ಪ್ರಧಾನಿ ನರೇಂದ್ರ ಮೋದಿ ಕಲಿಯುಗದ ಶ್ರೀಕೃಷ್ಣ ಅವತಾರ : ರಾಮುಲು

1 min read

ಪ್ರಧಾನಿ ನರೇಂದ್ರ ಮೋದಿ ಕಲಿಯುಗದ ಶ್ರೀಕೃಷ್ಣ ಅವತಾರ : ರಾಮುಲು

ಕೊಪ್ಪಳ :  ಪ್ರಧಾನಿ ನರೇಂದ್ರ ‌ಮೋದಿ ಅವರನ್ನು ಕೊಪ್ಪಳದ ಮುನಿರಾಬಾದ್ ನಲ್ಲಿ  ಸಚಿವ ಬಿ.ಶ್ರೀರಾಮುಲು ಅವರು ಹಾಡಿ ಹೊಗಳಿದ್ದಾರೆ..  ಪ್ರಧಾನಿ ನರೇಂದ್ರ ಮೋದಿ ಕಲಿಯುಗದ ಶ್ರೀಕೃಷ್ಣ ಅವತಾರ.  ಮಹಾಭಾರತದ ಕೃಷ್ಣ ಇದ್ದಂತೆ, ಈಗ ಮೋದಿ ಬಂದಿದ್ದಾರೆ. ಮಹಾಭಾರತದಲ್ಲಿ ಶ್ರೀಕೃಷ್ಣನಂತೆ ಭಾರತದ ಅಭಿವೃದ್ಧಿಯಲ್ಲಿ ಮೋದಿ ಪಾತ್ರ ಇದೆ ಎಂದಿದ್ದಾರೆ..

ಅಲ್ಲದೇ ನವ ಭಾರತದ ನಿರ್ಮಾಣಕ್ಕೆ ಮೋದಿ ಶ್ರಮಿಸುತ್ರಿದ್ದಾರೆ. ಮೋದಿ ಜನಪ್ರೀಯತೆ ಸಹಿಸದ ಕೆಲವರು ಏನೇನೋ ಮಾತಾಡ್ತಿದ್ದಾರೆ. ಮೊದಲು ರಾಜ್ಯಕ್ಕೆ ಬರಲಿ ಅಂತಾರೆ, ಬಂದ ನಂತರ ರಾಜ್ಯಕ್ಕೆ ಕೊಡುಗೆ ಏನು ಅಂತಾರೆ. ಸಿದ್ದರಾಮಯ್ಯ ಮೋದಿ ವಿರುದ್ಧ ಸರಣಿ ಟ್ವಿಟ್ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅರ್ಥವಿಲ್ಲದ, ಮೂರ್ಖರಂತೆ ಮಾತಾಡ್ತಿದ್ದಾರೆ. ಮೋದಿ ರಾಜ್ಯಕ್ಕೆ 1.29 ಲಕ್ಷ‌ ಕೋಟಿ ಅನುದಾನ ನೀಡಿದ್ದಾರೆ. ಹೀಗಾಗಿ ಮೋದಿ ವಿರುದ್ಧ ಟ್ವೀಟ್ ಮಾಡುವವರಿಗೆ ಜನ ಉತ್ತರ ಕೊಡ್ತಾರೆ ಎಂದಿದ್ದಾರೆ..

ಇದೇ ವೇಳೆ ಕಾಂಗ್ರೆಸ್ ನಾಯಕರು ಹತಾಶರಾಗಿ ಹೀಗೆಲ್ಲ ಮಾತಾಡ್ತಿದ್ದಾರೆ. ಯುಪಿಎ ಸರ್ಕಾರ‌ ಇದ್ದಾಗ ಪ್ರಧಾನಿಗಳು ಎಷ್ಟು ಬಾರಿ ರಾಜಕ್ಕೆ ಬಂದು ಹೋಗಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ..

ಇದೇ ವೇಳೆ ಶ್ರೀರಾಮುಲು ಗಡ್ಡದ ಬಗ್ಗೆ ಮೋದಿ ಪ್ರಶಂಸೆ ವಿಚಾರವಾಗಿ ಮಾತನಾಡ್ತಾ ಮೋದಿ ಗುಜರಾತ್ ಸಿಎಂ ಆದಾಗಿಂದಲೂ ನನಗೆ ಪರಿಚಯ. ಅವರು ಪಿಎಂ ಆದಾಗಲೂ ನಾನು ಸಂಸದನಾಗಿ ಕೆಲಸ ಮಾಡಿದ್ದೇನೆ. ಆಗಲೂ ನಾನ್ನನ್ನು ಪ್ರೀತಿಯಿಂದ ಕಾಣುತ್ತಿದ್ದರು.  ಹಾಗಾಗಿ ನಿನ್ನೆ ಪ್ರಧಾನಿ ದೆಹಲಿ ಕಡೆ ಬಂದಿಲ್ಲವಾ ಅಂತಾ ಪ್ರೀತಿಯಿಂದ ಮಾತನಾಡಿದರು ಎಂದಿದ್ದಾರೆ.. ಜುಲೈ 10 ರಿಂದ ಕಾಲುವೆಗೆ ನೀರು ಬಿಡುಗಡೆ ಮಾಡಲು ತೀರ್ಮಾನ  ಮಾಡಿರುವ ಬಗ್ಗೆಯೂ ಶ್ರೀರಾಮುಲು ಅವರು ಮಾತನಾಡಿದ್ದು , ಸದ್ಯಕ್ಕೆ ಒಳ ಹರಿವು ಕಡಿಮೆ ಇದೆ ಅದಕ್ಕಾಗಿ 20 ದಿನ ಟೈಮ್ ತಗೊಂಡಿದಿವಿ ಎಂದು ಮಾಹಿತಿ ನೀಡಿದ್ದಾರೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd