ಕ್ಷೇತ್ರದ ಅಭಿವೃದ್ಧಿಗೆ ನಿನ್ಗೆ ದುಡ್ಡು ಕೊಟ್ಟಿದ್ದು ಯಾರಪ್ಪ ಮುನಿರತ್ನ : ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು : ಅಭಿವೃದ್ಧಿ ಮಾಡಿದ್ದೀನಿ.. ಅಭಿವೃದ್ಧಿ ಮಾಡಿದ್ದೀನಿ ಅಂತಾ ಎಲ್ಲ ಕಡೆ ಹೇಳ್ಕೊಂಡು ಓಡಾಡ್ತಿಯಾ. ನಿನಗೆ ದುಡ್ಡು ಕೊಟ್ಟಿದ್ದು ಯಾರಪ್ಪ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಆರ್.ಆರ್.ನಗರ ಉಪಚುನಾವಣೆ ರಂಗೇರಿದ್ದು, ಇಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿದರು. ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ಮತದಾರರು ಪ್ರಜ್ಞಾವಂತ ಮತದಾರರು.
ನಿತ್ಯ ಬೆಂಗಳೂರಿನಲ್ಲಿ ಏನು ನಡೀತಿದೆ. ಇಲ್ಲಿ ಶಾಸಕರಾಗಿದ್ದವರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಅನ್ನೋದು ತಿಳ್ಕೊಂಡಿದ್ದಾರೆ. ಆರ್.ಆರ್ ನಗರದಲ್ಲಿ ಅಪರಾಧ ರಾಜಕಾರಣ ಜಾಸ್ತಿಯಾಗಿದೆ.
ಸುಳ್ಳು ಕೇಸ್‍ಗಳನ್ನು ಹಾಕಿಸೋದು. ಭಯದ ವಾತಾವರಣ ನಿರ್ಮಿಸೋದು. ಜನರನ್ನ ಹೆದರಿಸಿ ಮತಗಟ್ಟೆಗೆ ಬಾರದಂತೆ ಮಾಡ್ತಿದ್ದಾರೆ ಎಂದು ಮುನಿರತ್ನ ವಿರುದ್ಧ ಕಿಡಿಕಾರಿದರು.
ನಮ್ಮ ವಿರೋಧಿ ಅಭ್ಯರ್ಥಿ ಮುನಿರತ್ನ ಜನರನ್ನ ಹೆದರಿಸಿ, ಬೆದರಿಸಿ ಗೆಲ್ಲೋಕೆ ಹೊರಟ್ಟಿದ್ದಾರೆ. ಮೊನ್ನೆ ನಾನು ಪ್ರಚಾರ ಮಾಡ್ತಿದ್ದಾಗ ಒಂದು ಗುಂಪು ನನಗೆ ಅಡ್ಡಿ ಮಾಡಿದ್ರು.
ಇದನ್ನೂ ಓದಿ : ಜೋಡೆತ್ತು..ಯಾರೇ ಬಂದ್ರೂ ನಮ್ದೆ ಗೆಲುವು; ಡಿಕೆಶಿ, ಸಿದ್ದುಗೆ ಜೋಶಿ-ಶೆಟ್ಟರ್ ಗುದ್ದು
ಆಗ ಪೊಲೀಸನವರಿಗೆ ನಾನು ಹೇಳಿದೆ, ಶಾಸಕರಾದವರು ಇಲ್ಲೇ ಗೂಟ ಹೊಡ್ಕೊಂಡು ಕೂರಲ್ಲ. ನಿಮಗೆ ಪೋಸ್ಟಿಂಗ್ ಕೊಡಿಸಿದ್ದಾರೆ ಎಂದು ಅವರ ಪರವಾಗಿ ಕೆಲಸ ಮಾಡಿದ್ರೆ, ಮುಂದಿನ ದಿನಗಳಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತೆ. ಕಾನೂನು ಬಿಟ್ಟು ಕೆಲಸ ಮಾಡಿದ್ರೇ ಕೆಟ್ಟ ದಿನಗಳನ್ನ ಎದುರಿಸಬೇಕಾಗುತ್ತೆ ಅನ್ನೋದನ್ನ ಹೇಳಿದೆ ಎಂದರು.
ಮುನಿರತ್ನ ಜನರನ್ನು ಹೆದರಿಸಿ, ಬೆದರಿಸಿ ಗೆಲ್ಲಬೋದು ಅನ್ಕೊಂಡಿದ್ರೇ ಅದು ನಿನ್ನ ಮೂರ್ಖತನ ಎಂದ ಸಿದ್ದರಾಮಯ್ಯ, ನಿನಗೆ ಮುನಿರತ್ನಂ ನಾಯ್ಡು ಅಂತಾ ವೋಟ್ ಹಾಕಿಲ್ಲ. ನೀನು ಕಾಂಗ್ರೆಸ್ ಅಂತಾ ವೋಟ್ ಹಾಕಿದ್ರೂ.
ಅದನ್ನ ಮರಿಬೇಡಪ್ಪ ಮುನಿರತ್ನ. ಅಭಿವೃದ್ಧಿ ಮಾಡಿದ್ದೀನಿ.. ಅಭಿವೃದ್ಧಿ ಮಾಡಿದ್ದೀನಿ ಅಂತಾ ಎಲ್ಲ ಕಡೆ ಹೇಳ್ಕೊಂಡು ಓಡಾಡ್ತಿಯಾ. ನಿನಗೆ ದುಡ್ಡು ಕೊಟ್ಟಿದ್ದು ಯಾರಪ್ಪ ಎಂದು ಪ್ರಶ್ನಿಸಿದರು.
ಇನ್ನು ರಾಜರಾಜೇಶ್ವರಿ ನಗರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಜನರು ನಿನ್ನ ಬದಲಾವಣೆ ಮಾಡ್ತಾರೆ. ಕಣ್ಣೀರು ಬೇರೆ ಹಾಕ್ತೀಯಾ. ಕಣ್ಣೀರು ಹಾಕಿದ್ರೇ ಜನ ಗೆಲ್ಲಿಸ್ತಾರೆ ಅನ್ಕೊಂಡಿದ್ಯಾ?.
ಕಾಂಗ್ರೆಸ್ ನನ್ನ ತಾಯಿ ಅಂತಾ ಹೇಳ್ತಿದ್ದೆ. ಅಂತಹ ತಾಯಿಗೆ ಮೋಸ ಮಾಡಿದೀಯಾ ಅಂತಾ ಹೇಳಿರೋದು. ನಿನ್ನ ತಾಯಿಗೆ ದ್ರೋಹ ಅಂತಲ್ಲ ಎಂದು ತಮ್ಮ ಹೇಳಿಕೆಗೆ ಸಿದ್ದರಾಮಯ್ಯ ಸಮಜಾಯಿಷಿ ನೀಡಿದರು.
ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ : ಚಿಕ್ಕಬಳ್ಳಾಪುರದಲ್ಲಿ ಚರಿತ್ರೆ ಸೃಷ್ಟಿಸಿದ ಬಿಜೆಪಿ
ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರ ಮಾಜಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿ, ಗೋರಗುಂಟೆಪಾಳ್ಯ, ಹೆಚ್.ಎಂ.ಟಿ. ವಾರ್ಡ್ ವ್ಯಾಪ್ತಿಯಲ್ಲಿ ಮತ ಯಾಚಿಸಿದರು.
ಇವರಿಗೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel