IPL 2022 | ಡೆಲ್ಲಿ ಕ್ಯಾಪಿಟಲ್ಸ್ ಗೆ ಶಾಕ್..  ಪೃಥ್ವಿ ಶಾ ಟೂರ್ನಿಯಿಂದ ಔಟ್..

1 min read
prithvi-shaw-fails-yo-yo-test saaksha tv

ಡೆಲ್ಲಿ ಕ್ಯಾಪಿಟಲ್ಸ್ ಗೆ ಶಾಕ್..  ಪೃಥ್ವಿ ಶಾ ಟೂರ್ನಿಯಿಂದ ಔಟ್..

ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲು ಗೆಲುವುಗಳೊಂದಿಗೆ ಸಾಗುತ್ತಿದೆ. ಒಂದು ಪಂದ್ಯದಲ್ಲಿ ಗೆದ್ದರೇ ಮತ್ತೊಂದು ಪಂದ್ಯದಲ್ಲಿ ಸೋಲುತ್ತಿದೆ.  

ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ ಆರು ಗೆಲುವು ಹಾಗೂ ಆರು ಸೋಲುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇನ್ನೆರಡು ಪಂದ್ಯಗಳಲ್ಲಿ ಗೆದ್ದರೇ ಡೆಲ್ಲಿಗೆ ಪ್ಲೇ ಆಫ್ ಅವಕಾಶ ಸಿಗಲಿದೆ.

ಈ ಹಿನ್ನೆಲೆಯಲ್ಲಿ ತಂಡ ಯುವ ಆಟಗಾರ.. ಪೃಥ್ವಿ ಶಾ ಲೀಗ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.

ಪೃಥ್ವಿ ಶಾ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡೆಲ್ಲಿ ನಾಯಕ ಪಂತ್ ಕೂಡ, ಪೃಥ್ವಿ ಷಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

prithvi-shaw-fails-yo-yo-test saaksha tv

ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಶೇನ್ ವ್ಯಾಟ್ಸನ್ ಹೇಳಿಕೆಯಲ್ಲಿ  ಪೃಥ್ವಿ ಶಾ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ.

ಕಳೆದ ಕೆಲವು ವಾರಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪೃಥ್ವಿ ತಂಡದಿಂದ ದೂರವಾಗಿರೋದು ನಮಗೆ ಬೇಸರ ತಂದಿದೆ.

ಪ್ಲೇಆಫ್ಸ್ ಹಂತದಲ್ಲಿ ಡ್ಯಾಶಿಂಗ್ ಆಟಗಾರನಿಲ್ಲದ ಕೊರತೆ ಸ್ಪಷ್ಟವಾಗಿದೆ. ಆರಂಭದಲ್ಲಿ ಪೃಥ್ವಿ ಶಾ ಎದುರಾಳಿ ತಂಡಗಳ ಮೇಲೆ ಒತ್ತಡ ಹೇರುತ್ತಿದ್ದರು.

ಇದೀಗ ನಾವು ಅವರ ಸೇವೆಯನ್ನು ಕಳೆದುಕೊಂಡಿದ್ದೇವೆ. ಇದು ನಮ್ಮ ತಂಡಕ್ಕೆ ದೊಡ್ಡ ನಷ್ಟವನ್ನ ತಂದೊಡ್ಡಿದೆ ಎಂದು ಶೇನ್ ವಾಟ್ಸಾನ್ ಹೇಳಿದ್ದಾರೆ.

ಈ ಋತುವಿನಲ್ಲಿ ಪೃಥ್ವಿ ಶಾ 9 ಪಂದ್ಯಗಳಲ್ಲಿ 2 ಅರ್ಧಶತಕಗಳ ಸಹಾಯದಿಂದ 259 ರನ್ ಗಳಿಸಿದ್ದಾರೆ. Shock to Delhi Capitals .. Prithvi Shaw out of ipl 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd