಾತಾಗಿರುವ ರಾಕೇಶ್ ಮಯ್ಯ, ಈಗಾಗಲೆ ಶುಭಮಂಗಳ ಮತ್ತು ಟೆನಂಟ್ ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಶಿವಾಜಿ ಸುರತ್ಕಲ್-2 ಚಿತ್ರದ ತಾರಾಬಳಗಕ್ಕೆ ಸೆರುತ್ತಿದ್ದಾರೆ, ಈಗಷ್ಟೇ ಟ್ರೇನಿಂಗ್ ಮುಗಿಸಿ ಕೆಲಸಕ್ಕೆ ಸೇರಿರುವ ಪೋಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಈ ಪಾತ್ರಕ್ಕೆ ಹಲವು ಶೇಡ್’ಗಳಿದ್ದು ಚಿತ್ರದುದ್ದಕ್ಕು ಪ್ರಾಮುಖ್ಯತೆ ವಹಿಸುವ ಪಾತ್ರವಾಗಿದೆ.meghana gavnkar saakshatv

ಈ ತಂಡಕ್ಕೆ ಮತ್ತೊಂದು ಆಗಮನ, ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದು ತಮ್ಮದೇ ಆದ ಶೈಲಿಯಿಂದ ಗುರುತಿಸಿಕೊಂಡಿರುವಂತಹ, ಬಿಗ್ ಬಾಸ್ ಖ್ಯಾತಿಯ ವಿನಾಯಕ ಜೋಷಿ. ಈ ಚಿತ್ರದಲ್ಲಿ ಇವರದ್ದು ರಫ್ ಅ್ಯಂಡ್ ಟಫ್ ಪೋಲೀಸ್ ಅಧಿಕಾರಿ ಪಾತ್ರವಾಗಿದ್ದು ಚಿತ್ರದ ಕಥೆಗೆ ಮಹತ್ವದ ತಿರುವು ನೀಡುತ್ತದೆ. ಇದಿಷ್ಟು ತಾರಾಬಳಗದ ವಿವರ, ತಂಡಕ್ಕೆ ಇನ್ನಷ್ಟು ಕಲಾವಿದರ ಆಗಮನವಾಗಲಿದ್ದು ಮುಂದೆ ಅದರ ವಿವರಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇವೆ.ramesh aravind saakshatv

ಮುಖ್ಯವಾಗಿ ಹಂಚಿಕೊಳ್ಳಬೇಕಾದ ಮತ್ತೊಂದು ವಿಷಯ ಈ ಚಿತ್ರದ ಸಂಗೀತ ನೀರ್ದೇಶಕರ ಪರಿಚಯ, ಉದಯೋನ್ಮುಖ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ನಕುಲ್ ಅಭಯಂಕರ್, ಇವರು ಈ ಹಿಂದೆ ಕನ್ನಡ್ ಗೊತ್ತಿಲ್ಲ ಹಾಗು ಬಿಡುಗಡೆಗೆ ಸಿದ್ಧವಾಗುತ್ತಿರುವ
ಲವ್ ಮಾಕ್ಟೇಲ್-2 ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಅದಕ್ಕು ಮೊದಲೂ ಅವರು ಹೆಸರಾಂತ ಸಂಗೀತ ನಿರ್ದೇಶಕರಾದ ಎ.ಆರ್.ರೆಹಮಾನ್ ಅವರ ಹತ್ತಿರ ಪ್ರೋಗ್ರಾಮರ್ ಆಗಿ ಕೆಲಸ ಮಾಡುತ್ತಿದದ್ದು ಇತ್ತಿಚೆಗೆ ಬಹಳಷ್ಟು ಹೆಸರು ಮಾಡಿದ ಪರಮ ಸುಂದರಿ ಹಾಡಿಗು ಸಹ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದ್ದಾರೆ.shivaji surathkal 2 saakshatv

ಈಗ ಇವರು ನಮ್ಮ ತಂಡಕ್ಕೆ ಸೇರಿದ್ದು, ಸಂಗೀತ ಮತ್ತು ಹಿನ್ನಲೆ ಸಂಗೀತದ ಜವಾಬ್ದಾರಿಯನ್ನು ಹೊತ್ತಿದ್ದಾರೆ.shivaji surathkal 2 saakshatv

ಇನ್ನು ಶಿವಾಜಿ ಸುರತ್ಕಲ್-2 ಚಿತ್ರದ ಚಿತ್ರೀಕರಣ ಡಿಸಂಬರ್ ತಿಂಗಳಲ್ಲಿ ಶುರುವಾಗಲಿದ್ದು ಅದಕ್ಕೆ ಬೇಕಾದ ಸಿದ್ದತೆಗಳು ನಡೆಯುತ್ತಿದ್ದು ಇನ್ನಷ್ಟು ಮಾಹಿತಿಗಳನ್ನು ಸದ್ಯದಲ್ಲೇ ಹಂಚಿಕೊಳ್ಳುತ್ತೇವೆ. ರಮೇಶ್ ಅರವಿಂದ್ ಅವರ 103ನೇ ಚಿತ್ರ ಎನ್ನುವುದು ಈ ಚಿತ್ರದ ವಿಶೇಷತೆಯಾಗಿದ್ದು,
ರಾಧಿಕ ನಾರಾಯಣ್ , ಮೇಘನ ಗಾಂವ್ಕರ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ ಇವರೆಲ್ಲ ಈಗಾಗಲೆ ತಾರಾಗಣದಲ್ಲಿದ್ದು ಆಕಾಶ್ ಶ್ರೀವತ್ಸ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಇವರ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶಿವಾಜಿ ಸುರತ್ಕಲ್-2 ಚಿತ್ರ ಮೂಡಿಬರಲಿದದೆ.radhika chetan saakshatv

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd