Shree Lanka: ರಾವಣನ ನಾಡಿನಲ್ಲಿ ಸರಷ್ಟಿಯಾದ ಅಹಾರಜಕತೆ, ಶ್ರೀಲಂಕೇಶ್ವರನ ವಿರುದ್ಧ ತಿರುಗಿಬಿದ್ದ ಜನ

1 min read
Shree lanka Saaksha Tv

ರಾವಣನ ನಾಡಿನಲ್ಲಿ ಸರಷ್ಟಿಯಾದ ಅಹಾರಜಕತೆ, ಶ್ರೀಲಂಕೇಶ್ವರನ ವಿರುದ್ಧ ತಿರುಗಿಬಿದ್ದ ಜನ

ಶ್ರೀಲಂಕಾ : ದೇಶವು ಸಂಪೂರ್ಣವಾಗಿ ಆರ್ಥಕ ದಿವಾಳಿಯಾಗಿದ್ದು, ಸಧ್ಯ ಲಂಕಾದಲ್ಲಿ ಅರಾಕತೆ ಸೃಷ್ಟಿಯಾಗಿದೆ. ದಿನನಿತ್ಯ ಬಳಕೆಯ ವಸ್ತುಗಳು ಸಿಗದೆ ಜನರು ಪರದಾಡುತ್ತಿದ್ದು, ಈಗ ಲಂಕಾ ಅಧ್ಯಕ್ಷರು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿ ಅಧ್ಯಕ್ಷರ ನಿವಾಸದ ಬಳಿ ಪ್ರತಿಭಟನೆ ಮಾಡುತ್ತಿದ್ದಾರೆ.

ತಡರಾತ್ರಿ ಶ್ರೀಲಂಕಾದ 2000 ಪ್ರಜೆಗಳು ಶ್ರೀಲಂಕಾ ಅಧ್ಯಕ್ಷರ ಮನೆಮುಂದೆ ಪ್ರತಿಭಟನೆಗೆ ಇಳಿದಿದ್ದಾರೆ. ಅಲ್ಲದೆ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದ ಸುಮಾರು 2,000 ಕ್ಕೂ ಹೆಚ್ಚು ಜನರನ್ನು ಚದುರಿಸಲು ಪ್ಯಾರಾ ಮಿಲಿಟರಿ ಪೊಲೀಸ್ ಭಾಗವಾಗಿರುವ ಒಂದು ವಿಶೇಷ ಕಾರ್ಯಾಚರಣೆ ಪಡೆಯನ್ನು ಸ್ಥಳಕ್ಕೆ ಕರೆಸಲಾಯಿತು.

ಶ್ರೀಲಂಕಾನಲ್ಲಿ ಅಹಾರ, ಪೆಟ್ರೋಲಿಯಂ ಪದಾರ್ಥಗಳು ಮತ್ತು ಅಗತ್ಯ ವಸ್ತುಗಳ ತೀವ್ರ ಕೊರತೆ ಎದುರಾಗಿದ್ದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಮೊದಲ ಬಾರಿ ಈ ದ್ವೀಪರಾಷ್ಟ್ರಕ್ಕೆ ಇಂಥ ಬಿಕ್ಕಟ್ಟು ಎದುರಾಗಿದೆ.

ಗುರುವಾರ ಸಾಯಂಕಾಲ ಪೂರ್ತಿ ದೇಶದಲ್ಲಿ ಡೀಸೆಲ್ ಅಲಭ್ಯವಾಗಿದ್ದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿ ಶ್ರೀಲಂಕಾದ 2.2 ಕೋಟಿಗೂ ಹೆಚ್ಚು ಜನ 13 ಗಂಟೆಗಳ ಕಾಲ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಕಳೆಯಬೇಕಾಯಿತು. ರಸ್ತೆ ಮೇಲೆ ವಾಹನ ಸಂಚಾರ ಸ್ತಬ್ಧಗೊಂಡಿತ್ತು. ಈಗಾಗಲೇ ಔಷಧಿಗಳ ಕೊರತೆಯಿಂದ ಸರ್ಜರಿಗಳನ್ನು ತಡೆಹಿಡಿದಿರುವ ಆಸ್ಪತ್ರೆಗಳು ಗುರುವಾರ ತಲೆದೋರಿದ 13-ಗಂಟೆ ಬ್ಲ್ಯಾಕ್ ಔಟ್ ನಿಂದ ಮತ್ತಷ್ಟು ಕಂಗೆಟ್ಟವು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd