Shraddha Murder Case: ಅಫ್ತಾಬ್ ಗೆ ಪಾಲಿಗ್ರಾಫ್ ಪರೀಕ್ಷೆ – FSL ಕಚೇರಿ ಸುತ್ತ ಬಿಗಿ ಭದ್ರತೆ…
ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾ ಅವರನ್ನು ಮಂಗಳವಾರ ಮತ್ತೊಮ್ಮೆ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಅಫ್ತಾಬ್ ಕರೆದೊಯ್ಯುವಾಗ ನಡೆದ ಪೊಲೀಸ್ ವ್ಯಾನ್ ಮೇಲಿನ ದಾಳಿಯ ನಂತರ ರೋಹಿಣಿಯಲ್ಲಿರುವ ಎಫ್‌ಎಸ್‌ಎಲ್ ಕಚೇರಿಯ ಹೊರಗೆ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ಸೋಮವಾರ ಎಫ್‌ಎಸ್‌ಎಲ್ ಲ್ಯಾಬ್‌ನಲ್ಲಿ ಅಫ್ತಾಬ್‌ನ ಪಾಲಿಗ್ರಾಫ್ ಪರೀಕ್ಷೆ ಏಳು ಗಂಟೆಗಳ ಕಾಲ ನಡೆಯಿತು. ಮಂಗಳವಾರ ಮರು ಪರೀಕ್ಷೆಗಾಗಿ ಅವರನ್ನು ಎಫ್‌ಎಸ್‌ಎಲ್ ಕಚೇರಿಗೆ ಕರೆತರಲಾಗಿದೆ.
ಮಂಗಳವಾರ ಪಾಲಿಗ್ರಾಫ್ ಪರೀಕ್ಷೆ ಮುಗಿಯುವ ನಿರೀಕ್ಷೆ ಇದೆ. ಇದಾದ ಬಳಿಕ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನಾರ್ಕೋ ಪರೀಕ್ಷೆ ಪ್ರಕ್ರಿಯೆ ಆರಂಭಿಸಲಾಗುವುದು. ಆದರೆ, ಸಮಯದ ಕೊರತೆಯಿಂದಾಗಿ ಸೋಮವಾರ ಪಾಲಿಗ್ರಾಫ್ ಪರೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
Shraddha Murder Case: Polygraph test for Aftab – Tight security around FSL office…