ಬೆಂಗಳೂರು : ನೇರ ಮಾತುಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟಿ ಶ್ರದ್ಧಾ ಶ್ರೀನಾಥ್ ಈಗ ಋತುಚಕ್ರದ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಋತುಚಕ್ರದ ಬಗ್ಗೆ ಬೋಲ್ಡ್ ಹೇಳಿಕೆಯೊಂದನ್ನ ಪೋಸ್ಟ್ ಮಾಡಿರುವ ಶ್ರದ್ಧಾ, ತಮ್ಮ 14ನೇ ವಯಸ್ಸಿನಲ್ಲಿಯೇ ಸ್ತ್ರೀವಾದಿಯಾದ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಬಹಿರಂಗವಾಗಿ ಬರೆದುಕೊಂಡಿದ್ದಾರೆ.
ಶ್ರದ್ಧಾ ಪೋಸ್ಟ್ ನಲ್ಲಿ ಏನಿದೆ?
“ಆಗ ನನಗೆ 14 ವರ್ಷ ವಯಸ್ಸು. ಈ ವೇಳೆ ನಮ್ಮ ಮನೆಯಲ್ಲಿ ದೇವರ ಪೂಜೆಯಲ್ಲಿ ನಡೆಯುತ್ತಿತ್ತು. ಆ ಪೂಜೆಯಲ್ಲಿ ನಾನು ಪಾಲ್ಗೊಂಡಿದ್ದೆ. ಆದರೆ ಆಗಲೇ ನನಗೆ ಪೀರಿಯಡ್ಸ್ ಆಯಿತು. ಆಗ ಅಮ್ಮ ನನ್ನ ಜೊತೆಯಲ್ಲಿ ಇರಲಿಲ್ಲ. ಆದ್ದರಿಂದ ನಾನು ನನ್ನ ಪಕ್ಕದಲ್ಲಿದ್ದ ಚಿಕ್ಕಮ್ಮನಿಗೆ ಈ ವಿಚಾರವನ್ನು ತಿಳಿಸಿದೆ. ಯಾಕೆಂದರೆ ನಾನು ಆ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಕೂಡ ಧರಿಸಿರಲಿಲ್ಲ”.
ಈ ವೇಳೆ ಪಕ್ಕದಲ್ಲೇ ಇನ್ನೊಬ್ಬ ಒಳ್ಳೆಯ ಮಹಿಳೆ ಕುಳಿತಿದ್ದರು. ನಾನು ಚಿಂತೆಯಿಂದ ಚಿಕ್ಕಮ್ಮನಿಗೆ ಹೇಳಿದ ಮಾತನ್ನು ಅವರು ಕೇಳಿಸಿಕೊಂಡಿದ್ದರು. ಆಗ ಮಹಿಳೆ ನನ್ನ ಕಡೆ ನೋಡಿ ಧೈರ್ಯದಿಂದ ನಗುತ್ತಾ ಪರವಾಗಿಲ್ಲ ಚಿನ್ನ, ದೇವರು ಕ್ಷಮಿಸುತ್ತಾರೆ. ಪೂಜೆ ಸಂದರ್ಭದಲ್ಲಿ ಋತುಚಕ್ರ ಆಗಿದ್ದಕ್ಕೆ ನೀನು ಚಿಂತಿಸಬೇಡ ಎಂದು ಹೇಳಿದರು. ಆ ದಿನವೇ ನಾನು ಮಹಿಳಾವಾದಿ ಆದೆ. ಅಲ್ಲದೇ ಪೀರಿಯಡ್ಸ್ ಬಗ್ಗೆ ತಪ್ಪು ಕಲ್ಪನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿದೆ ಎಂದು ತಾವು ಸ್ತ್ರೀವಾದಿಯಾದ ಬಗ್ಗೆ ಶ್ರದ್ಧಾ ಶ್ರೀನಾಥ್ ಬರೆದುಕೊಂಡಿದ್ದಾರೆ.
ಶ್ರದ್ಧಾ ಶ್ರೀನಾಥ್ ಈ ಬಗ್ಗೆ ಧೈರ್ಯವಾಗಿ ಮಾತನಾಡಿದ್ದಕ್ಕೆ ಅನೇಕರು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.








