Siddaramaiah | ಗಣಿ ಲೂಟಿ ಮಾಡಿದ್ದೇ ಬಳ್ಳಾರಿಗೆ ಬಿಜೆಪಿ ಕೊಡುಗೆ
ಬೆಂಗಳೂರು : ಗಣಿ ಲೂಟಿ ಮಾಡಿದ್ದೇ ಬಳ್ಳಾರಿಗೆ ಬಿಜೆಪಿ ಕೊಡುಗೆ ಎಂದು ಸಚಿವ ಶ್ರೀರಾಮುಲು ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಬಳ್ಳಾರಿಗೆ ಕಾಂಗ್ರೆಸ್ ಕೊಡುಗೆ ಏನು ಎಂಬ ಸಚಿವ ಶ್ರೀ ರಾಮುಲು ಅವರ ಹೇಳಿಕೆ ಟ್ವಿಟ್ಟರ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ.. 1977ರಲ್ಲಿ ವಿಜಯನಗರ ಉಕ್ಕಿನ ಕಾರ್ಖಾನೆಯನ್ನು ಸ್ಥಾಪನೆ ಮಾಡಿ, ಇಂದು ಸಾವಿರಾರು ಜನರಿಗೆ ಉದ್ಯೋಗ, ಆ ಮೂಲಕ ಅನ್ನಕ್ಕೆ ದಾರಿ ಆಗಿದ್ದರೆ ಅದಕ್ಕೆ ಶ್ರೀಮತಿ ಇಂದಿರಾ ಗಾಂಧಿ ಅವರು ಕಾರಣ. ಗಣಿ ಲೂಟಿ ಮಾಡಿದ್ದೇ ಬಳ್ಳಾರಿಗೆ ಬಿಜೆಪಿ ಕೊಡುಗೆ.

ಸೋನಿಯಾ ಗಾಂಧಿ ಅವರು 1999ರಲ್ಲಿ ಬಳ್ಳಾರಿಯಿಂದ ಸ್ಪರ್ಧೆ ಮಾಡಿ ಲೋಕಸಭಾ ಸದಸ್ಯರಾದ ಮೇಲೆ 3,300 ಕೋಟಿಯ ಕುಡತಿನಿ ವಿದ್ಯುತ್ ಯೋಜನೆ ಜಾರಿ ಮಾಡಿದ್ದರು. ಕಳೆದ ಎಂಟು ವರ್ಷಗಳಿಂದ ನರೇಂದ್ರ ಮೋದಿ ಸರ್ಕಾರ ಬಳ್ಳಾರಿಗೆ ಯಾವ ಕೊಡುಗೆ ನೀಡಿದೆ?
ಬಿಜೆಪಿ ನಾಯಕರು ಬಳ್ಳಾರಿಯಿಂದ ದೋಚಿದ್ದು ಬಿಟ್ಟರೆ, ಬಳ್ಳಾರಿಗೆ ನೀಡಿರುವ ಕೊಡುಗೆ ಶೂನ್ಯ. ಬೇಕಿದ್ದರೆ ಬಳ್ಳಾರಿಯ ಅಭಿವೃದ್ಧಿ ವಿಚಾರಗಳ ಬಗ್ಗೆ ಶ್ರೀರಾಮುಲು ಅವರು ನಮ್ಮ ಪಕ್ಷದ ಉಗ್ರಪ್ಪನವರ ಜೊತೆ ಬಹಿರಂಗ ಚರ್ಚೆಗೆ ಬರಲಿ.
ಬೆಲೆಯೇರಿಕೆ, ದ್ವೇಷರಾಜಕಾರಣ, ಸಾಮಾಜಿಕ ಅಶಾಂತಿಯಿಂದ ನೊಂದಿರುವ ಜನ ಪ್ರವಾಹದಂತೆ ಬಂದು ನಮ್ಮ ಪಾದಯಾತ್ರೆಯನ್ನು ಕೂಡಿಕೊಳ್ಳುತ್ತಿದ್ದಾರೆ.
ಮುಂಬರುವ ಚುನಾವಣೆಯಲ್ಲಿ @BJP4Karnataka ಪಕ್ಷದ 40% ಕಮಿಷನ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು "ಜನ ಸಂಕಲ್ಪ" ಮಾಡಿದ್ದಾರೆ. 8/12#BharatJodoYatra— Siddaramaiah (@siddaramaiah) October 15, 2022
ಬೆಲೆಯೇರಿಕೆ, ದ್ವೇಷರಾಜಕಾರಣ, ಸಾಮಾಜಿಕ ಅಶಾಂತಿಯಿಂದ ನೊಂದಿರುವ ಜನ ಪ್ರವಾಹದಂತೆ ಬಂದು ನಮ್ಮ ಪಾದಯಾತ್ರೆಯನ್ನು ಕೂಡಿಕೊಳ್ಳುತ್ತಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ 40% ಕಮಿಷನ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು “ಜನ ಸಂಕಲ್ಪ” ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.