Shivarajkumar : ಮಂತ್ರಾಲಯಕ್ಕೆ ಭೇಟಿ ನೀಡಿದ ಶಿವಣ್ಣ – ಏಕಾಏಕಿ ಚುಂಬಿಸಿದ ಮಹಿಳಾ ಅಭಿಮಾನಿ
ಕರುನಾಡ ಚಕ್ರವರ್ತಿ ನಟ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಅವರೊಂದಿಗೆ ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿನೀಡಿ ರಾಯರ ದರ್ಶನ, ಆಶಿರ್ವಾದ ಪಡೆದುಕೊಂಡಿದ್ದಾರೆ.
ಶಿವಣ್ಣನನ್ನು ಕಂಡ ಅಭಿಮಾನಿಗಳು ನೋಡಲು ಮುಗಿಬಿದ್ದರು. ಇದೇ ವೇಳೆ ಮಹಿಳಾ ಅಭಿಮಾನಿಯೊಬ್ಬರು ಶಿವಣ್ಣನ ಕೆನ್ನೆಗೆ ಹಠಾತ್ ಮುತ್ತಿಟ್ಟಿದ್ದು , ಒಂದ್ ಸೆಕೆಂಡ್ ಶಿವರಾಜ್ ಕುಮಾರ್ ಅವರೇ ಗಲಿಬಿಲಿಗೊಂಡಿದ್ದಾರೆ.
ಶಿವರಾಜ್ ಕುಮಾರ್ ಹಾಗೂ ಕುಟುಂಬ ಮಂಚಾಲಮ್ಮ ದೇವಿ ದರ್ಶನದ ಬಳಿಕ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು.. ರಾಯರ ದರ್ಶನದ ನಂತರ ಶಿವಣ್ಣ ದಂಪತಿ, ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರಿಂದ ಆಶೀರ್ವಾದ ಪಡೆದಿದ್ದಾರೆ.
ರಾಯರ ದರ್ಶನಕ್ಕೆ ಬಂದ ವೇಳೆ ಮಹಿಳಾ ಅಭಿಮಾನಿಯೊಬ್ಬರು ಮುತ್ತು ಕೊಟ್ಟ ಪ್ರಸಂಗ ನಡೆದಿದೆ..
Shivarajkumar visit manthralaya – female fan kisses his cheek unexpectedly