Shivarajkumar : ಅಪ್ಪು A V ನೋಡಿ ಕಣ್ಣೀರು ಹಾಕಿದ ಶಿವರಾಜ್ ಕುಮಾರ್; ಸಾಂತ್ವಾನ ಹೇಳಿದ ಬಾಲಕೃಷ್ಣ…
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರ ಕನ್ನಡದಲ್ಲಿ ಸೂಪರ್ ಹಿಟ್ ಆದ ಬಳಿಕ ಬೇರೆ ಭಾಷೆಯಲ್ಲಿಯೂ ರಿಲೀಸ್ ಆಗುತ್ತಿದೆ. ವೇದ ಚಿತ್ರ ತೆಲುಗಿನಲ್ಲಿ ಫೆಬ್ರವರಿ 10 ರಂದು ತೆರೆಗೆ ಬರಲಿದೆ. ಹೀಗಾಗಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ (ಫೆಬ್ರವರಿ 7) ಹೈದರಾಬಾದ್‌ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ನಂದಮೂರಿ ಬಾಲಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ನಡುವೆ ದಿವಂಗತ ಪುನೀತ್ ರಾಜ್‌ಕುಮಾರ್ ಅವರ A Vಯನ್ನ ಪ್ಲೇ ಮಾಡಲಾಯಿತು. ತೆರೆ ಮೇಲೆ ಅಪ್ಪು ನೋಡುತ್ತಿದ್ದಂತೆ ನಟ ಶಿವರಾಜ್ ಕುಮಾರ್ ತೀವ್ರ ಬಾವುಕರಾದರು. ಈ ವೇಳೆ ನಟ ಬಾಲಕೃಷ್ಣ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಬಳಿಕ ವೇದಿಕೆಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್ “ಭಾವನೆಗೆ ಒಳಗಾಗಿದ್ದಕ್ಕೆ ಕ್ಷಮಿಸಿ. ನಾನು ಅಳಲು ಬಯಸುವುದಿಲ್ಲ. ಆದರೆ ಮಗುವಿನ ಗತಿ ನೋಡಿ ಕಣ್ಣೀರು ಬರುತ್ತಿದೆ. ನಾನು 13 ವರ್ಷದವನಿದ್ದಾಗ ಅವನು ಜನಿಸಿದ. ಅವನು ನನಗೆ ಮಗುವಿನಂತೆ. ಅವನು ನನ್ನ ಮುಂದೆ ಹೊರಟು ಹೋಗುವುದು ನನಗೆ ತುಂಬಾ ನೋವುಂಟುಮಾಡುತ್ತದೆ. ಆದರೂ ಅಪ್ಪು ಸದಾ ನಮ್ಮೊಂದಿಗಿರುತ್ತಾರೆ’ ಎಂದರು.
ಬಳಿಕ ಪುನೀತ್ ರಾಜ್ ಕುಮಾರ್ ಬಗ್ಗೆ ಮಾತನಾಡಿದ ಬಾಲಕೃಷ್ಣ.. ‘ಪುನೀತ್ ರಾಜ್ ಕುಮಾರ್ ನಮ್ಮ ನಡುವೆ ಇಲ್ಲದಿದ್ದರೂ ಅವರ ಸ್ಥಾನ ಅವರದು, ಅವರ ಮಟ್ಟ ಅವರದು. ಪುನೀತ್ ರಾಜ್‌ಕುಮಾರ್ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಏಕೆಂದರೆ ಅವರು ಕೇವಲ ನಟರಲ್ಲ, ಸೇವಾ ಗುಣವುಳ್ಳ ಮಹಾನ್ ವ್ಯಕ್ತಿ ಮತ್ತು ಎಲ್ಲರ ಹೃದಯದಲ್ಲಿ ಉಳಿದಿದ್ದಾರೆ. ನಾವೇನಾದರೂ ಮಾಡಿದರೆ…ಇದನ್ನು ಮಾಡಿದೆವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತೇವೆ. ಆದರೆ ಯಾವುದೇ ಅಳುಕಿಲ್ಲದೆ ತಮ್ಮ ಸಂತೃಪ್ತಿಗಾಗಿ ಹಲವು ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿದರು. ಆ ಸೇವೆಗಳು ಅವರನ್ನು ನಮ್ಮ ನಡುವೆ ಸದಾ ಉಳಿಯುವಂತೆ ಮಾಡಿತು’ ಎಂದರು.
Shivarajkumar : Shivarajkumar shed tears seeing Appu AV; Balakrishna consoled…