ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವವನ್ನು ಪುನಃ ದೃಢಪಡಿಸಿದ್ದಾರೆ. ಅವರು ಹೇಳಿದ್ದು, “ಸಿದ್ದರಾಮಯ್ಯ ಅವರು ನಮ್ಮ ನಾಯಕ. ಅವರು ಎಲ್ಲಾ ಚುನಾವಣೆಗಳಿಗೆ ಬೇಕು. ಕಾಂಗ್ರೆಸ್ ಪಕ್ಷ ಎರಡು ಬಾರಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ದಿನ ಬೆಳಗಾದರೆ ಅವರ ಹೆಸರು ಎತ್ತಿಕೊಂಡು ದುರುಪಯೋಗ ಮಾಡುವುದು ಬೇಡ,” ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಇಂದು ಹೀಗೆ ಮಾತನಾಡಲು ಹಲವು ರೀತಿಯ ಕಾರಣಗಳು ಇವೆ ಎಂಬುದು ಬಲ್ಲ ಮೂಲಗಳ ಅಭಿಪ್ರಾಯ. ಸಿದ್ದರಾಮಯ್ಯ ಹೆಸರ ಮೇಲೆ ಒಂದಿಷ್ಟು ಸಚಿವರು ಬಂದೂಕಿಟ್ಟು ಸಿಎಂ ಕುರ್ಚಿಗೆ ಗುರಿಯಿಟ್ಟಿದ್ದರು.ಒಂದು ವೇಳೆ ವ್ಯತಿರಿಕ್ತ ಹೇಳಿಕೆ ನೀಡಿದರೆ ಮೂರನೇಯವರಿಗೆ ಲಾಭ ಆಗುತ್ತದೆ. ಇದರಿಂದ ರಾಜಕೀಯ ಬೆಳವಣಿಗೆಗಳ ಮೇಲೂ ಪರಿಣಾಮ ಆಗಬಹುದು. ಹೀಗಾಗಿ ಗೊಂದಲ ಏನು ಇಲ್ಲ ಎನ್ನುವ ಮೂಲಕವೇ ಡಿಕೆ ಶಿವಕುಮಾರ್ ಸರಿಯಾಗಿ ತಿರುಗೇಟು ನೀಡಿದ್ದಾರೆ.
ಈ ಹೇಳಿಕೆಯಿಂದ, ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ನಾಯಕತ್ವವನ್ನು ಬೆಂಬಲಿಸುತ್ತಿದ್ದಾರೆ ಮತ್ತು ಅವರ ಹೆಸರು ದುರುಪಯೋಗ ಮಾಡುವುದನ್ನು ವಿರೋಧಿಸುತ್ತಿದ್ದಾರೆ.