ShivanaGouda Nayak | ರಾಮುಲು ಕಾಂಗ್ರೆಸ್ ನ ಪುರುಷತ್ವ ಕಟ್ ಮಾಡಿದ್ದಾರೆ
ಕೊಪ್ಪಳ : ಶ್ರೀ ರಾಮುಲು ಬಂದ ನಂತರ ಕಾಂಗ್ರೆಸ್ ಪಕ್ಷದ ಪುರುಷತ್ವ ಕಪ್ ಮಾಡಿದ್ದಾರೆ ಎಂದು ಶಾಸಕ ಶಿವನಗೌಡ ನಾಯಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಟಿ ಸಮುದಾಯ ಈ ಹಿಂದೆ ಕಾಂಗ್ರೆಸ್ ಕಡೆ ಇತ್ತು.
ಇದೀಗ ಆ ಸಮುದಾಯ ಜನರು ಬಿಜೆಪಿ ಕಡೆ ವಾಲಿದ್ದಾರೆ. ಕಾಂಗ್ರೆಸ್ ನವರು ಮೀಸಲಾತಿ ನೀಡಿದ್ದರೇ ನಾವು ಸ್ವಾಗತ ಮಾಡುತ್ತಿದ್ದೇವು.

ಆದ್ರೆ ಅವರು ಮೀಸಲಾತಿ ನೀಡಿಲ್ಲ. ಕೊನೆಗೆ ಬಿಜೆಪಿಯೇ ಮೀಸಲಾತಿ ನೀಡಿದ್ದು, ಶ್ರೀರಾಮುಲು ಅವರಿಂದಾಗಿ ಎಸ್ ಟಿ ಸಮುದಾಯದ ಜನರು ಬಿಜೆಪಿಗೆ ವಾಲಿದ್ದಾರೆ. ಬಿಜೆಪಿ ವಾಲ್ಮೀಕಿ ಸಮುದಾಯದ ಪರವಾಗಿದೆ ಎಂದಿದ್ದಾರೆ.
ಸೂಕ್ತ ಸಮಯದಲ್ಲಿ ಶ್ರೀರಾಮುಲು ಅವರಿಗೆ ಬಿಜೆಪಿ ಪಕ್ಷ ಉತ್ತಮ ಸ್ಥಾನ ನೀಡಲಿದೆ.
ಹಾಗೇ ಅವರು ಸಿಎಂ ಆಗುವ ಅವಕಾಶ ಬರುತ್ತದೆ, ಹೀಗಾಗಿ ವಾಲ್ಮೀಕಿ ಸಮುದಾಯ ಶ್ರೀರಾಮುಲು ಅವರ ಜೊತೆ ನಿಲ್ಲಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.