ಮಾಜಿ ಸಿ.ಎಂ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಬಂದಿದೆಯಂತೆ. ಈ ಬಗ್ಗೆ ಸ್ವತಃ ಸಿದ್ದರಾಮಯ್ಯನವರೇ ಹೇಳಿಕೊಂಡಿದ್ದಾರೆ. ಅದಕ್ಕಾಗಿ ತಮಗೆ ನೀಡಿರುವ ಜಡ್ಡ್ ಫ್ಲಸ್ ಭದ್ರತೆಯನ್ನು ಮುಂದುವರೆಸುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ನಾನು ರಾಜ್ಯಾದ್ಯಂತ ನಿರಂತರ ಪ್ರವಾಸ ಕೈಗೊಳ್ಳುತ್ತಿರುತ್ತೇನೆ. ಈ ಸಮಯದಲ್ಲಿ ಅಸಂಖ್ಯಾತ ಜನರನ್ನು ಭೇಟಿಯಾಗುತ್ತಿರುತ್ತೇನೆ. ಅಲ್ಲದೆ ನನಗೆ ಕೆಲವು ಜೀವ ಬೆದರಿಕೆ ಪತ್ರಗಳು ಬಂದಿರುತ್ತವೆ. ಹಾಗಾಗಿ ನನಗೆ ಪೊಲೀಸ್ ಮುಂಗಾವಲು, ಬೆಂಗಾವಲು ಪಡೆಯ ರಕ್ಷಣೆ ಅಗತ್ಯವಾಗಿದೆ. ನನಗೆ ಒದಗಿಸಲಾಗಿದ್ದ ಝಡ್ ಪ್ಲಸ್ ಶ್ರೇಣಿ ಭದ್ರತೆ ಮುಂದುವರೆಸಲು ಸಂಬಂಧಪಟ್ಟವರಿಗೆ ಸೂಚಿಸುವಂತೆ ಕೋರುತ್ತೇನೆ’ ಎಂದು ಸಿದ್ದರಾಮಯ್ಯ ಪತ್ರ ಬರೆಯುವ ಮೂಲಕ ಸಿಎಂಗೆ ಮನವಿ ಮಾಡಿದ್ದಾರೆ.









