ಶೋಕಿವಾಲ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್… U/A ಸರ್ಟಿಫಿಕೇಟ್ ಪಡೆದ ಕೃಷ್ಣ ಅಜಯ್ ರಾವ್…!
ಶೋಕಿವಾಲ ಚಿತ್ರ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಪಡೆದು ಪಾಸ್ ಅಗಿದ್ದು… ಜನರ ಮುಂದೆ ಬಂದು ಗೆಲ್ಲುವ ಪರೀಕ್ಷೆ ತಯಾರಿ ನಡೆಸುತ್ತಿದ್ದಾನೆ… ಜನವರಿಯಲ್ಲಿ ಬರುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಚಿತ್ರತಂಡ ತಿಳಿಸಿದ್ದಾರೆ. ಈ ಸಿನಿಮಾದ ಮೊದಲ ಲಿರಿಕಲ್ ವೀಡಿಯೋ ರೀಲಿಸ್ ಅಗಿ ಎಲ್ಲರ ಕಡೆಯಿಂದಲೂ ತುಂಬಾ ಚೆನ್ನಾಗಿ ಮುಡಿ ಬಂದಿದೆ ಎಂದು ಹೇಳಿದ್ದರು…. ಈಗ ಮತ್ತೋಂದು ಹಾಡನ್ನು ಬಿಡಲು ತಯಾರಿ ನಡೆಯುತ್ತಿದೆ. ಹರಸಿ ಪ್ರೀತಿ ತೋರಿಸುತ್ತಿರುವ ಎಲ್ಲರಿಗೂ ಮತ್ತು ತಮಗೂ ನನ್ನ ಕಡೆಯಿಂದ ಈ ಮೂಲಕವಾಗಿಯೂ ಧನ್ಯವಾದವನ್ನು ತಿಳಿಸುತ್ತೆನೆ.
ನನಗೆ ಅವಕಾಶ ಕೊಟ್ಟ T.R. ಚಂದ್ರಶೇಖರ್ ಸರ್, ಕಿಶೋರ್ ಸರ್ ಗೆ ತುಂಬಾ ಧನ್ಯವಾದಗಳು . ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರ . ಅಜಯ್ ರಾವ್, ಸಂಜನಾ ಆನಂದ್, ಶರತ್ ಲೋಹಿತಾಶ್ವ , ಗಿರೀಶ್ ಶಿವಣ್ಣ , ತಬಲಾ ನಾಣಿ , ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ , ಚಂದನ , ಲಾಸ್ಯ, ನಾಗರಾಜಮೂರ್ತಿ ಇನ್ನೂ ತುಂಬಾ ಜನ ಕಲಾವಿದರು ನಟಿಸಿದ್ದಾರೆ.
ಇದುವರೆಗೆ ಚನ್ನಪಟ್ಟಣ, ಹೊಂಗನೂರು, ವಿರುಪಾಕ್ಷೀಪುರ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು, ತುಮಕೂರು ,ಮಾಗಡಿ ಯತಂಹ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಶ್ರೀಧರ್. ವಿ. ಸಂಭ್ರಮ್ ರವರ ಸಂಗೀತವಿದ್ದು, 4 ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ರವರ ಸಾಹಿತ್ಯ ಶೋಕಿವಾಲನಿಗಿದೆ.
ನವೀನ್ ಕುಮಾರ್.ಎಸ್ ಕ್ಯಾಮೆರಾಮೆನ್, ಕೆ.ಎಂ. ಪ್ರಕಾಶ್ ಎಡಿಟರ್ , ಪ್ರಶಾಂತ್ ರಾಜಪ್ಪ ಸಂಭಾಷಣೆ , ಮೋಹನ್ ನೃತ್ಯ, ವಿಕ್ರಮ್ ಮೋರ್ ಸಾಹಸ, ಮೈಸೂರು ರಘು ರವರ ಕಲಾ ನಿರ್ದೇಶನ, ಹೀಗೆ ಎಲ್ಲ technician ರವರ supportನಿಂದ ಶೋಕಿವಾಲ ಚೆನ್ನಾಗಿ ಮೂಡಿ ಬಂದಿದೆ…..
ಕೋರೋನ ಕ್ಲಿಯರ್ ಅಗಿ100% ಸಿಕ್ಕಿದ ಕೂಡಲೆ ಚಿತ್ರಮಂದಿರಕ್ಕೆ ಶೋಕಿವಾಲ ಎಂಟ್ರಿ ಕೊಡ್ತಿದೆ.. ಪ್ರತಿಯೊಂದು ಹಂತದಲ್ಲೂ ನಿಮ್ಮ ಪ್ರೀತಿ ಸಹಕಾರ ಮುಖ್ಯವಾಗಿದ್ದು ನನ್ನ ಮೊದಲ ಹೆಜ್ಜೆಗೆ ನಿಮ್ಮ ಸಹಕಾರವಿರಲಿ , ನಮ್ಮ ತಂಡದ ಮೇಲೆ ಪ್ರೀತಿ ಇರಲಿ ಎಂದಿದ್ದಾರೆ ನಿರ್ಮಾಪಕ T.R. ಚಂದ್ರಶೇಖರ್ ಅವರು..